AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬಿಕಿನಿ ತೊಟ್ಟು ಪೋಲ್ ಡ್ಯಾನ್ಸ್ ಮಾಡಿದ ಯುವಕ! ನೋಡುಗರ ರಿಯಾಕ್ಷನ್ ಹೇಗಿತ್ತು ಗೊತ್ತಾ?

Viral Video: ವಿಡಿಯೋದಲ್ಲಿ ನೀವು ನೋಡಬಹುದು. ವ್ಯಕ್ತಿ ಬಿಕಿನಿ ಧರಿಸಿ ಪೋಲ್ ಡ್ಯಾನ್ಸ್ ಮಾಡುತ್ತಿದ್ದಾನೆ. ಅದು ಕೂಡ ಸಾರ್ವಜನಿಕ ಸ್ಥಳದಲ್ಲಿ. ತುಂಬಾ ಜನರು ಇರುವಲ್ಲಿ ಡ್ಯಾನ್ಸ್ ಮಾಡಿದ್ದಾನೆ. ಬೇರೆಯವರು ತನ್ನ ಬಗ್ಗೆ ಏನು ಹೇಳುತ್ತಾರೆ ಎಂದೂ ಯೋಚಿಸದೇ ಆತ ಡ್ಯಾನ್ಸ್ ಮಾಡಿರುವುದು ಕಾಣಿಸುತ್ತಿದೆ.

Video: ಬಿಕಿನಿ ತೊಟ್ಟು ಪೋಲ್ ಡ್ಯಾನ್ಸ್ ಮಾಡಿದ ಯುವಕ! ನೋಡುಗರ ರಿಯಾಕ್ಷನ್ ಹೇಗಿತ್ತು ಗೊತ್ತಾ?
ಬಿಕಿನಿ ತೊಟ್ಟು ಪೋಲ್ ಡ್ಯಾನ್ಸ್ ಮಾಡಿದ ಯುವಕ!
TV9 Web
| Edited By: |

Updated on: Sep 26, 2021 | 10:49 PM

Share

ಇಂಟರ್​ನೆಟ್ ಜಗತ್ತಿನಲ್ಲಿ ಮಿಂಚಲು ಜನರು ಏನು ಮಾಡಬೇಕು? ಇದಕ್ಕೆ ತರಹೇವಾರಿ ಉತ್ತರಗಳನ್ನು ನಾವು ಕಾಣಬಹುದು. ಒಳ್ಳೆಯ ವಿಧಾನದಲ್ಲಿ ಅಂತರ್ಜಾಲದ ಗೆಳೆಯರನ್ನು ಸೆಳೆಯುವುದು ಒಂದು ರೀತಿ. ಇನ್ನು ಕೆಲವೊಮ್ಮೆ ವಿಚಿತ್ರ, ವಿಭಿನ್ನ ವಿಚಾರಗಳಿಗೆ ಅಂತರ್ಜಾಲದ ನೋಡುಗರು ಹೆಚ್ಚಿರುತ್ತಾರೆ. ಅದರಿಂದ ಹೆಚ್ಚು ಜನರ ಗಮನ ಸೆಳೆಯುವವರು ಕೂಡ ಇರುತ್ತಾರೆ. ಅಂತಹ ವಿಡಿಯೋಗಳು ನೋಡುಗರಿಗೆ ನಗು ತರಿಸುವುದೂ ಇದೆ. ಇಲ್ಲೊಂದು ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಿಕಿನಿ ಧರಿಸಿಕೊಂಡು ಪೋಲ್ ಡ್ಯಾನ್ಸ್ ಮಾಡಿದ್ದಾನೆ! ಸಾರ್ವಜನಿಕವಾಗಿ ಗಂಡು ವ್ಯಕ್ತಿ ವಿಚಿತ್ರವಾಗಿ ಪೋಲ್ ಡ್ಯಾನ್ಸ್ ಮಾಡಿರುವುದು ಅದೂ ಬಿಕಿನಿ ಧರಿಸಿ ಕಂಡಿರುವುದು ಜನರಲ್ಲಿ ಆಶ್ಷರ್ಯ ಮೂಡಿಸಿದೆ. ಸಾಮಾಜಿಕ ಜಾಲತಾಣದಲ ಜನರು ಈ ವಿಡಿಯೋ ನೋಡಿ ನಕ್ಕು ಆಶ್ಚರ್ಯ ಚಕಿತರಾಗಿದ್ದಾರೆ.

ವಿಡಿಯೋದಲ್ಲಿ ನೀವು ನೋಡಬಹುದು. ವ್ಯಕ್ತಿ ಬಿಕಿನಿ ಧರಿಸಿ ಪೋಲ್ ಡ್ಯಾನ್ಸ್ ಮಾಡುತ್ತಿದ್ದಾನೆ. ಅದು ಕೂಡ ಸಾರ್ವಜನಿಕ ಸ್ಥಳದಲ್ಲಿ. ತುಂಬಾ ಜನರು ಇರುವಲ್ಲಿ ಡ್ಯಾನ್ಸ್ ಮಾಡಿದ್ದಾನೆ. ಬೇರೆಯವರು ತನ್ನ ಬಗ್ಗೆ ಏನು ಹೇಳುತ್ತಾರೆ ಎಂದೂ ಯೋಚಿಸದೇ ಆತ ಡ್ಯಾನ್ಸ್ ಮಾಡಿರುವುದು ಕಾಣಿಸುತ್ತಿದೆ. ತನ್ನ ಪಾಡಿಗೆ ಡ್ಯಾನ್ಸ್ ಮಾಡುವುದು ಮಾತ್ರ ಅವನ ಕೆಲಸವಾಗಿದೆ.

ವಿಡಿಯೋದಲ್ಲಿ ನೀವು ನೋಡಿದಂತೆ, ಬಹಳಷ್ಟು ಮಂದಿ ವಿಶೇಷವಾಗಿ ಮಹಿಳೆಯರು ಈ ವಿಚಿತ್ರ ವ್ಯಕ್ತಿಯ ವ್ಯಕ್ತಿತ್ವವನ್ನು ದಿಟ್ಟಿಸಿ ನೋಡಿದ್ದಾರೆ. ಅದೇ ವೇಳೆ, ಕೆಲವರು ಆತನ ಡ್ಯಾನ್ಸ್​ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ದೆವಲ್ ಮಕ್ವಾನ ಎಂಬವರು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ವಿಧವಿಧದ ರಿಯಾಕ್ಷನ್​ಗಳನ್ನು ಕೊಟ್ಟಿದ್ದಾರೆ. ಹಲವರು ಎಮೋಜಿಗಳ ಮೂಲಕವೇ ತಮ್ಮ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Video: ರೈಲಿನ ಒಳಗೆ ಸಂಗೀತ ರಸಮಂಜರಿ! ಗಿಟಾರ್ ಹಾಗೂ ಸ್ಯಾಕ್ಸೋಫೋನ್ ಮೋಡಿಗೆ ಪ್ರಯಾಣಿಕರು ಫಿದಾ

ಇದನ್ನೂ ಓದಿ: Video: ಬೀದಿನಾಯಿ ಒಂದಕ್ಕೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ; ಆಪ್ತ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ