
ಈ ಅಜ್ಜ ಅಜ್ಜಿ (grand parents) ಯಂದಿರಿಗೆ ತಮ್ಮ ಮೊಮ್ಮಕ್ಕಳು, ಮರಿ ಮೊಮ್ಮಕ್ಕಳೆಂದರೆ ಜೀವಕ್ಕಿಂತ ಹೆಚ್ಚು. ಬಾಲ್ಯ ಕಳೆದು ದೊಡ್ಡವರಾಗಿ ಬೆಳೆದರೂ ಕೂಡ ಮೊಮ್ಮಕ್ಕಳು ಅಜ್ಜ ಅಜ್ಜಿಯಂದಿರ ಪಾಲಿಗೆ ಪುಟ್ಟ ಮಕ್ಕಳೇ. ಮಡಿಲಲ್ಲಿ ಆಡಿ ಬೆಳೆದ ಮೊಮ್ಮಕ್ಕಳ ಮೇಲಿನ ಪ್ರೀತಿಯಂತೂ ಎಳ್ಳಷ್ಟು ಕಡಿಮೆ ಆಗಲ್ಲ. ಹೀಗಾಗಿ ಮೊಮ್ಮಕ್ಕಳಿಗೆ ತಿಂಡಿ ಖರೀದಿಸಿರುವುದು ಹಾಗೂ ಅವರ ಕೈಗೆ ಒಂದಿಷ್ಟು ಬಿಡಿಗಾಸು ಕೊಡುವುದರಲ್ಲಿ ಇರುವ ಖುಷಿ ಅವರಿಗೆ ಬೇರೆ ಯಾವುದರಲ್ಲಿಯೂ ಇಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಲಾಗರ್ ಒಬ್ಬರು ತಮ್ಮ ಅಜ್ಜಿ ತನಗಾಗಿ ಖರೀದಿಸಿದ ತಿಂಡಿಯ ಚೀಲ (snacks) ವನ್ನು ತೋರಿಸುವ ಮೂಲಕ ಇವತ್ತಿಗೂ ಅಜ್ಜಿ ತನ್ನನ್ನು ಎಷ್ಟು ಪ್ರೀತಿಸುತ್ತಾಳೆ ಎಂದು ವಿವರಿಸಿದ್ದಾರೆ.
adhwan kapoor ಹೆಸರಿನ ಖಾತೆಯಲ್ಲಿ ವ್ಲಾಗರ್ ಒಬ್ಬರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋದಲ್ಲಿ ನನಗೆ ವಯಸ್ಸು 26, ಆದರೆ ನನ್ನ ಅಜ್ಜ ಅಜ್ಜಿಯನ್ನು ಭೇಟಿಯಾದ ವೇಳೆ ನನಗೆ ತಿಂಡಿಗಳನ್ನು ಖರೀದಿಸಲು ಹತ್ತಿರದ ದಿನಸಿ ಅಂಗಡಿಗೆ ಹೋಗುತ್ತಾರೆ. ಆದರೆ ನನ್ನನ್ನು ಕರೆದೊಯ್ಯುತ್ತಿಲ್ಲ ಎಂದು ಬರೆದುಕೊಂಡಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ವ್ಲಾಗರ್ ತನ್ನ ಅಜ್ಜ ಅಜ್ಜಿಯೂ ದಿನಸಿ ಅಂಗಡಿಯಲ್ಲಿ ನಿಂತಿರುವುದನ್ನು ತೋರಿಸಿದ್ದಾರೆ. ಅಂಗಡಿಯಿಂದ ಹೊರ ಬರುತ್ತಿದ್ದಂತೆ ಮೊಮ್ಮಗಳ ಕೈಗೆ ತಿಂಡಿಯ ಚೀಲವನ್ನು ಕೊಟ್ಟಿದ್ದಾರೆ. ಮೊಮ್ಮಗಳು ಪ್ರೀತಿಯಿಂದ ತನಗಾಗಿ ಖರೀದಿಸಿದ ತಿಂಡಿಯನ್ನು ತೋರಿಸುತ್ತಿದ್ದಾರೆ.
ಇದನ್ನೂ ಓದಿ : ಚೀಫ್ ಹ್ಯಾಪಿನೆಸ್ ಆಫೀಸರ್ ಆಗಿ ನೇಮಕಗೊಂಡ ಶ್ವಾನ, ಇದು ವಿಶೇಷ ಹುದ್ದೆ
ಈ ವಿಡಿಯೋವೊಂದು ಮೂವತ್ತಾರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ನಿಮಗೆ ವಯಸ್ಸು 26. ಆದರೆ ನಿಮ್ಮ ಅಜ್ಜ ಅಜ್ಜಿ 2+6=8, ಅಂದರೆ ನಿಮಗೆ 8 ವರ್ಷ ಎಂದುಕೊಂಡಿರಬೇಕು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನ್ನ ಅಜ್ಜ ಅಜ್ಜಿ ಕೂಡ ಇದೇ ರೀತಿ ಮಾಡುತ್ತಾರೆ ತಮ್ಮ ಹಿರಿ ಜೀವಗಳ ಪ್ರೀತಿಯನ್ನು ನೆನಪಿಸಿಕೊಂಡಿದ್ದಾರೆ. ಇನ್ನೊಬ್ಬರು, ಪರಿಶುದ್ಧವಾದ ಪ್ರೀತಿ ಎಂದಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ