ದೆವ್ವ ಭೂತಗಳು, ಪ್ರೇತಾತ್ಮಗಳು ಇವೆ ಎಂದು ಕೆಲವರು ನಂಬಿದರೆ, ಇನ್ನು ಕೆಲವರು ಇಲ್ಲ ಎಂದೇ ವಾದಿಸುತ್ತಾರೆ. ಆದರೆ ಒಳಗೊಳಗೆ ಭಯ ಅಂತೂ ಎಲ್ಲರಲ್ಲೂ ಇದ್ದೆ ಇರುತ್ತದೆ. ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳು ದೆವ್ವಗಳು ಇದೆ ಎನ್ನುವುದಕ್ಕೆ ಸಾಕ್ಷಿಯನ್ನು ಒದಗಿಸುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಮುಂಜಾನೆಯ ವೇಳೆಯಲ್ಲಿ ಕಚೇರಿವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ವೊಬ್ಬರು ಅದೃಶ್ಯವಾಗಿರುವ ವ್ಯಕ್ತಿಯೊಂದಿಗೆ ಸಂವಹನ ನಡೆಸುತ್ತಿರುವ ವಿಚಿತ್ರ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋವೊಂದನ್ನು ಸಿಸಿಟಿವಿ ಈಡಿಯಟ್ಸ್ ಹೆಸರಿನ ಎಕ್ಸ್ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “ಸೆಕ್ಯೂರಿಟಿ ಗಾರ್ಡ್ ಅದೃಶ್ಯ ವ್ಯಕ್ತಿಯನ್ನು ಬೆಳಗ್ಗೆ 3 ಗಂಟೆಗೆ ಕಚೇರಿ ಒಳಗೆ ಸ್ವಾಗತಿಸುತ್ತಾರೆ” ಎಂದು ಬರೆಯಲಾಗಿದೆ. ಈ ವಿಡಿಯೋದಲ್ಲಿ ಬೆಳಗ್ಗೆ 3 ಗಂಟೆಗೆ ಆಫೀಸಿನ ಬಾಗಿಲು ಸ್ವಯಂಚಾಲಿತವಾಗಿ ತೆರೆಯುತ್ತದೆ.
Security guard welcomes invisible guest at 3am pic.twitter.com/xpbTN6fpsA
— CCTV IDIOTS (@cctvidiots) August 5, 2024
ಆ ತಕ್ಷಣವೇ ಕುರ್ಚಿಯ ಮೇಲೆ ಕುಳಿತಿರುವ ಸಿಬ್ಬಂದಿ ತಕ್ಷಣವೇ ಮೇಲಕ್ಕೆ ಎದ್ದು ಕಾಣದ ಸಂದರ್ಶಕರನ್ನು ಒಳಗೆ ಸ್ವಾಗತಿಸಿ ಆ ಬಳಿಕ ಭದ್ರತಾ ತಪಾಸಣೆಯನ್ನು ಮಾಡಲಾಗುವುದನ್ನು ಕಾಣಬಹುದು. ಆ ಬಳಿಕ ಸಿಬ್ಬಂದಿಯು ಗಾಲಿ ಕುರ್ಚಿಯನ್ನು ಕೂರಲು ಕೊಟ್ಟು ಆ ಅದೃಶ್ಯವಾದ ವ್ಯಕ್ತಿಯೊಂದಿಗೆ ಮಾತನಾಡುವುದನ್ನು ನೋಡಬಹುದು. ಈ ವಿಡಿಯೋವನ್ನು ನೋಡುತ್ತಿದ್ದಂತೆ ಒಂದು ಕ್ಷಣ ಎದೆ ಝಲ್ ಎನ್ನುವಂತಿದೆ.
ಇದನ್ನೂ ಓದಿ: ರೈಲ್ವೆ ಸ್ಟೇಷನ್ ಬ್ರಿಡ್ಜ್‌ನಲ್ಲಿ ನಿಂತು ಸಾವರ್ಜನಿಕರ ಎದುರೇ ಪ್ರೇಮಿಗಳ ಮುತ್ತಿನಾಟ
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ನೆಟ್ಟಿಗನೊಬ್ಬರು ಇದು ನಿಜವಾಗಿಯೂ ಭ್ರಮೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಆ ಸೆಕ್ಯೂರಿಟಿ ಗಾರ್ಡ್ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ” ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ