Video Viral: ಮೂರಡಿ ಕುಳ್ಳನಿಗೆ ಈ ಬ್ಯೂಟಿ ಲವರ್​​, ದುಡ್ಡಿದ್ರೆ ಏನು ಬೇಕಾದ್ರೂ ಸಾಧ್ಯ ಎಂದ ನೆಟ್ಟಿಗರು

|

Updated on: Jul 19, 2024 | 3:07 PM

ಈ ವ್ಯಕ್ತಿಯ ಹೆಸರು ಗೇಬ್ರಿಯಲ್ ಪಿಮೆಂಟೆಲ್. ಈತ 3 ಅಡಿ ಎತ್ತರವಾದರೆ, ಈತನ ಪ್ರೇಯಸಿ 7 ಅಡಿ ಎತ್ತರವಿದ್ದಾಳೆ. ಸದ್ಯ ಈ ಜೋಡಿಯ ಡ್ಯಾನ್ಸ್​​​​ ಒಂದರ ವಿಡಿಯೋವೊಂದು ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.

Video Viral: ಮೂರಡಿ ಕುಳ್ಳನಿಗೆ ಈ ಬ್ಯೂಟಿ ಲವರ್​​, ದುಡ್ಡಿದ್ರೆ ಏನು ಬೇಕಾದ್ರೂ ಸಾಧ್ಯ ಎಂದ ನೆಟ್ಟಿಗರು
Gabriel Pimentel
Follow us on

ಪ್ರೀತಿಗೆ ಅಂದ ಚಂದ ಬೇಕಾಗಿಲ್ಲ ಮನಸು ಶುದ್ಧವಾಗಿರಬೇಕು ಅನ್ನೋ ಮಾತಿಗೆ. ಪ್ರೀತಿಯಲ್ಲಿ ಬಿದ್ದರೆ ಎತ್ತರ, ಗಿಡ್ಡ, ಕಪ್ಪು, ಬಿಳಿ ಎಂಬ ಭೇದವಿಲ್ಲದೆ ತಮಗೆ ಇಷ್ಟವಾದ ವ್ಯಕ್ತಿಯನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತಹ ಜೋಡಿಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ವ್ಯಕ್ತಿ ಕೇವಲ ಮೂರು ಅಡಿ ಉದ್ದವಿದ್ದು, ಆತನ ಪ್ರೇಯಸಿಯನ್ನು ನೋಡಿ ನೆಟ್ಟಿಗರು ಶಾಕ್​ ಆಗಿದ್ದಾರೆ. ಸದ್ಯ ಈ ಜೋಡಿಯ ಡ್ಯಾನ್ಸ್​​​ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

ಈ ವ್ಯಕ್ತಿಯ ಹೆಸರು ಗೇಬ್ರಿಯಲ್ ಪಿಮೆಂಟೆಲ್. ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ‘ಕಿಂಗ್’ ಎಂದೇ ಕರೆಯಲಾಗುತ್ತದೆ. ಅವನ ಪ್ರೇಯಸಿಯ ಹೆಸರು ಮೇರಿ ತೆಮಾರಾ. ಈ ಅದ್ಭುತ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಸದ್ಯ ಈ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್​​ ವಿಡಿಯೋ ಇ್ಲಲಿದೆ ನೋಡಿ:

ಇದನ್ನೂ ಓದಿ: ಪ್ರೇಯಸಿಯೊಂದಿಗೆ ಬೀಚ್​​ನಲ್ಲಿ ಎಂಜಾಯ್​ ಮಾಡುತ್ತಿರುವ ವೇಳೆ ಎಂಟ್ರಿ ಕೊಟ್ಟ ಗರ್ಭಿಣಿ ಪತ್ನಿ

ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಲೈಕ್ಸ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಣಕ್ಕಾಗಿ ಈ ಯುವತಿ ಗೇಬ್ರಿಯಲ್ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಗೇಬ್ರಿಯಲ್ ಅದೃಷ್ಟಶಾಲಿ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ