Women’s Cricket World Cup: ಇಂದಿನಿಂದ ಐಸಿಸಿ ಮಹಿಳಾ ಕ್ರಿಕೆಟ್​ ವಿಶ್ವಕಪ್ ​ ಆರಂಭ: ವಿಶೇಷ ಡೂಡಲ್​ ರಚಿಸಿದ ಗೂಗಲ್​

Google Doodle Today: ಇಂದಿನಿಂದ ಐಸಿಸಿ ಮಹಿಳಾ ವಿಶ್ವಕಪ್​ 2022 ಆರಂಭ. ನ್ಯೂಜಿಲ್ಯಾಂಡ್​ನ ಬೇ ಓವಲ್ ಕ್ರೀಡಾಂಗಣದಲ್ಲಿ ಈ ಬಾರಿಯ ಮಹಿಳಾ ವಿಶ್ವಕಪ್​ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗೂಗಲ್​ ವಿಶೇಷ್​ ಡೂಡಲ್​ ರಚಿಸಿ ಮಹಿಳಾ ವಿಶ್ವ ಕಪ್​ ಆರಂಭಕ್ಕೆ ಶುಭಕೋರಿದೆ

Women's Cricket World Cup: ಇಂದಿನಿಂದ ಐಸಿಸಿ ಮಹಿಳಾ ಕ್ರಿಕೆಟ್​ ವಿಶ್ವಕಪ್ ​ ಆರಂಭ: ವಿಶೇಷ ಡೂಡಲ್​ ರಚಿಸಿದ ಗೂಗಲ್​
ಗೂಗಲ್​ ಡೂಡಲ್​
Follow us
TV9 Web
| Updated By: Pavitra Bhat Jigalemane

Updated on:Mar 04, 2022 | 10:56 AM

ಇಂದಿನಿಂದ ಐಸಿಸಿ ಮಹಿಳಾ ವಿಶ್ವಕಪ್​ 2022 (Women’s Cricket World Cup 2022) ಆರಂಭ. ನ್ಯೂಜಿಲ್ಯಾಂಡ್​ ( New Zealand)ನ ಬೇ ಓವಲ್ ಕ್ರೀಡಾಂಗಣ ( Bay Oval Stadium) ದಲ್ಲಿ ಈ ಬಾರಿಯ ಮಹಿಳಾ ವಿಶ್ವಕಪ್​ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗೂಗಲ್​ ವಿಶೇಷ್​ ಡೂಡಲ್​ ರಚಿಸಿ ಮಹಿಳಾ ವಿಶ್ವ ಕಪ್​ ಆರಂಭಕ್ಕೆ ಶುಭಕೋರಿದೆ. 12ನೇ ಆವೃತ್ತಿಯ ಮಹಿಳಾ ವಿಶ್ವ ಕಪ್​ ಪಂದ್ಯ ಇಂದಿನಿಂದ ಆರಂಭಗೊಂಡಿದೆ. ಅತಿಥೇಯ ನ್ಯೂಜಿಲ್ಯಾಂಡ್​  ಆಟಗಾರ್ತಿಯರು ಮೊದಲು ವೆಸ್ಟ್​ ಇಂಡೀಸ್​ ವಿರುದ್ದ ಪಂದ್ಯವಾಡಲಿದ್ದಾರೆ.

ಮಹಿಳಾ ವಿಶ್ವಕಪ್​ ಆರಂಭದ ಸಂಕೇತವಾಗಿ ಗೂಗಲ್​ ರಚಿಸಿರುವ ಡೂಡಲ್​ನಲ್ಲಿ 6 ಮಹಿಳೆಯರು, ಬಾಲ್​, ಬ್ಯಾಟ್​ಗಳೊಂದಿಗೆ ಆಡುತ್ತಿರುವುದನ್ನು ತೋರಿಸಲಾಗಿದೆ. ಗೂಗಲ್​ ಓಪನ್​ ಮಾಡಿದ ತಕ್ಷಣ ಮಹಿಳಾ ವಿಶ್ವ ಕಪ್​ ಡೂಡಲ್​ ಕಾಣಿಸುತ್ತದೆ.  ವಿಶ್ವದ ಮೊದಲ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವು 1844 ರಲ್ಲಿ ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ನಡೆಯಿತು. ಮೊದಲ ಮಹಿಳಾ ವಿಶ್ವಕಪ್ ಪಂದ್ಯಾವನ್ನು 1973 ರಲ್ಲಿ ನಡೆಸಲಾಗಿತ್ತು ಇದರಲ್ಲಿ ಇಂಗ್ಲೆಂಡ್​ ಗೆಲುವು ಸಾಧಿಸಿತ್ತು

ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2022 ರಲ್ಲಿ ಎಂಟು ತಂಡಗಳು ಪರಸ್ಪರ ಸ್ಪರ್ಧಿಸಲಿವೆ.  ಈ ಹಿಂದೆ ಪಂದ್ಯವನ್ನು 2021 ರ ಆರಂಭದಲ್ಲಿ ನಿಗದಿಪಡಿಸಲಾಗಿತ್ತು ಆದರೆ ಕೊರೋನ ಸಂಬಂಧಿತ ಪ್ರಯಾಣದ ನಿರ್ಬಂಧಗಳಿಂದ  ನ್ಯೂಜಿಲೆಂಡ್‌ಗೆ ಪ್ರವೇಶ ನಿಷೇಧಿಸಲಾಗಿತ್ತು ಕಾರಣ ಈ ವರ್ಷದ ಮಾರ್ಚ್‌ವರೆಗೆ ಮುಂದೂಡಬೇಕಾಯಿತು. 2018ರಲ್ಲಿ ಇಂಗ್ಲೆಂಡೆ ಆತಿಥ್ಯವನ್ನು ವಹಿಸಿತ್ತು. ಜತೆಗೆ ಗೆಲುವನ್ನೂ ಸಾಧಿಸಿತ್ತು. ಆಸ್ಟ್ರೇಲಿಯಾ ಆರು ಬಾರಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದರೆ, ಇಂಗ್ಲೆಂಡ್ ನಾಲ್ಕು ಬಾರಿ ಪಂದ್ಯಾವಳಿಯನ್ನು ಗೆದ್ದಿದೆ. ಭಾರತವು 2005 ಮತ್ತು 2017 ರಲ್ಲಿ ಫೈನಲಿಸ್ಟ್‌ಗಳನ್ನು ಸೋಲಿಸಿತ್ತು.

ಇದನ್ನೂ ಓದಿ:

ಕಚ್ಚಾ ಬಾದಾಮ್​ ಬಳಿಕ ವೈರಲ್​ ಆಗುತ್ತಿದೆ ಪೇರಳೆ ಹಣ್ಣಿನ ವ್ಯಾಪಾರಿಯ ಹಾಡು: ಇಲ್ಲಿದೆ ವಿಡಿಯೋ

Published On - 10:55 am, Fri, 4 March 22