AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅರೇ ಏನಿದು ವಿಚಿತ್ರ! ಜೀವಂತ ಹಾವನ್ನೇ ನುಂಗಿದ ಕಪ್ಪೆರಾಯ 

ಹಾವುಗಳು ಕಪ್ಪೆಗಳನ್ನ ತಿನ್ನೋದು ನೋಡಿರುತ್ತೀರಿ ಅಲ್ವಾ. ಆದ್ರೆ ಕಪ್ಪೆಗಳು ಯಾವತ್ತಾದ್ರೂ ಹಾವುಗಳನ್ನು ನುಂಗೋದು ನೋಡಿದ್ದೀರಾ? ಅರೇ ಆಹಾರ ಸರಪಳಿ ಪ್ರಕಾರ  ಕಪ್ಪೆಗಳು ಹಾವಿನ ಆಹಾರವೇ ಹೊರತು, ಹಾವು ಕಪ್ಪೆಗಳ ಆಹಾರವಲ್ಲ.  ಹಾಗಿರುವಾಗ ಈ ಪುಟ್ಟ ಗಾತ್ರದ ಕಪ್ಪೆ ದೈತ್ಯ ಗಾತ್ರದ ಹಾವನ್ನು ತಿನ್ನಲು ಸಾಧ್ಯವೇ ಅಂತ ನೀವು ಯೋಚಿಸುತ್ತಿದ್ದೀರಾ? ಹಾಗಿದ್ರೆ ಈ ವೈರಲ್ ವಿಡಿಯೋವನ್ನೊಮ್ಮೆ ನೋಡಿ.

Viral Video: ಅರೇ ಏನಿದು ವಿಚಿತ್ರ! ಜೀವಂತ ಹಾವನ್ನೇ ನುಂಗಿದ ಕಪ್ಪೆರಾಯ 
ಮಾಲಾಶ್ರೀ ಅಂಚನ್​
| Edited By: |

Updated on: Jan 01, 2024 | 4:18 PM

Share

ನಾವೆಲ್ಲರೂ ಶಾಲೆಗಳಲ್ಲಿ ಜೀವಶಾಸ್ತ್ರ ಪಾಠದಲ್ಲಿ ಆಹಾರ ಸರಪಳಿ ವಿಷಯದ ಬಗ್ಗೆ ಓದಿರುತ್ತೇವೆ. ಈ ಆಹಾರ ಸರಪಳಿಯ ಪ್ರಕಾರ ಹುಲ್ಲುಗಳನ್ನು ಕೀಟಗಳು ತಿಂದ್ರೆ, ಈ ಕೀಟಗಳು ಕಪ್ಪೆಗಳ ಆಹಾರವಾಗಿರುತ್ತವೆ.  ಇನ್ನೂ  ಈ ಕಪ್ಪೆಗಳು ಹಾವುಗಳಿಗೆ ಆಹಾರವಾಗಿದೆ.  ಹೀಗಿದ್ರೂ  ನಮ್ಮ  ಪ್ರಕೃತಿಯಲ್ಲಿ ಆಹಾರ ಸರಪಳಿಗಳಿಗೆ ವಿರುದ್ಧವಾಗಿರುವ ಆಶ್ಚರ್ಯಕರ ಸಂಗತಿಗಳು ನಡೆಯುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಕಪ್ಪೆಯೊಂದು ಜೀವಂತ ಹಾವನ್ನು ನುಂಗಿದೆ. ಅರೇ ಕಪ್ಪೆ ಹಾವುಗಳನ್ನು ತಿನ್ನುತ್ತದೆಯೇ?  ಅದು ಹೇಗೆ ಸಾಧ್ಯ?  ಆಹಾರ ಸರಪಳಿಯ ಪ್ರಕಾರ ಕಪ್ಪೆಗಳನ್ನು ಹಾವುಗಳು ತಿನ್ನುತ್ತವೆಯೇ ಹೊರತು ಕಪ್ಪೆಗಳು ಹಾವುಗಳನ್ನು ತಿನ್ನಲು ಸಾಧ್ಯವಿಲ್ಲ,  ಮೇಲಾಗಿ ಕಪ್ಪೆಗಳು ಗಾತ್ರದಲ್ಲಿ ಹಾವುಗಳಿಗಿಂತ ಚಿಕ್ಕದಾಗಿರುತ್ತವೆ, ಅದು ಹೇಗೆ ದೈತ್ಯ ಹಾವನ್ನು ತಿನ್ನಲು ಸಾಧ್ಯವಾಗುತ್ತೆ ಅಂತಾ ನೀವು ಯೋಚ್ನೆ ಮಾಡ್ತಿದ್ದೀರಾ. ಹಾಗಿದ್ರೆ ಈ  ವೈರಲ್ ವಿಡಿಯೋವನ್ನು ಒಮ್ಮೆ ನೋಡಿ.

@rizal.rayan_ ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆಹಾರ ಸರಪಳಿಗೆ ವಿರುದ್ಧವಾಗಿ ಕಪ್ಪೆಯೊಂದು ಜೀವಂತ ಹಾವನ್ನು ನುಂಗುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ:

View this post on Instagram

A post shared by RRCAKE (@rizal.rayan_)

ಈ ವೈರಲ್ ವಿಡಿಯೋದಲ್ಲಿ ಗಾತ್ರದಲ್ಲಿ ದೊಡ್ಡದಾಗಿರುವಂತಹ  ಕಪ್ಪೆಯೊಂದು ಜೀವಂತ ಹಾವನ್ನು ನಿಧಾನಕ್ಕೆ ನುಂಗುತ್ತಿರುತ್ತೆ, ಆ ಸಂದರ್ಭದಲ್ಲಿ ಆ ಹಾವು ಕಪ್ಪೆಯ ಬಾಯಿಯಿಂದ ಹೇಗಪ್ಪ ತಪ್ಪಿಸಿಕೊಳ್ಳುವುದು ಎಂದು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಬೆಕ್ಕಿನ ಮರಿಯ ಮೇಲೆ ಗಿಡುಗನ ದಾಳಿ; ಮುಂದೆನಾಯ್ತು ನೋಡಿ

ಡಿಸೆಂಬರ್ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼರಿವರ್ಸ್ ಫುಡ್ ಚೈನ್ʼ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕೊನೆಗೂ ಒಂದು ಕಪ್ಪೆಯಾದ್ರೂ ಹಾವಿನ ಮೇಲೆ ರಿವೇಂಜ್ ತೆಗೆದುಕೊಂಡಿತಲ್ವಾʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಕಪ್ಪೆ ಆಹಾರ ಸರಪಳಿಯ ನಿಯಮವನ್ನೇ ಮುರಿದಿದೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಹಲವರು ಈ ದೃಶ್ಯವನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್