AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಾರೆ ಸಾರೆ ತಿಂದಾರೆ ನೋಡು ಈ ನೀಲಿನೀಲಿ ಇಡ್ಲಿ; ನೋಡಿ ವಿಡಿಯೋ

Idli : ನೀಲಿ ಇಡ್ಲಿ!? ಬೇಡಪ್ಪಾ. ಇವು ಮಾಮೂಲಿ ಇಡ್ಲಿಯಂತೆಯೇ ರುಚಿ ಇರುತ್ತಾವಾ? ಏನೇ ಆಗಲಿ ನಮಗೆ ಸಾದಾ ಇಡ್ಲಿಯೇ ಸಾಕು. ಶಂಖಪುಷ್ಟ ಆರೋಗ್ಯಕ್ಕೂ ಒಳ್ಳೆಯದು. ಹೀಗೆ ಮಿಶ್ರಪ್ರತಿಕ್ರಿಯೆಗಳು ಈ ನೀಲಿಹೂವಿನ ಇಡ್ಲಿ ಸುತ್ತ ಮಾಲೆ ಕಟ್ಟುತ್ತಿವೆ.

ಒಂದಾರೆ ಸಾರೆ ತಿಂದಾರೆ ನೋಡು ಈ ನೀಲಿನೀಲಿ ಇಡ್ಲಿ; ನೋಡಿ ವಿಡಿಯೋ
Woman makes blue idlis using butterfly pea flowers
Follow us
TV9 Web
| Updated By: ಶ್ರೀದೇವಿ ಕಳಸದ

Updated on: Oct 22, 2022 | 5:49 PM

Viral Video : ಬೀಟ್ರೂಟ್ ಇಡ್ಲಿ, ಕ್ಯಾರೆಟ್ ಇಡ್ಲಿ, ಪಾಲಕ್​ ಇಡ್ಲಿ ಹೀಗೆ ಸಾಕಷ್ಟು ಬಣ್ಣಬಣ್ಣದ ಇಡ್ಲಿಗಳ ಸಾಲಿಗೆ ಸೇರುತ್ತಿದೆ ಈ ಆಕಾಶ ನೀಲಿ ಇಡ್ಲಿ. ಶಂಖಪುಷ್ಟದ (Butterfly pea flowers) ರಸವನ್ನು ಬೆರೆಸಿ ಮಾಡಿದ್ದಕ್ಕೆ ಈ ಇಡ್ಲಿ ಹೀಗೆ ಈ ಬಣ್ಣಕ್ಕೆ ತಿರಗುಕೊಂಡಿದೆ. ನೆಟ್ಟಿಗರು ಈ  ಕಣ್ಣುಬಿಟ್ಟು ನೋಡುತ್ತಲೇ ಇದ್ದಾರೆ. ನೋಡುವುದಕ್ಕಂತೂ ಬಹಳ ಚೆಂದವಿದೆ ರುಚಿ ಹೇಗಿದೆಯೋ ಎಂದೆಲ್ಲ ಕೇಳುತ್ತಿದ್ಧಾರೆ. ಜ್ಯೋತೀಸ್​ ಕಿಚನ್ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ Blue Pea Idli ವಿಡಿಯೋ ಹಂಚಿಕೊಳ್ಳಲಾಗಿದೆ.

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by jyotiz kitchen (@jyotiz_kitchen)

ಈವತ್ತು ಕೃತಕ ಬಣ್ಣಗಳನ್ನು ಬೆರೆಸಿ ಅಡುಗೆ ಮಾಡಿ ಆಕರ್ಷಿಸುವುದು ಸಾಮಾನ್ಯ ಸಂಗತಿ. ಆದರೆ ಈ ಕೃತಕ ಬಣ್ಣಗಳಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದರ ಬದಲಾಗಿ ನಿಸರ್ಗದತ್ತ ತರಕಾರಿ, ಸೊಪ್ಪು, ಹೂಗಳನ್ನು ಕುದಿಸಿ ರಸತೆಗೆದು ಅಡುಗೆಗೆ ಬೆರೆಸಿದರೆ ಬಣ್ಣದ ಜೊತೆಗೆ ಪೋಷಕಾಂಶಗಳು ನಮ್ಮ ಹೊಟ್ಟೆ ಸೇರುತ್ತವೆ. ಇಂಥ ಪ್ರಯೋಗಗಳು ಇದೀಗ ಇಂಟರ್​ನೆಟ್​ನಲ್ಲಿ ಕಾಣಸಿಗುತ್ತಿವೆ. ಇವೆಲ್ಲವೂ ಹಳೆಯ ಅಡುಗೆ ರಹಸ್ಯಗಳೇ! ಆದರೆ ಫಾಸ್ಟ್​ಲೈಫ್​ನಲ್ಲಿ ಯಾರಿಗೆ ಇದೆಲ್ಲವನ್ನು ಹೆಕ್ಕಿ ತೆಗೆಯುವ ಸಮಯವಿತ್ತು. ಕೊರೊನಾದ ಗೃಹಬಂಧನದಲ್ಲಿ ಹೀಗೆ ತರಹೇವಾರಿ ಪ್ರಯೋಗಗಳ ವಿಡಿಯೋಗಳೆಲ್ಲ ಇಂದು ಇಂಟರ್​ನೆಟ್ಟಿನಲ್ಲಿ ಬಂದು ಕೂತಿವೆ. ಇದು ಹೀಗೇ ಮುಂದುವರಿಯುತ್ತ ನೆಟ್ಟಿಗರನ್ನು ಸೆಳೆಯುತ್ತಿದೆ.

ಈ ತನಕ ಈ ವಿಡಿಯೋ ಅನ್ನು 8.2 ಲಕ್ಷ ಜನ ನೋಡಿದ್ದಾರೆ. ಸುಮಾರು 32,000 ಜನ ಇಷ್ಟಪಟ್ಟಿದ್ದಾರೆ. ಈ ಹೂಗಳು ಸೇವನೆಗೆ ಯೋಗ್ಯ. ಇದರಿಂದ ಚಹಾ ಕೂಡ ಮಾಡುತ್ತಾರೆ ಎಂದಿದ್ದಾರೆ ಒಬ್ಬರು. ಅಯ್ಯೋ ದೇವರೇ ಏನಿದೆಲ್ಲ ಇಡ್ಲಿಯನ್ನು ಹೀಗೆಲ್ಲ ನೋಡಲಾಗದು ಎಂದಿದ್ದಾರೆ ಇನ್ನೂ ಒಬ್ಬರು. ಬಹಳ ಚೆನ್ನಾಗಿದೆ ನೋಡಲು ಮತ್ತು ಆರೋಗ್ಯಕ್ಕೂ ಎಂದಿದ್ದಾರೆ ಮತ್ತೊಬ್ಬರು. ಇದು ನಾರ್ಮಲ್​ ಇಡ್ಲಿಯಂತೆಯೇ ರುಚಿ ಇರುತ್ತದೆಯಾ ಅಥವಾ ಬೇರೆ ಇರುತ್ತದೆಯಾ ಎಂದಿದ್ಧಾರೆ ಮಗದೊಬ್ಬರು. ಇದಕ್ಕೆ ಪ್ರತ್ಯುತ್ತರವಾಗಿ ಜ್ಯೋತೀಸ್​ ಕಿಚನ್​ ನಿರ್ವಹಿಸುತ್ತಿರುವ ಖಾತೆದಾರರು, ಮಾಮೂಲಿ ಇಡ್ಲಿ ಹೇಗಿರುತ್ತದೆಯೋ ಹಾಗೇ ಇರುತ್ತದೆ ಎಂದಿದ್ದಾರೆ.

ನಿಮಗೂ ಇಂಥ ಇಡ್ಲಿ ಇಷ್ಟವಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ