ಹೆಂಡತಿಗೆ ಬ್ರೈನ್ ಟ್ಯೂಮರ್, ತಂದೆಗೆ ಕ್ಯಾನ್ಸರ್, ಖರ್ಚಿಗಿರಲಿಲ್ಲ ಹಣ; ಇದು ಸೂಪರ್ಸ್ಟಾರ್ ಆದ ನಟನ ಹಿಂದಿನ ಕಥೆ
ಪ್ರತೀಕ್ ಗುಜರಾತಿ ಭಾಷೆಯ ನಟ. ದಶಕಗಳ ಹಿಂದೆ ಅವರ ಜೀವನ ಹೀಗೆ ಇರಲಿಲ್ಲ. ಅವರು ತುಂಬಾನೇ ಕಷ್ಟ ಅನುಭವಿಸಿ ಬಂದಿದ್ದರು. ಈ ಬಗ್ಗೆ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.
‘ಸ್ಕ್ಯಾಮ್ 1992’ ವೆಬ್ ಸೀರಿಸ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದರಲ್ಲಿ ನಟ ಪ್ರತೀಕ್ ಗಾಂಧಿ ಅವರು ಹರ್ಷದ್ ಮೆಹ್ತಾ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಭಾರತೀಯ ಸ್ಟಾಕ್ ಮಾರ್ಕೆಟ್ನಲ್ಲಿ ನಡೆದ ಹಗರಣ ಆಧರಿಸಿ ಈ ವೆಬ್ ಸೀರಿಸ್ ಸಿದ್ಧಗೊಂಡಿದೆ. ಈ ವೆಬ್ ಸೀರಿಸ್ ಹಿಟ್ ಆದ ನಂತರದಲ್ಲಿ ಪ್ರತೀಕ್ ಗಾಂಧಿಗೆ ಆಫರ್ಗಳು ಹೆಚ್ಚಿವೆ. ಆದರೆ, ಅವರ ಜೀವನ ಈ ಮೊದಲು ಈ ರೀತಿ ಇರಲಿಲ್ಲ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಪ್ರತೀಕ್ ಗುಜರಾತಿ ಭಾಷೆಯ ನಟ. ದಶಕಗಳ ಹಿಂದೆ ಅವರ ಜೀವನ ಹೀಗೆ ಇರಲಿಲ್ಲ. ಅವರು ತುಂಬಾನೇ ಕಷ್ಟ ಅನುಭವಿಸಿ ಬಂದಿದ್ದರು. ಈ ಬಗ್ಗೆ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಪ್ರತೀಕ್ ಪತ್ನಿಗೆ ಬ್ರೈನ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು. ಅದೇ ಸಮಯದಲ್ಲಿ ಅವರ ತಂದೆಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಈ ಘಟನೆ ಪ್ರತೀಕ್ ಅವರನ್ನು ಸಂಕಷ್ಟಕ್ಕೆ ನೂಕಿತ್ತು.
‘ತನ್ನ ತಂದೆ ತೀರಿಕೊಂಡ ನಂತರ ತನ್ನ ಬಳಿ ಯಾವುದೇ ಹಣ ಇರಲಿಲ್ಲ. ಅವರು ಮೃತಪಟ್ಟ ನಂತರ ನಾನು ಆ ಮನೆಯಿಂದ ಹೊರಹೋಗಬೇಕಾಯಿತು. ನನಗೆ ಉಳಿದುಕೊಳ್ಳೋಕೂ ಜಾಗ ಇರಲಿಲ್ಲ. ಆದರೆ, ನಾನು ನಂಬಿಕೆ ಕಳೆದುಕೊಂಡಿಲ್ಲ’ ಎಂದು ಪ್ರತೀಕ್ ತಮ್ಮ ಕಷ್ಟಗಳನ್ನು ವಿವರಿಸಿದ್ದಾರೆ
ಸ್ಕ್ಯಾಮ್ 1992 ವೆಬ್ ಸೀರಿಸ್ ತೆರೆಕಂಡ ನಂತರ ಪ್ರತೀಕ್ಗೆ ಬೇಡಿಕೆ ಹೆಚ್ಚಿದೆ. ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಜೀವನ ಆಧರಿಸಿ ಮಾಹಿ ವಿ. ರಾಘವ ಅವರು ಬಯೋಪಿಕ್ ಸಿದ್ಧಪಡಿಸಿದ್ದರು. ‘ಯಾತ್ರಾ’ ಹೆಸರಿನಲ್ಲಿ ತೆರೆಗೆ ಬಂದ ಈ ಸಿನಿಮಾ ಯಶಸ್ಸು ಗಳಿಸಿತ್ತು. ಈಗ ಅವರು ರಾಜಶೇಖರ್ ರೆಡ್ಡಿ ಮಗ, ಆಂಧ್ರದ ಮುಖ್ಯಮಂತ್ರಿ ವೈ.ಎಸ್. ಜಗನ್ ಅವರ ಜೀವನ ಆಧರಿಸಿ ಸಿನಿಮಾ ಮಾಡೋಕೆ ನಿರ್ಧರಿಸಿದ್ದಾರೆ. ಜಗನ್ ಪಾತ್ರಕ್ಕೆ ಯಾರು ಸೂಕ್ತ ಎನ್ನುವ ಹುಡುಕಾಟದಲ್ಲಿದ್ದಾಗ ಮಾಹಿ ಅವರಿಗೆ ಸಿಕ್ಕಿದ್ದು ಪ್ರತೀಕ್ ಗಾಂಧಿ.
‘ನಿರ್ದೇಶಕರು ಪ್ರತೀಕ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಬಯೋಪಿಕ್ ನೆರೇಷನ್ ಪ್ರತೀಕ್ಗೆ ಇಷ್ಟವಾಗಿದೆ. ಅವರು ಜಗನ್ ಪಾತ್ರ ಮಾಡೋಕೆ ಒಪ್ಪಿಗೆ ನೀಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಬಾಲಿವುಡ್ ನಟನ ಆಯ್ಕೆ ನಡೆದಿದೆ’ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಅಧಿಕೃತ ಅಪ್ಡೇಟ್ ಕೇಳಿಬರಬೇಕಿದೆ.
ಇದನ್ನೂ ಓದಿ:
ತೆರೆಯ ಮೇಲೆ ಬರಲಿದೆ ಅಬ್ದುಲ್ ಕರೀಂ ತೆಲಗಿ ಹಗರಣ; ಸ್ಕ್ಯಾಮ್ 1992 ನಿರ್ದೇಶಕರಿಂದಲೇ ಸ್ಕ್ಯಾಮ್ 2003