Viral Video: ಸತ್ತ ಗೆಳೆಯನನ್ನು ಹೂಳಲು ತಾವೇ ಬಾಯಿಯಿಂದ ಮಣ್ಣು ತೋಡಿದ ನಾಯಿಗಳು; ಕಣ್ತುಂಬುವ ವಿಡಿಯೋ ಇಲ್ಲಿದೆ
Dogs Video: ತಮ್ಮ ಜೊತೆ ಆಡಿಕೊಂಡು ಇದ್ದ ಗೆಳೆಯ ಸಾವನ್ನಪ್ಪಿರುವ ವಿಷಯ ಗೊತ್ತಾಗುತ್ತಿದ್ದಂತೆ ನಾಯಿಗಳೇ ಒಂದು ಹೊಂಡವನ್ನು ತೋಡಿ ಅದರಲ್ಲಿ ಆ ಸತ್ತ ನಾಯಿಯನ್ನು ಹಾಕಿವೆ. ನಂತರ ಕಾಲು ಮತ್ತು ಮೂತಿಯಿಂದ ಮಣ್ಣನ್ನು ತೆಗೆದು, ಹೊಂಡವನ್ನು ಮುಚ್ಚಿವೆ.
ಮನುಷ್ಯನಿಗಿಂತಲೂ ನಿಯತ್ತಿಗೆ ಹೆಸರಾದ ಪ್ರಾಣಿಯೆಂದರೆ ಅದು ನಾಯಿ. ನಾಯಿ (Dogs) ಮನುಷ್ಯನ ಅತಿ ಪ್ರಿಯವಾದ ಭಂಟನೂ ಹೌದು. ಈ ನಾಯಿಗಳಲ್ಲಿ ಒಂದು ವಿಶೇಷವಾದ ಶಕ್ತಿಯಿದೆ. ನಾಯಿಗಳು ಒಮ್ಮೆ ಒಬ್ಬರನ್ನು ಹಚ್ಚಿಕೊಂಡರೆ ಜೀವನಪೂರ್ತಿ ಅವರನ್ನು ಮರೆಯುವುದಿಲ್ಲ. ತನಗೆ ಅನ್ನ ಹಾಕಿದ ಮನುಷ್ಯರನ್ನೇ ಬಿಟ್ಟುಕೊಡದ ನಾಯಿಗಳು ಇನ್ನು ತಮ್ಮ ಜೊತೆ ಆಡಿ, ತಿಂದುಕೊಂಡುಕೊಂಡಿದ್ದ ಗೆಳೆಯರನ್ನು ಬಿಟ್ಟುಕೊಡುತ್ತಾವಾ? ನಾಯಿಗಳಿಗೆ ಮುಂಚಿತವಾಗಿಯೇ ಬೇರೆಯವರ ಸಾವು ಗೊತ್ತಾಗುತ್ತದೆ ಎಂಬ ಮಾತಿದೆ. ಇದು ಹೇಗೆ? ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ. ನಾಯಿಗಳು ಕೂಡ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತವೆ, ತನ್ನ ಆಪ್ತರ ನೋವುಗಳಿಗೆ ಸ್ಪಂದಿಸುತ್ತವೆ. ಸಾವನ್ನಪ್ಪಿದ ತಮ್ಮ ಸ್ನೇಹಿತನನ್ನು ಹೂಳಲು ತಾವೇ ಕಾಲುಗಳಿಂದ ಹೊಂಡ ತೋಡಿ, ಅದರೊಳಗೆ ಸತ್ತ ನಾಯಿಯನ್ನು ಹಾಕಿ, ಮೂತಿಯಿಂದ ಮಣ್ಣು ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ಎಂತಹ ಕಲ್ಲು ಹೃದಯವರ ಕಣ್ಣಲ್ಲೂ ನೀರು ಒಸರದಿರದು.
ತಮ್ಮ ಜೊತೆ ಆಡಿಕೊಂಡು ಇದ್ದ ಗೆಳೆಯ ಸಾವನ್ನಪ್ಪಿರುವ ವಿಷಯ ಗೊತ್ತಾಗುತ್ತಿದ್ದಂತೆ ನಾಯಿಗಳೇ ಒಂದು ಹೊಂಡವನ್ನು ತೋಡಿ ಅದರಲ್ಲಿ ಆ ಸತ್ತ ನಾಯಿಯನ್ನು ಹಾಕಿವೆ. ನಂತರ ಕಾಲು ಮತ್ತು ಮೂತಿಯಿಂದ ಮಣ್ಣನ್ನು ತೆಗೆದು, ಹೊಂಡವನ್ನು ಮುಚ್ಚಿವೆ. ಈ ಮೂಲಕ ತಮ್ಮ ಸ್ನೇಹಿತನಿಗೆ ಭಾವಪೂರ್ಣ ವಿದಾಯ ಹೇಳಿರುವ ನಾಯಿಗಳ ವಿಡಿಯೋ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದೆ.
क्या ये ‘जानवर’ हैं ? pic.twitter.com/4VIxUKyNYI
— Awanish Sharan (@AwanishSharan) February 28, 2022
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಹಂಚಿಕೊಂಡಿರುವ ಈ ವೀಡಿಯೊದಲ್ಲಿ ಐದು ನಾಯಿಗಳು ತಮ್ಮ ಸ್ನೇಹಿತನನ್ನು ಹೂಳಲು ಬಾಯಿಯಿಂದ ಹೊಂಡದೊಳಗೆ ಮಣ್ಣನ್ನು ಹಾಕುವುದನ್ನು ನೋಡಬಹುದು. ಈ ಹೃದಯ ವಿದ್ರಾವಕ ವಿಡಿಯೋ ವೈರಲ್ ಆಗಿದ್ದು, ಜನರನ್ನು ಭಾವುಕರನ್ನಾಗಿಸಿದೆ.
Usually dogs dig soil by their fore-legs. It’s just the respect that they have for their departed friend, that they use their chin/face (whatever we call). It’s real humanity (though the word is not apt here, used it deliberately in the hope that we learn from them)
— mrutyunjaya kadlur (@MrutyunjayaSK) February 28, 2022
ತಮ್ಮ ಸಹಚರರಿಗೆ ಅಂತಹ ಘನತೆ ಮತ್ತು ಪ್ರೀತಿಯಿಂದ ಅಂತ್ಯಕ್ರಿಯೆ ಮಾಡಿರುವ ನಾಯಿಗಳಿಂದ ಮನುಷ್ಯರು ಪ್ರಾಣಿಗಳಿಂದ ಕಲಿಯುವುದು ಬಹಳಷ್ಟಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. “ಪ್ರಾಣಿಗಳು ನಾವು ಹೇಗೆ ಪ್ರೀತಿಸಬೇಕೆಂದು ನಮಗೆ ಕಲಿಸಲು ಭೂಮಿಗೆ ಕಳುಹಿಸಲಾದ ಚಿಕ್ಕ ದೇವತೆಗಳು. ಅವರು ಕೋಪಗೊಳ್ಳುವುದಿಲ್ಲ ಅಥವಾ ಸಿಲ್ಲಿ ಆಟಗಳನ್ನು ಆಡುವುದಿಲ್ಲ. ಅವರು ಯಾವಾಗಲೂ ನಮ್ಮೊಂದಿಗೆ ಇರುತ್ತವೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
I have learnt lots and lots of lessons from my Hachi. He’s made me more human without ever saying anything. Even though it’s more than a year now that he’s left for a better place he continues to live in my heart making me a better person. They’re more human than us
— Rina Ghose (@GhoseRina) March 1, 2022
ಇದನ್ನೂ ಓದಿ: Viral Video: ಬ್ಯಾಗ್ ಕದಿಯಲು ಬಂದ ಕಳ್ಳರಿಗೆ ಮಣ್ಣು ಮುಕ್ಕಿಸಿದ ಯುವತಿ; ಈ ವಿಡಿಯೋ ನೋಡಿದರೆ ನಗದಿರಲು ಸಾಧ್ಯವೇ ಇಲ್ಲ!
Viral Video: ರಸ್ತೆ ಬದಿ ನಿಂತಿದ್ದ ಬೀದಿ ನಾಯಿಗೆ ಒದೆಯಲು ಹೋದವನಿಗೆ ಏನಾಯ್ತು ಗೊತ್ತಾ?; ವಿಡಿಯೋ ವೈರಲ್
Published On - 6:39 pm, Thu, 3 March 22