ಜಮ್ಮು&ಕಾಶ್ಮೀರ: ಸಾಮಾಜಿಕ ಜಾಲತಾಣಗಳು ಕೇವಲ ತಮಾಷೆ ವಿಡಿಯೋಗಳಿಗೆ ವೇದಿಕೆಯಾಗಿ ಉಳಿಯದೆ ಸಾಮಾಜದ ಉತ್ತಮ ಕೆಲಸಗಳಿಗೂ ಪ್ಲಾಟ್ಫಾರ್ಮ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳು ಕೂಡ ತಮ್ಮ ಕ್ರಿಯೇವಿಟಿಯನ್ನು ಬಳಸಿಕೊಂಡು ಸಮಾಜಿಕ ಕೆಲಸಗಳಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ಕಾಶ್ಮೀರದ ಪುಟ್ಟ ಬಾಲಕಿಯೊಬ್ಬಳು ತನ್ನೂರಿನ ರಸ್ತೆಯ ದುಸ್ಥಿತಿಯ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾಳೆ. ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸುರಿದ ಹಿಮ ಮಳೆಗೆ ರಸ್ತೆಗಳು ಹದಗೆಟ್ಟಿವೆ. ರಸ್ತೆ ಮಧ್ಯೆ ಗುಂಡಿಗಳಾಗಿ ನೀರು ನಿಂತು ಜನ ಓಡಾಡಲೂ ಸಾಧ್ಯವಾಗದೆ ಕಷ್ಟಪಡುತ್ತಿದ್ದಾರೆ. ಈ ನಡುವೆ ಬಾಲಕಿಯೊಬ್ಬಳು ರಿಪೋರ್ಟರ್ ಆಗುವ ಮೂಲಕ ತಮ್ಮ ಊರಿನ ರಸ್ತೆಯ ದುಸ್ಥಿತಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಸದ್ಯ ವಿಡಿಯೋ ಸಖತ್ ವೈರಲ್ ಆಗಿದೆ. ಗುಲಾಬಿ ಬಣ್ಣದ ಜಾಕೆಟ್ ಧರಿಸಿದ ಪುಟ್ಟ ಬಾಲಕಿಯೊಬ್ಬಳು ಮೈಕ್ ಹಿಡಿದು ರಸ್ತೆ ಹದಗೆಟ್ಟ ಬಗ್ಗೆ ದೂರಿದ್ದಾಳೆ.
ವಿಡಿಯೋದಲ್ಲಿ ಬಾಲಕಿ ಹಾಳಾದ ರಸ್ತೆಯನ್ನು ತೋರಿಸಿ ಮಾತನಾಡಿ ಇಷ್ಟು ಕೆಟ್ಟ ರಸ್ತೆ ಇರುವುದರಿಂದ ಸಂಬಂಧಿಕರು ಮನೆಗೆ ಬರುತ್ತಿಲ್ಲ, ನಮಗೂ ನಡೆದಾಡಲು ಕಷ್ಟವಾಗುತ್ತಿದೆ. ನೋಡಿ ಎಷ್ಟು ಕಸ ಮತ್ತು ಕೆಸರು ತುಂಬಿಕೊಂಡಿದೆ ಎಂದು ತೋರಿಸುತ್ತಾಳೆ. 2 ನಿಮಿಷದವರೆಗೆ ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಕೆಸರು ತುಂಬಿದ ರಸ್ತೆಯಲ್ಲಿ ಓಡಾಡಿ ರಸ್ತೆ ಹದಗೆಟ್ಟ ಬಗ್ಗೆ ಅಲ್ಲಿಯ ಜನರು ಸಂಚರಿಸಲು ಕಷ್ಟಪಡುತ್ತಿರುವ ಬಗ್ಗೆ ವಿವರಿಸಿದ್ದಾಳೆ. ಅಲ್ಲದೇ ಅಲ್ಲಿ ಹಾಕಿರುವ ಕಸಗಳನ್ನು ನೋಡಿ ಕೋಪಗೊಂಡು ಜನರೂ ಕೂಡ ಎಷ್ಟು ಕೊಳಕು ಮನಸ್ಥಿತಿಯವರಾಗಿದ್ದಾರೆ ಎಂದು ಕೂಗಿದ್ದಾಳೆ.
Meet Youngest reporter from the #Kashmir Valley. pic.twitter.com/4H6mYkiDiI
— Sajid Yousuf Shah (@TheSkandar) January 9, 2022
ವಿಡಿಯೋದ ಕೊನೆಯಲ್ಲಿ ತನ್ನ ವಿಡಿಯೋವನ್ನು ಲೈಕ್, ಶೇರ್ ಮಾಡಿ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡುವಂತೆ ಕೇಳಿದ್ದಾಳೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಒಂದು ಮಿಲಿಯನ್ಗೂ ಅಧಿಕ ವೀಕ್ಷಣೆಗೊಂಡ ವಿಡಿಯೋ ಲಕ್ಷಾಂತರ ಬಾರಿ ರೀ ಶೇರ್ ಆಗಿದೆ.
ಈ ಹಿಂದೆ ಪ್ರಧಾನಿ ಮೋದಿಯವರನ್ನು ಉಲ್ಲೇಖಸಿ ಬಾಲಕಿಯೊಬ್ಬಳು ಶಾಲೆಯಲ್ಲಿ ಹೆಚ್ಚು ಹೋಮ್ ವರ್ಕ್ ಕೊಡುತ್ತಾರೆ ಎಂದು ದೂರಿದ್ದಳು. ಇದೀಗ ಬಾಲಕಿ ಸರ್ಕಾರವನ್ನು ಎಚ್ಚರಿಸುವ ರೀತಿ ವಿಡಿಯೋ ಮಾಡಿ ತನ್ನ ಊರಿನ ಪರಿಸ್ಥಿಯನ್ನು ತೋರಿಸಿದ್ದಾಳೆ.
ಇದನ್ನೂ ಓದಿ:
Published On - 12:08 pm, Tue, 11 January 22