AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sivaji Ganesan Birth Anniversary: ಶಿವಾಜಿ ಗಣೇಶನ್​ 93ನೇ ಜನ್ಮದಿನ; ಲೆಜೆಂಡರಿ ನಟನಿಗೆ ಡೂಡಲ್​ ಮೂಲಕ ಗೂಗಲ್​ ಗೌರವ

Google Doodles: ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಶಿವಾಜಿ ಗಣೇಶನ್​ ಅವರ ಸಾಧನೆ ದೊಡ್ಡದು. 288 ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು (ಅ.1) ಡೂಡಲ್​ ಮೂಲಕ ಗೂಗಲ್​ ಗೌರವ ಸಲ್ಲಿಸಿದೆ.

Sivaji Ganesan Birth Anniversary: ಶಿವಾಜಿ ಗಣೇಶನ್​ 93ನೇ ಜನ್ಮದಿನ; ಲೆಜೆಂಡರಿ ನಟನಿಗೆ ಡೂಡಲ್​ ಮೂಲಕ ಗೂಗಲ್​ ಗೌರವ
ಶಿವಾಜಿ ಗಣೇಶನ್​ಗೆ ಗೂಗಲ್ ಡೂಡಲ್ ಗೌರವ
TV9 Web
| Edited By: |

Updated on:Oct 01, 2021 | 8:12 AM

Share

ಭಾರತೀಯ ಚಿತ್ರರಂಗದಲ್ಲಿ ದಿಗ್ಗಜ ನಟನಾಗಿ ಮೆರೆದವರು ಶಿವಾಜಿ ಗಣೇಶನ್​.​ ಇಂದು (ಅ.1) ಅವರ ಜನ್ಮದಿನ. 93ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ. ಆನ್​ಲೈನ್​ ಸರ್ಚ್​​ ಇಂಜಿನ್​ ಗೂಗಲ್​ ಕೂಡ ಶಿವಾಜಿ ಗಣೇಶನ್​ ಅವರಿಗೆ ತನ್ನ ಡೂಡಲ್​ ಮೂಲಕ ಗೌರವ ಸಲ್ಲಿಸಿದೆ. ಗೂಗಲ್​ ಮುಖಪುಟದಲ್ಲಿನ ಲೋಗೋವನ್ನು ವಿಶೇಷ ರೀತಿಯಲ್ಲಿ ಬದಲಾಯಿಸುವ ಮೂಲಕ ಈ ರೀತಿಯ ಡೂಡಲ್​ ಮಾಡಲಾಗುತ್ತದೆ. ಇಂಥ ಗೌರವ ಸಿಗುವುದು ಕೆಲವೇ ಮಂದಿಗೆ ಮಾತ್ರ. ಇಂದು ಶಿವಾಜಿ ಗಣೇಶನ್​ ಅವರ 93ನೇ ಜನ್ಮದಿನದ ಪ್ರಯುಕ್ತ ಗೂಗಲ್​ ಡೂಡಲ್ ಮೂಲಕ ಅವರ ಸಾಧನೆಯನ್ನು ಸ್ಮರಿಸಲಾಗಿದೆ.

ಶಿವಾಜಿ ಗಣೇಶನ್​ ಜನಿಸಿದ್ದು 1928ರ ಅ.1ರಂದು. ಅಂದಿನ ಮದ್ರಾಸ್​ ಪ್ರೆಸಿಡೆನ್ಸಿಯ ವಿಲ್ಲುಪುರಂನಲ್ಲಿ ಜನಿಸಿದ ಅವರ ಮೂಲ ಹೆಸರು ಗಣೇಶಮೂರ್ತಿ. 7ನೇ ವಯಸ್ಸಿನಲ್ಲಿ ಇರುವಾಗಲೇ ಅವರು ಮನೆ ಬಿಟ್ಟು ಒಂದು ನಾಟಕ ತಂಡವನ್ನು ಸೇರಿಕೊಂಡರು. ಬಾಲ ನಟನಾಗಿ, ಸ್ತ್ರೀಪಾತ್ರಗಳನ್ನು ಮಾಡುತ್ತ ನಟನೆಯ ಅನುಭವ ಪಡೆದರು. ನಂತರ ನಾಟಕಗಳಲ್ಲಿ ಮುಖ್ಯಪಾತ್ರಗಳು ಸಿಗಲು ಪ್ರಾರಂಭವಾದವು. 1945ರಲ್ಲಿ ಅವರು ಛತ್ರಪತಿ ಶಿವಾಜಿ ಪಾತ್ರವನ್ನು ಮಾಡಿ ಫೇಮಸ್​ ಆದರು. ಅಂದಿನಿಂದ ಅವರ ಹೆಸರಿನ ಜೊತೆ ಆ ಪಾತ್ರದ ಹೆಸರು ಕೂಡ ಸೇರಿಕೊಂಡಿತು. ‘ಶಿವಾಜಿ ಗಣೇಶನ್’​ ಎಂದೇ ಅವರು ಖ್ಯಾತರಾದರು.

ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಶಿವಾಜಿ ಗಣೇಶನ್​ ಅವರ ಸಾಧನೆ ದೊಡ್ಡದು. 288 ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್​ ಆಗಿ ಮೆರೆದ ಅವರು ಬೇರೆ ಭಾಷೆಯಲ್ಲೂ ನಟಿಸಿದ್ದರು. ಕನ್ನಡದ ‘ಸ್ಕೂಲ್​ ಮಾಸ್ಟರ್’​ ಹಾಗೂ ‘ಮಕ್ಕಳ ರಾಜ್ಯ’ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದರು.

ದಕ್ಷಿಣ ಭಾರತದ ಅನೇಕ ನಟರ ಮೇಲೆ ಶಿವಾಜಿ ಗಣೇಶನ್​ ಪ್ರಭಾವ ಬೀರಿದ್ದರು. ಇಂದಿಗೂ ಅವರನ್ನು ಸ್ಫೂರ್ತಿಯಾಗಿ ಇಟ್ಟುಕೊಂಡವರು ಅನೇಕರಿದ್ದಾರೆ. ಫಿಲ್ಮ್​​ಫೇರ್​ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಜೊತೆಗೆ ಪದ್ಮಶ್ರೀ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳು ಕೂಡ ಶಿವಾಜಿ ಗಣೇಶನ್​ ಅವರಿಗೆ ಒಲಿದುಬಂದಿದ್ದವು. ಇಷ್ಟೆಲ್ಲ ಸಾಧನೆ ಮಾಡಿದ ಅವರಿಗೆ ಇಂದು ಗೂಗಲ್​ ಡೂಡಲ್​ ಮೂಲಕ ಗೌರವ ಸಲ್ಲಿಸಲಾಗಿದೆ. ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಅವರ ಹುಟ್ಟುಹಬ್ಬದ ಪ್ರಯುಕ್ತ ಲೆಜೆಂಡರಿ ನಟನನ್ನು ಸ್ಮರಿಸುತ್ತಿದ್ದಾರೆ.

ಇದನ್ನೂ ಓದಿ:

ಅಪ್ಪಂದಿರ ದಿನಾಚರಣೆಗೆ​ ಡೂಡಲ್​ ಮೂಲಕ ಶುಭ ಹಾರೈಸಿದ ಗೂಗಲ್​

Google: ‘ಡೂಡಲ್​ ಕೇಕ್​’ ಮೂಲಕ 23ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಗೂಗಲ್​

Published On - 8:05 am, Fri, 1 October 21

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ