Viral Video: ಆನೆಗಳೊಂದಿಗೆ ಹುಡುಗಿಯ ಸಕತ್ ಡಾನ್ಸ್; ವೈರಲ್​ ಆಯ್ತು ವಿಡಿಯೊ

ಕೆಲವರಿಗೆ ನೃತ್ಯ ಎಂದರೆ ಬಲು ಇಷ್ಟ. ಖುಷಿಯಾದಾಗಲೆಲ್ಲಾ ನೃತ್ಯ ಮಾಡುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋ ಕೂಡಾ ಅಂಥದ್ದೇ! ಹುಡುಗಿ ಪ್ರಾಣಿಗಳ ಎದುರು ನಿಂತು ನೃತ್ಯ ಮಾಡಿದ್ದಾಳೆ.

Viral Video: ಆನೆಗಳೊಂದಿಗೆ ಹುಡುಗಿಯ ಸಕತ್ ಡಾನ್ಸ್; ವೈರಲ್​ ಆಯ್ತು ವಿಡಿಯೊ
ಆನೆಗಳ ಜತೆ ಹುಡುಗಿ ನೃತ್ಯ ಮಾಡುತ್ತಿರುವ ದೃಶ್ಯ
Edited By:

Updated on: Oct 03, 2021 | 3:12 PM

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅದೆಷ್ಟೋ ದೃಶ್ಯಗಳು ಹೆಚ್ಚು ಮನಗೆಲ್ಲುತ್ತವೆ. ಒಮ್ಮೆ ನೋಡಿದ ಕೆಲವು ವಿಡಿಯೋಗಳನ್ನು ಮತ್ತೆ ಮತ್ತೆ ನೋಡೋಣ ಅನ್ನುವಷ್ಟು ಇಷ್ಟವಾಗುತ್ತವೆ. ಅದರಲ್ಲಿಯೂ ಪ್ರಾಣಿಗಳ ತುಂಟಾಟಗಳ ದೃಶ್ಯಗಳು ನೆಟ್ಟಿಗರ ಮನ ಗೆಲ್ಲುತ್ತವೆ. ಅಂಥಹುದೇ ವಿಡಿಯೋ ಕೂಡಾ ಇದಾಗಿದ್ದು, ಹುಡುಗಿಯೋರ್ವಳು ಆನೆಗಳೊಂದಿಗೆ ನೃತ್ಯ ಮಾಡಿದ್ದಾಳೆ. ಹುಡುಗಿಯನ್ನು ಅನುಕರಿಸುತ್ತಾ ದೈತ್ಯ ಆನೆಗಳೂ ಸಹ ನೃತ್ಯ ಮಾಡುತ್ತಿವೆ.

ಕೆಲವರಿಗೆ ನೃತ್ಯ ಎಂದರೆ ಬಲು ಇಷ್ಟ. ಖುಷಿಯಾದಾಗಲೆಲ್ಲಾ ನೃತ್ಯ ಮಾಡುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋ ಕೂಡಾ ಅಂಥದ್ದೇ! ಹುಡುಗಿ ಪ್ರಾಣಿಗಳ ಎದುರು ನಿಂತು ನೃತ್ಯ ಮಾಡಿದ್ದಾಳೆ. ಅದನ್ನು ನೋಡುತ್ತಿರುವ ಆನೆಗಳೂ ಸಹ ಅವಳಂತೆಯೇ ನೃತ್ಯ ಮಾಡಲು ಪ್ರಯತ್ನಿಸುತ್ತಿವೆ. ಆಶ್ಚರ್ಯವೆಂದರೆ ಹುಡುಗಿಯ ಹೆಜ್ಜೆಯನ್ನು ಅನುಕರಿಸುತ್ತಾ ಆನೆಗಳೂ ಸಹ ಹೆಜ್ಜೆ ಹಾಕಿವೆ. ಈ ವಿಡಿಯೋ ಇದೀಗ ಫುಲ್ ಆಗಿದೆ.

ಕೆಲವೇ ಸೆಕೆಂಡುಗಳಿರುವ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೋವನ್ನು ತುಂಬಾ ಇಷ್ಪಟ್ಟಿದ್ದಾರೆ. ಸುಮಾರು 38 ಸಾವಿರಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ವಿಡಿಯೋ ಗಳಿಸಿಕೊಂಡಿದೆ. ಆನೆಗಳು ಮುದ್ದಾಗಿವೆ. ಹುಡುಗಿಯನ್ನು ನೋಡುತ್ತ ಅವೂ ಸಹ ನೃತ್ಯ ಮಾಡುತ್ತಿವೆ ಎಂದು ಓರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಜೆಸಿಬಿ ಏರಿ ಸವಾರಿ ಹೊರಟ ಜೋಡಿ; ನೆಟ್ಟಿಗರ ಮನಗೆದ್ದ ಈ ವಿಡಿಯೊ ನೋಡಿ

Viral Video: ಬಾಲಕಿಯ ತೊಡೆಯ ಮೇಲೆ ನಿದ್ರಿಸುತ್ತಿರುವ 20 ಅಡಿ ಉದ್ದದ ಹೆಬ್ಬಾವು; ವಿಡಿಯೋ ನೋಡಿ ದಂಗಾದ ನೆಟ್ಟಿಗರು

Published On - 3:08 pm, Sun, 3 October 21