Kano Jigoro: ಜಪಾನ್​ನ ’ಫಾದರ್​ ಆಫ್​ ಜೂಡೋ’ ಕ್ಯಾನೊ ಜಿಗೊರೊ ಅವರ ಜನ್ಮ ದಿನ; ಗೂಗಲ್ ಡೂಡಲ್ ವಿಶೇಷ ಗೌರವ

Google Doodle: ಜಪಾನ್​ನ ಫಾದರ್​ ಆಫ್​ ಜೂಡೋ, ಕ್ಯಾನೊ ಜಿಗೊರೊ ಅವರ 161ನೇ ಜನ್ಮ ದಿನವನ್ನು ಇಂದು ಗೂಗಲ್​ ತನ್ನ ಡೂಡಲ್​ ಮೂಲಕ ಆಚರಿಸುತ್ತಿದೆ.

Kano Jigoro: ಜಪಾನ್​ನ ’ಫಾದರ್​ ಆಫ್​ ಜೂಡೋ’ ಕ್ಯಾನೊ ಜಿಗೊರೊ ಅವರ ಜನ್ಮ ದಿನ; ಗೂಗಲ್ ಡೂಡಲ್ ವಿಶೇಷ ಗೌರವ
ಕ್ಯಾನೊ ಜಿಗೊರೊ
Edited By:

Updated on: Oct 28, 2021 | 9:14 AM

ಸರ್ಚ್ ಇಂಜಿನ್ ದೈತ್ಯ ಗೂಗಲ್ ಇಂದು ಗುರುವಾರ (ಅ.28) ಜಪಾನ್​ನ ಫಾದರ್​ ಆಫ್​ ಜೂಡೋ ಪ್ರೊಫೆಸರ್ ಕ್ಯಾನೊ ಜಿಗೊರೊ ಅವರ 161ನೇ ಜನ್ಮ ದಿನವನ್ನು ಆಚರಿಸುತ್ತಿದೆ. ಜುಡೋ ಎಂಬ ಹೆಸರಿನ ಅರ್ಥ ಸೌಮ್ಯ ಮಾರ್ಗ ಮತ್ತು ಕ್ರೀಡೆಯು ನ್ಯಾಯ, ಸೌಜನ್ಯ, ಸುರಕ್ಷತೆ ಮತ್ತು ನಮ್ರತೆಯಂತಹ ತತ್ವಗಳ ಮೇಲೆ ನಿಂತಿದೆ ಎಂದರ್ಥ.  ಕ್ಯಾನೊ ಅವರು 1909ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ ಸಮಿತಿ (IOC) ಏಷ್ಯನ್​ನ ಮೊದಲ ಸದಸ್ಯರಾದರು. 1960 ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ ಸಮಿತಿ ಜುಡೋವನ್ನು ಅಧಿಕೃತ ಒಲಂಪಿಕ್ ಕ್ರೀಡೆಯಾಗಿ ಅನುಮೋದಿಸಿತು.

ಕ್ಯಾನೊ ಜಿಗೊರೊ ಅವರು 1860 ರಲ್ಲಿ ಮಿಕೇಜ್​ನಲ್ಲಿ ಜನಿಸಿದರು. 11ನೇ ವಯಸ್ಸಿನಲ್ಲಿರುವಾಗಲೇ ತಂದೆಯ ಜೊತೆಗೂಡಿ ಟೋಕಿಯೊಗೆ ತೆರಳಿದರು. ಶಾಲೆಯಲ್ಲಿ ತಮ್ಮ ಶಕ್ತಿ ಸಾಮರ್ಥ್ಯವನ್ನು ತೋರ್ಪಡಿಸುವ ಸಮಯದಲ್ಲಿ ಶಕ್ತಿ ಪ್ರದರ್ಶನಕ್ಕಾಗಿ ಜುಜುಟ್ಸುವಿನ ಸಮರ ಕಲೆಯನ್ನು ಅಧ್ಯಯನ ಮಾಡಲು ನಿರ್ಧರಿಸಿದರು. ಟೋಕಿಯೊ ವಿಶ್ವವಿದ್ಯಾನಿಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಜುಜುಟ್ಸು ಮಾಸ್ಟರ್ ಮತ್ತು ಮಾಜಿ ಸಮುರಾಯ್ ಫುಕಾಡಾ ಹಚಿನೋಸುಕೆ ಅವರ ಬಳಿ ತರಬೇತಿಗೆ ಮುಂದಾದರು.

ಕ್ಯಾನೊ ಅವರು ತನ್ನ ದೊಡ್ಡ ಎದುರಾಳಿಯ ಬೆನ್ನು ಬಾಗಿಸುವ ಕುಸ್ತಿಯನ್ನು ಕಲಿತರು. ಜುಜುಟ್ಸುನಲ್ಲಿ ಬಳಸಲಾದ ಅತ್ಯಂತ ಅಪಾಯಕಾರಿ ತಂತ್ರಗಳನ್ನು ತೆಗೆದುಹಾಕುವ ಮೂಲಕ ಅವರು ಜುಡೋವನ್ನು ಆರಂಭಿಸಿದರು. ಜುಡೋ ಇದು ಸ್ವಯಂ ಮತ್ತು ಆಕ್ತಿ ಪ್ರದರ್ಶನದ ಮೂಲಕ ಕನೊ ಅವರ ವೈಯಕ್ತಿಕ ತತ್ವಶಾಸ್ತ್ರದ ಆಧಾರದ ಮೇಲೆ ಸುರಕ್ಷಿತ ಮತ್ತು ಸಹಕಾರಿ ಕ್ರೀಡೆಯಾಗಿದೆ ಪ್ರಾರಂಭವಾಯಿತು.

1882ರಲ್ಲಿ ಕ್ಯಾನೊ ಅವರು ತನ್ನದೇ ಆದ ಡೋಜೋ ಅಂದರೆ ಜಿಮ್ ಸಮರ ಕಲೆಯನ್ನು ಪ್ರಾರಂಭಿಸಲು ಟೋಕಿಯೊದಲ್ಲಿ ಕೊಡೋಕನ್ ಜುಡೋ ಇನ್​ಸ್ಟಿಟ್ಯುಟ್​ಅನ್ನು ತೆರೆದರು. ಅಲ್ಲಿ ವರ್ಷಗಳ ಕಾಲ ಜುಡೋವನ್ನು ಅಭಿವದ್ಧಿಪಡಿಸಿದರು. ಬಳಿಕ 1893ರಲ್ಲಿ ಮಹಿಳೆಯರನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು.

ಇದನ್ನೂ ಓದಿ:

Google: ‘ಡೂಡಲ್​ ಕೇಕ್​’ ಮೂಲಕ 23ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಗೂಗಲ್​

Sivaji Ganesan Birth Anniversary: ಶಿವಾಜಿ ಗಣೇಶನ್​ 93ನೇ ಜನ್ಮದಿನ; ಲೆಜೆಂಡರಿ ನಟನಿಗೆ ಡೂಡಲ್​ ಮೂಲಕ ಗೂಗಲ್​ ಗೌರವ