Viral Video : ಪಕ್ಷಿಗಳು ಬಹಳ ಸೂಕ್ಷ್ಮ ಮತ್ತು ಅಷ್ಟೇ ಎಚ್ಚರ. ಮುಟ್ಟಲು ಹೋಗುವುದು ದೂರ ಉಳಿಯಿತು, ಒಂದು ಹೆಜ್ಜೆ ಚಲಿಸುವ ಹೊತ್ತಿಗೆ ಪಟ್ಟನೆ ಹಾರಿಹೋಗಿಬಿಡುತ್ತವೆ. ಆದರೆ ಸಾಕಿದ ಪಕ್ಷಿಯಾದರೆ ಸದಾ ನಿಮ್ಮ ಬೆನ್ನಮೇಲೋ, ತಲೆಯ ಮೇಲೋ, ಮುಂಗೈ, ಅಂಗೈಯ್ಯೊಳಗೋ ಕುಳಿತು ನಿಮ್ಮೊಂದಿಗೆ ಸಂವಹನ ನಡೆಸುತ್ತವೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿರುವ ಈ ಪಕ್ಷಿ ಸಾಕಿದ್ದಲ್ಲ. ತಾನಾಗಿಯೇ ಬಂದು ಹೀಗೆ ಈ ಹುಡುಗಿಯ ಕೈಯ್ಯೊಳಗೆ ಕುಳಿತಿದೆ. ಚೆಂದ ಹಾಡುವ ಆಕೆಯನ್ನೇ ನೋಡುತ್ತ ಹಾಡನ್ನು ಆಲಿಸುತ್ತ ಮೈಮರೆತಿದೆ.
ಗೇಬಲ್ ಸ್ವಾನ್ಲುಂಡ್ ಎಂಬ ಇನ್ಸ್ಟಾಗ್ರಾಂ ಪುಟವನ್ನು ಈಕೆಯ ತಾಯಿ ನಿರ್ವಹಿಸುತ್ತಾಳೆ. ಈ ಪುಟದಲ್ಲಿಯೇ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಈ ಹಕ್ಕಿ ಆಕೆ ಹಾಡುವುದನ್ನು ಎಂಥ ಚಿತ್ತ ಕೊಟ್ಟು ಕೇಳಿಸಿಕೊಳ್ಳುತ್ತದೆಯಲ್ಲ? ನವೆಂಬರ್ 11ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 6.3 ಮಿಲಿಯನ್ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 6 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.
ಬಹಳ ಮುದ್ದಾಗಿದೆ ಈ ಹುಡುಗಿ ಹಾಡು ಮತ್ತು ಹಕ್ಕಿ ಎನ್ನುತ್ತಿದ್ದಾರೆ ನೆಟ್ಟಿಗರು. ನಿಮ್ಮ ಧ್ವನಿಯೇ ಅದ್ಭುತವಾಗಿದೆ ಜೊತೆಗೆ ಆ ಪಕ್ಷಿಯೂ. ಏನೋ ಕಥೆ ಹೇಳುತ್ತಿದ್ದೀರೇನೋ ಎಂಬಂತೆ ನೋಡುತ್ತಿದೆ ಎಂದಿದ್ದಾರೆ ಒಬ್ಬರು. ಡಿಸ್ನಿ ಸಿನೆಮಾದ ದೃಶ್ಯದಂತೆ ಕಾಣುತ್ತಿದೆ ಎಂದಿದ್ದಾರೆ ಹಲವರು. ಈ ಹುಡುಗಿ ದೇವತೆಯಂತೆ ಕಾಣುತ್ತಿದ್ದಾಳೆ ಎಂದಿದ್ದಾರೆ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ