Video: ಅಟೆಂಡೆನ್ಸ್‌ ಬೇಕಂದ್ರೆ ಕೆನ್ನೆಗೊಂದು ಕಿಸ್ ಕೊಡ್ಬೇಕು…‌ ಶಿಕ್ಷಕಿಯಿಂದ ಸಿಹಿ ಮುತ್ತಿಗೆ ಬೇಡಿಕೆಯಿಟ್ಟ ಹೆಡ್‌ ಮಾಸ್ಟರ್‌

ಕೆಲ ದಿನಗಳ ಹಿಂದೆ ಶಾಲಾ ಕೊಠಡಿಯಲ್ಲಿಯೇ ಲೇಡಿ ಟೀಚರ್‌ ಜೊತೆ ಶಾಲೆಯ ಪ್ರಿನ್ಸಿಪಾಲ್‌ ರೊಮ್ಯಾನ್ಸ್‌ ಮಾಡಿದಂತಹ ಸುದ್ದಿಯೊಂದು ಭಾರೀ ವೈರಲ್‌ ಆಗಿತ್ತು. ಇದೀಗ ಅಂತಹದ್ದೇ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಹಾಜರಾತಿ ಬೇಕೆಂದರೆ ನನ್ನ ಕೆನ್ನೆಗೊಂದು ಸಿಹಿ ಮುತ್ತನ್ನು ಕೊಡಬೇಕು ಎಂದು ಹಾಜರಾತಿಗೆ ಬದಲಾಗಿ ಲಜ್ಜೆಗೆಟ್ಟ ಪ್ರಿನ್ಸಿಪಾಲ್‌ ಲೇಡಿ ಟೀಚರ್‌ ಒಬ್ಬರಿಂದ ಮುತ್ತನ್ನು ಕೇಳಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಮುಖ್ಯ ಶಿಕ್ಷಕನ ಈ ನಾಚಿಕೆಗೇಡಿನ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Video: ಅಟೆಂಡೆನ್ಸ್‌ ಬೇಕಂದ್ರೆ ಕೆನ್ನೆಗೊಂದು ಕಿಸ್ ಕೊಡ್ಬೇಕು...‌ ಶಿಕ್ಷಕಿಯಿಂದ ಸಿಹಿ ಮುತ್ತಿಗೆ ಬೇಡಿಕೆಯಿಟ್ಟ ಹೆಡ್‌ ಮಾಸ್ಟರ್‌
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 09, 2024 | 2:13 PM

ಶಿಕ್ಷಕರಾದವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ದೀಪವಾಗಬೇಕು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಬ್ದಾರಿ ಶಿಕ್ಷಕರದ್ದು. ಆದರೆ ಇಲ್ಲೊಬ್ಬ ಶಿಕ್ಷಕ ತಾನು ಎಲ್ಲಿದ್ದೇನೆ, ತನ್ನ ಕತ್ಯವ್ಯವೇನು, ತನ್ನ ವಯಸ್ಸೇನು ಎಂಬುವುದನ್ನೇ ಮರೆತು ಲೇಡಿ ಟೀಚರ್‌ ಒಬ್ಬರ ಜೊತೆ ಫ್ಲರ್ಟ್‌ ಮಾಡಿದ್ದಾರೆ. ಹೌದು ಹಾಜರಾತಿ ಕೊಡಿ ಎಂದು ಕೇಳಲು ಬಂದ ಶಿಕ್ಷಕಿಯ ಜೊತೆಗೆ ಮಾತನಾಡುತ್ತಾ, ಹಾಜರಾತಿ ಬೇಕೆಂದರೆ ನನ್ನ ಕೆನ್ನೆಗೊಂದು ಸಿಹಿ ಮುತ್ತನ್ನು ಕೊಡಬೇಕು ಎಂದು ಕೇಳಿದ್ದಾರೆ. ಮುಖ್ಯ ಶಿಕ್ಷಕನ ಈ ನಾಚಿಕೆಗೇಡಿನ ವರ್ತನೆಯ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದಿದ್ದು, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಹ ಶಿಕ್ಷಕಿಯಿಂದ ಮುತ್ತಿಗಾಗಿ ಬೇಡಿಕೆಯಿಟ್ಟಿದ್ದಾರೆ. ಹೌದು ಅಟೆಂಡೆನ್ಸ್‌ಗೆ ಪ್ರತಿಯಾಗಿ ಪ್ರಿನ್ಸಿಪಾಲ್‌ ಮಹಿಳಾ ಶಿಕ್ಷಕಿಯಿಂದ ಕೆನ್ನೆಗೊಂದು ಮುತ್ತು ಕೊಡುವಂತೆ ಕೇಳಿದ್ದಾರೆ. ಮುಖ್ಯ ಶಿಕ್ಷಕನ ಈ ನಾಚಿಕೆಗೇಡಿನ ಕೆಲಸವನ್ನು ಅವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಡಿಐಒಎಸ್‌ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಮಮತ ತ್ರಿಪಾಠಿ (Mamtha Tripathi) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಅಟೆಂಡೆನ್ಸ್‌ ಬೇಕೆಂದು ಕೇಳಿ ಬಂದ ಲೇಡಿ ಟೀಚರ್‌ ಜೊತೆ ಶಾಲೆಯ ಹೆಡ್‌ ಮಾಸ್ಟರ್ ಫ್ಲರ್ಟ್‌ ಮಾಡುತ್ತಾ ಕುಳಿತಿರುವುದನ್ನು ಕಾಣಬಹುದು. ಪ್ರಾಂಶುಪಾಲರ ಬಳಿ ಬಂದ ಲೇಡಿ ಟೀಚರ್‌ ನನ್ಗೆ ಅಟೆಂಡೆಸ್‌ ಕೊಡಿ ಸರ್‌ ಎಂದು ಕೇಳುತ್ತಾರೆ. ಆಗ ಮುಖ್ಯ ಶಿಕ್ಷಕ ಹಾಜರಾತಿ ಬೇಕೆಂದರೆ ನನ್ನದೊಂದು ಷರತ್ತು ಇದೆ. ಅದಕ್ಕೆ ಒಪ್ಪಿಗೆ ನೀಡಿದರೆ ಫುಲ್‌ ಅಟೆಂಡೆಸ್‌ ಕೊಡುವೆ ಎಂದು ಹೇಳುತ್ತಾರೆ. ಏನದು ಕಂಡೀಷನ್‌ ಎಂದು ಕೇಳಿದಾಗ ಪ್ರಿನ್ಸಿಪಾಲ್‌ ತನ್ನ ಕೆನ್ನೆಯ ಮೇಲೆ ಕೈಯಿಟ್ಟು ಮುತ್ತು ಕೊಡಬೇಕೆಂದು ಕೇಳುತ್ತಾರೆ. ಈ ಕಂಡೀಷನ್‌ಗೆ ಮಹಿಳಾ ಶಿಕ್ಷಕಿ ಒಲ್ಲೆ ಎಂದಿದ್ದಾರೆ.

ಇದನ್ನೂ ಓದಿ:  ಭಯ-ಭಕ್ತಿ ಇಲ್ಲದ ಜನ… ನಾಗರ ಪಂಚಮಿಯಂದು ನಾಗರಾಜನ ಮುಂದೆ ಕೇಕ್‌ ಕಟ್ ಮಾಡಿ ಯುವಕರ ಹುಚ್ಚಾಟ

ಆಗಸ್ಟ್‌ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ಅಸಹ್ಯ ಕೃತ್ಯಕ್ಕೆ ಆ ಶಿಕ್ಷಕಿ ಪ್ರತಿಕ್ರಿಯೆ ನೀಡುವ ಬದಲು ಆತನ ಕೆನ್ನೆಗೆ ಬಾರಿಸಬೇಕಿತ್ತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹ ಲಜ್ಜೆಗೆಟ್ಟ ಶಿಕ್ಷಕನನ್ನು ಕೂಡಲೇ ವಜಾ ಗೊಳಿಸಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:12 pm, Fri, 9 August 24

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ