Viral Video : ಕಂಡನೇ ಮದುಮಗ ಈ ದೊಡ್ಡ ಹಾರದೊಳಗೆ? ಮಲ್ಲಿಗೆ, ಸೇವಂತಿಗೆ, ಸುಗಂಧಿ, ಚಂಡುಹೂ, ಕನಕಾಂಬರ, ಗುಲಾಬಿ ಹೀಗೆ ಹೂಗಳಲ್ಲಿ ಹಾರ ಮಾಡಿ ಮದುಮಕ್ಕಳನ್ನು ಅಲಂಕರಿಸುವುದುಂಟು. ಆದರೆ ಈಗ ವೈರಲ್ ಆಗ ವಿಡಿಯೋದಲ್ಲಿ ನೋಟಿನಿಂದ ಹಾರವನ್ನು ಧರಿಸಿದ್ದಾನೆ ಮದುಮಗ. ಅವನ ಸ್ನೇಹಿತರು ಅಕ್ಕಪಕ್ಕ ನಿಂತು ಆ ಹಾರವನ್ನು ಪ್ರದರ್ಶಿಸುತ್ತಿದ್ದಾರೆ. ದೊಡ್ಡ ಬೆಡ್ಶೀಟಿನಂತೆ ಕಾಣುತ್ತಿರುವ ಈ ಹಾರ ನೆಲದ ಮೇಲೆಲ್ಲ ಹರಡಿಕೊಂಡಿದೆ. ನೆಟ್ಟಿಗರಂತೂ ಹೌಹಾರಿ ಕುಳಿತಿದ್ದಾರೆ ಈ ವಿಡಿಯೋ ನೋಡಿ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ 3.5 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿದ್ದಾರೆ. ನೂರಾರು ಜನರು ತಮಗನಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಬೇಕಿತ್ತಾ ಇಷ್ಟೊಂದು ಆಡಂಬರ ಎಂದು ಕೆಲವರು ಕೇಳುತ್ತಿದ್ದಾರೆ. ಮದುವೆಯ ನಂತರ ಕಾದಿದೆ, ಈಗ ಮಾಡು ಮಾಡು ಮಜಾ ಎಂದಿದ್ದಾರೆ ಇನ್ನೂ ಒಬ್ಬರು. ಇಲ್ಲಿರುವ ನೋಟುಗಳು ಎಷ್ಟರವು ಎಂದಿದ್ದಾರೆ ಮತ್ತೊಬ್ಬರು. ಇದೆಲ್ಲ ನಿಮ್ಮ ಮಾವ ಕೊಟ್ಟ ನೋಟುಗಳಾ ಎಂದಿದ್ದಾರೆ ಮಗದೊಬ್ಬರು.
ಸರಳವಾಗಿ ಮದುವೆಯಾಗುತ್ತಿರುವವರ ಮಧ್ಯೆ ಇಂಥವರು ಒಳ್ಳೆ ಜೋಕರ್ಗಳಂತೆ ಕಾಣುವುದಂತೂ ಸತ್ಯ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:44 pm, Sat, 22 October 22