ಮದುವೆ (Wedding) ಪ್ರತೀ ಹುಡುಗ ಹುಡುಗಿಯ ಕನಸು. ಭಾವನಾತ್ಮಕ ಬಂಧವಾದ ಮದುವೆ ಒಂದಷ್ಟು ಸುಂದರ ಕ್ಷಣಗಳನ್ನು ಸೃಷ್ಟಿಸುವ ಸಂದರ್ಭ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ವಿಡಿಯೋ ಸಖತ್ ವೈರಲ್ ಆಗಿದೆ. ಗ್ರ್ಯಾಂಡ್ ಆಗಿ ರೆಡಿಯಾಗಿ ಬಂದ ವಧುವನ್ನು (Bride) ನೋಡಿ ವರನೊಬ್ಬ (Groom) ಖುಷಿಯಿಂದ ಕಣ್ಣೀರು ಹಾಕಿದ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಬ್ರೈಡಲ್ ಲೆಹೆಂಗಾ ಡಿಸೈನ್ ಎನ್ನುವ ಇನ್ಸ್ಟಾಗ್ರಾಮ್ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ. ಸದ್ಯ ವಿಡಿಯೋ 40 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ.
ವಿಡಿಯೋದಲ್ಲಿ ಗುಲಾಬಿ ಬಣ್ಣದ ಲೆಹೆಂಗಾ ತೊಟ್ಟ ವಧು ಮಂಟಪಕ್ಕೆ ಡ್ಯಾನ್ಸ್ ಮಾಡಿಕೊಂಡು ಬರುತ್ತಾಳೆ. ಒಡವೆ ಧರಿಸಿ ಗ್ರ್ಯಾಂಡ್ ಆಗಿ ರೆಡಿಯಾದ ವಧು ಸಖತ್ ಸ್ಟೆಪ್ ಹಾಕಿದ್ದಾಳೆ. ಇದನ್ನು ನೋಡಿ ವರ ಖುಷಿಯಿಂದ ಕಣ್ಣೀರು ಹಾಕಿದ್ದಾನೆ. ಡ್ಯಾನ್ಸ್ ಮಾಡಿಕೊಂಡು ಬರುತ್ತಿದ್ದ ವಧುವಿನ ಬಳಿ ಹೋದ ವರ ಆಕೆಯನ್ನು ಪ್ರೀತಿಯಿಂದ ಹಗ್ ಮಾಡಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ಅವರು ಎಷ್ಟು ಅದೃಷ್ಟವಂತರು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗುವುದೆಂದರೆ ಸುಲಭವಲ್ಲ ಆದರೆ ಅದರಷ್ಟು ಖುಷಿ ಇನ್ನೊಂದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ:
ತನ್ನದೇ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಿದ ಜಗತ್ತಿನ ಅತೀ ಉದ್ದದ ಕಾರು: ಈಗ ಇದರ ಉದ್ದ 100 ಅಡಿ
Published On - 5:30 pm, Fri, 11 March 22