
ತಂದೆ ತಾಯಿಗೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ (job) ಪಡೆದು ಜೀವನದಲ್ಲಿ ಸೆಟಲ್ ಆಗಬೇಕೆನ್ನುವ ಆಸೆಯಿರುವುದು ಸಹಜ. ಅದೇ ರೀತಿ ಒಂದೊಳ್ಳೆ ಉದ್ಯೋಗ ಸಿಕ್ಕ ಬಳಿಕ ಅಪ್ಪ ಅಮ್ಮ, ಅಜ್ಜ ಅಜ್ಜಿ ಮನೆಯ ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳಬೇಕೆನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಒಳ್ಳೆಯ ಸಂಸ್ಥೆಯಲ್ಲಿ ಉದ್ಯೋಗ ಪಡೆದು ತನ್ನವರನ್ನು ಖುಷಿ ಪಡಿಸುವ ಹಾಗೂ ಅವರ ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸುವ ಘಳಿಗೆ ಬಂದರೆ ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಹೌದು, ಇಂಡಿಗೋ ವಿಮಾನಯಾನ ಸಂಸ್ಥೆಯ ಪೈಲಟ್ (pilot of indigo airlines) ಆಗಿರುವ ಪ್ರದೀಪ್ ಕೃಷ್ಣನ್ (pradeep krishnan) ಅವರು ತಮ್ಮ ಅಜ್ಜ ಅಜ್ಜಿಯನ್ನು ವಿಮಾನದಲ್ಲಿ ಕರೆದುಕೊಂಡು ಹೋಗುವ ಮೂಲಕ ಅವರ ಆಸೆಯನ್ನು ಈಡೇರಿಸುವ ಕೆಲಸ ಮಾಡಿದ್ದಾರೆ.
ಹೌದು, ಇಂಡಿಗೋ ವಿಮಾನಯಾನ ಸಂಸ್ಥೆಯ ಪೈಲಟ್ ಆಗಿ ಕೆಲಸ ಮಾಡುತ್ತಿರುವ ಪ್ರದೀಪ್ ಕೃಷ್ಣನ್ ಅವರು ತಮ್ಮ ಕುಟುಂಬದ ಜೊತೆಗಿನ ವಿಮಾನ ಪ್ರಯಾಣದ ಬಗೆಗಿನ ವಿಡಿಯೋವನ್ನು capt pradeepkrishnan ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಮಾನವು ಚೈನ್ನೈ ಯಿಂದ ಕೊಯಮತ್ತೂರಿಗೆ ಹೊರಟಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ತನ್ನ ಅಜ್ಜಿ ಮತ್ತು ತಾಯಿ ಕೂಡ ಇದ್ದಾರೆ ಎಂದು ಹೇಳಿಕೊಂಡಿದ್ದಾರೆ. ‘ನನ್ನ ಕುಟುಂಬ ನನ್ನೊಂದಿಗೆ ಪ್ರಯಾಣಿಸುತ್ತಿದೆ ಎಂದು ಘೋಷಿಸಲು ತುಂಬಾ ಸಂತೋಷವಾಗಿದೆ. ನನ್ನ ತಾತ, ಅಜ್ಜಿ, ಅಮ್ಮ 29 ನೇ ಸಾಲಿನಲ್ಲಿ ಕುಳಿತಿದ್ದಾರೆ. ನನ್ನ ಅಜ್ಜ ಇಂದು ನನ್ನೊಂದಿಗೆ ಮೊದಲ ಬಾರಿಗೆ ವಿಮಾನದಲ್ಲಿ ಹಾರುತ್ತಿದ್ದಾರೆ. ಹೌದು, ನಾನು ಅವರ TVS50 ಕಾರಿನ ಹಿಂದಿನ ಸೀಟಿನಲ್ಲಿ ಹಲವು ಬಾರಿ ಪ್ರಯಾಣಿಸಿದ್ದೇನೆ, ಈಗ ಅವರಿಗೆ ಸವಾರಿ ಮಾಡುವ ಸರದಿ ನನ್ನದು’ ಎಂದು ಖುಷಿಯಿಂದ ಹೇಳಿಕೊಂಡಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಈ ವಿಮಾನದಲ್ಲಿ ಪ್ರಯಣಿಸುತ್ತಿರುವ ಪ್ರಯಾಣಿಕರು ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಈ ವೇಳೆಯಲ್ಲಿ ಪ್ರದೀಪ್ ಕೃಷ್ಣನ್ ಅವರ ಅಜ್ಜ ಎದ್ದು ನಿಂತು ಸಹಪ್ರಯಾಣಿಕರಿಗೆ ನಮಸ್ಕಾರಿಸಿದ್ದಾರೆ.
ಇದನ್ನೂ ಓದಿ : Viral : ಹರಿದ ಚಪ್ಪಲಿ ಹೊಲಿಯಲು ಸರ್ಜಿಕಲ್ ಸೂಜಿ, ದಾರ ಬಳಸಿದ ವೈದ್ಯಕೀಯ ವಿದ್ಯಾರ್ಥಿ
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ