Video: ರೈಲ್ವೆ ಸ್ಟೇಷನ್ ಬ್ರಿಡ್ಜ್‌ನಲ್ಲಿ ನಿಂತು ಸಾವರ್ಜನಿಕರ ಎದುರೇ ಪ್ರೇಮಿಗಳ ಮುತ್ತಿನಾಟ
ಪ್ರೀತಿ ಮಾಡೋದು ತಪ್ಪಲ್ಲ ಅಂತ ಹೇಳ್ತಾರೆ. ಆದ್ರೆ ಪ್ರೀತಿ-ಪ್ರೇಮದ ಹೆಸರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವುದು ತಪ್ಪು ತಾನೆ. ಅದೇ ರೀತಿ ಇಲ್ಲೊಂದು ಜೋಡಿ ಕೂಡಾ ರೈಲ್ವೆ ಸ್ಟೇಷನ್ ಬ್ರಿಡ್ಜ್ ಮೇಲೆ ನಿಂತು ಸಾರ್ವಜನಿಕರ ಎದುರೇ ಪರಸ್ಪರ ತಬ್ಬಿಕೊಂಡು, ಚುಂಬಿಸುತ್ತಾ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರೇಮಿಗಳ ಈ ಅತಿರೇಕದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತಿನ ಪರಿಜ್ಞಾನವೇ ಇರೋದಿಲ್ಲ ಎಂದು ಹೇಳ್ತಾರೆ. ಇದೇ ರೀತಿ ಜಗತ್ತಿನ ಪರಿಜ್ಞಾನವೇ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ತೋರುವ ಹುಚ್ಚಾಟಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಲಿಸುತ್ತಿರುವ ರೈಲಿನಲ್ಲಿ ರೊಮ್ಯಾನ್ಸ್ ಮಾಡಿದ, ಕಾಲೇಜ್ ಕ್ಯಾಂಪಸ್‌ನಲ್ಲಿ ಮೈ ಮರೆತು ಅಸಭ್ಯವಾಗಿ ವರ್ತಿಸಿದ ಕೆಲವಷ್ಟು ವಿಡಿಯೋಗಳು ಈ ಹಿಂದೆಯೂ ವೈರಲ್ ಆಗಿದ್ದವು. ಇದೀಗ ಇಂತಹದ್ದೇ ಪ್ರೇಮಿಗಳಿಬ್ಬರ ಅತಿರೇಕದ ವರ್ತನೆಯ ವಿಡಿಯೋವೊಂದು ವೈರಲ್ ಆಗಿದ್ದು, ರೈಲ್ವೆ ಸ್ಟೇಷನ್ ಬ್ರಿಡ್ಜ್ ಮೇಲೆ ನಿಂತು ಜೋಡಿಯೊಂದು ಲೋಕದ ಅರಿವೇ ಇಲ್ಲದೆ ಪರಸ್ಪರ ತಬ್ಬಿಕೊಂಡು ಚುಂಬನ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಪ್ರೇಮಿಗಳ ಈ ಅತಿರೇಕದ ವರ್ತನೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು ಶುಭಾಂಗಿ ಪಂಡಿತ್ (Babymishra_) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ರೈಲ್ವೆ ನಿಲ್ದಾಣದಲ್ಲಿ ಪ್ರೇಮಿಗಳ ಕಿಸ್ಸಿಂಗ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ರೈಲ್ವೇ ಸ್ಟೇಷನ್ ಬ್ರಿಡ್ಜ್ ಮೇಲೆ ನಿಂತು ಯಾರಿಗೂ ಕ್ಯಾರೇ ಅನ್ನದೆ ಸಾರ್ವಜನಿಕರ ಎದುರೇ ಪರಸ್ಪರ ತಬ್ಬಿಕೊಂಡು ಚುಂಬಿಸುತ್ತಿರುವ ದೃಶ್ಯವನ್ನು ಕಾಣಬಹುದು. ನಂತರ ಯಾರೋ ಅಲ್ಲಿಗೆ ಬಂದು ಸಾರ್ವಜನಿಕ ಸ್ಥಳದಲ್ಲಿ ದುರ್ವರ್ತನೆ ತೋರಿದ್ದಕ್ಕೆ ಅವರಿಬ್ಬರಿಗೂ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಅಟೆಂಡೆನ್ಸ್ ಬೇಕಂದ್ರೆ ಕೆನ್ನೆಗೊಂದು ಕಿಸ್ ಕೊಡ್ಬೇಕು… ಶಿಕ್ಷಕಿಯಿಂದ ಸಿಹಿ ಮುತ್ತಿಗೆ ಬೇಡಿಕೆಯಿಟ್ಟ ಹೆಡ್ ಮಾಸ್ಟರ್
ವೈರಲ್ ವಿಡಿಯೋ ಇಲ್ಲಿದೆ ನೊಡಿ:
रेलवे स्टेशन पर रील के बाद पेश है, किसिंग छिछोरागिरी
ये लोग समाज की गंदगी हैं समाज में गंद फैला रहे हैं
पुलिस भी क्या करे, ये हवसीन औरतें आन्दोलन करने बैठ जाती हैं
मुंबई रेलवे स्टेशन के पुल पर चमगादड़ें लटकी मिलीं
पुलिस प्रशासन से अपील है इनके खिलाफ कार्रवाई करो pic.twitter.com/FVIYwucKKq
— Shubhangi Pandit (@Babymishra_) August 9, 2024
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹವರಿಗೆ ಕಂಡಕಂಡಲ್ಲಿ ಚಪ್ಪಲಿಯಲ್ಲಿ ಬಾರಿಸಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಸಮಾಜ ಎತ್ತ ಸಾಗುತ್ತಿದೆʼ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಅನೇಕರು ಇವರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ