ಸರ್ಚ್ ಇಂಜಿನ್ ಗೂಗಲ್ ತನ್ನ 23ನೇ ಹುಟ್ಟುಹಬ್ಬವನ್ನು ಇಂದು (ಸೆ.27, ಸೋಮವಾರ) ಆಚರಿಸಿಕೊಳ್ಳುತ್ತಿದೆ. ಗೂಗಲ್ ತನ್ನ ಮುಖಪುಟದಲ್ಲಿ ಕೇಕ್ ಚಿತ್ರವನ್ನು ಹಂಚಿಕೊಂಡಿದೆ. ಗೂಗಲ್ ಅಕ್ಷರಗಳಿಗೆ ಚಾಕಲೇಟ್ ಕೇಕ್ ಮತ್ತು ಎಲ್ (L) ಅಕ್ಷರವು ಮೇಣದಬತ್ತಿಯಾಗಿದ್ದು ದೀಪದಿಂದ ಬೆಳಗುತ್ತಿದೆ. ಕೇಕ್ನ ಮೇಲೆ 23 ಎಂದು ಬರೆಯಲಾಗಿದೆ.
ಗೂಗಲ್ ತನ್ನ 23ನೇ ಹುಟ್ಟುಹಬ್ಬವನ್ನು ವಿಶೇಷ ಡೂಡಲ್ನೊಂದಿಗೆ ಆಚರಿಸುತ್ತಿದೆ. ತಾಂತ್ರಿಕವಾಗಿ 1998, ಸೆಪ್ಟೆಂಬರ್ 4ರಂದು ಸ್ಥಾಪನೆಯಾಯಿತು. ಸರ್ಚ್ ಇಂಜಿನ್ ಇತಿಹಾಸ 1996ಕ್ಕಿಂತಲೂ ಹಿಂದಿನದು. ಕಂಪನಿಯು ಸೆಪ್ಟೆಂಬರ್ 27 ಅನ್ನು ಸಾಂಪ್ರದಾಯಿಕವಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸುವ ದಿನವಾಗಿ ಆಯ್ಕೆ ಮಾಡಿದೆ.
ಪ್ರತಿದಿನ ಪ್ರಪಂಚದಾದ್ಯಂತ 150ಕ್ಕೂ ಹೆಚ್ಚು ಭಾಷೆಗಳಲ್ಲಿ ಗೂಗಲ್ನಲ್ಲಿ ಶತಕೋಟಿ ಹುಡುಕಾಟಗಳು ನಡೆಯುತ್ತವೆ. ಜಾಗತಿಕವಾಗಿ 20ಕ್ಕೂ ಹೆಚ್ಚು ಡೇಟಾ ಸೆಂಟರ್ಗಳಲ್ಲಿ ಪ್ರಪಂಚದ ಮಾಹಿತಿಯನ್ನು ಎಲ್ಲರಿಗೂ ತಲುಪುವಂತೆ ಮಾಡುವ ಉದ್ದೇಶದೊಂದಿಗೆ ಸಾಗುತ್ತಿದೆ.
ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಮತ್ತು ಸೆರ್ಜೆ ಬ್ರಿನ್ 1998, ಸೆಪ್ಟೆಂಬರ್ 4ರಂದು ಗೂಗಲ್ಅನ್ನು ಸ್ಥಾಪಿಸಿದರು. ಕೇವಲ ಒಂದು ವರ್ಷದಲ್ಲಿ ಇಬ್ಬರೂ ಮೂಲ ಸರ್ಚ್ ಇಂಜಿನ್ಅನ್ನು ಆರಂಭಿಸಿದರು. ಅಂದಿನಿಂದ ಇಪ್ಪತ್ಮೂರು ವರ್ಷಗಳವರೆಗೂ ಗೂಗಲ್ ಎಲ್ಲೆಡೆ ಇದೆ. 2015 ಅಕ್ಟೋಬರ್ 24ರಂದು ಲ್ಯಾರಿ ಪೇಜ್ ಬದಲಿಗೆ ಸುಂದರ್ ಪಿಚೈ ಗೂಗಲ್ನ ಸಿಇಒ ಆಗಿ ನೇಮಕಗೊಂಡರು.
ಇದನ್ನೂ ಓದಿ:
Shirley Temple: ಶಿರ್ಲೆ ಟೆಂಪಲ್ ಅವರಿಗೆ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್
Margherita Hack: ಖಗೋಳ ಭೌತಶಾಸ್ತ್ರಜ್ಞೆ ಮಾರ್ಗರಿಟಾ ಹ್ಯಾಕ್ 99ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ವಿಶೇಷ ನಮನ
(Google turns 23 celebrating birthday with a special animated cake doodle know details in Kannada)
Published On - 10:00 am, Mon, 27 September 21