ಅಮ್ಮನ ಲಿಪ್ಸ್ಟಿಕ್ಕು, ಅಪ್ಪನ ಕಾರು; ಗೀಚುವುದೇ ನಮ್ಮ ಜನ್ಮಸಿದ್ಧ ಹಕ್ಕು! ಸರಿ ಇದೆ ಮಗಾ
Scribbling : ಗೋಡೆಗೆ ಬೇಡ ಅಂತೀರಿ, ಟೇಬಲ್ಗೆ ಬೇಡ ಅಂತೀರಿ, ಟೀವಿಗೂ ಬೇಡ ಅಂತೀರಿ. ಮತ್ತೆಲ್ಲಿ ಗೀಚಬೇಕು ನಾನು? ಅದಕ್ಕೆ ಅಪ್ಪನ ಕಾರಿಗೆ ಹೀಗೆಲ್ಲ ಗೀಚಿ ನನ್ನ ಗಾಡಿ ತಗೊಂಡು ಓಟ! ಶ್, ಹೇಳಬೇಡಿ ನಾನೆಲ್ಲಿದೀನಿ ಅಂತ ಅವರಿಗೆ.
Viral Video : ಗೀಚುವಿಕೆಗೂ ಮಕ್ಕಳ ಮಾನಸಿಕ ಬೆಳವಣಿಗೆಗೂ ಸಂಬಂಧವಿದೆ. ಪೆನ್ಸಿಲ್, ರಬ್ಬರ್, ಪೆನ್ನು, ಪೇಂಟು ಹೀಗೆ ಏನನ್ನೂ ಕೈಯಲ್ಲಿ ಹಿಡಿದು ಗೀಚುವುದರಿಂದ ಮೆದುಳು ಪ್ರಚೋದನೆಗೆ ಒಳಗಾಗುತ್ತದೆ. ಶೇಖರಣೆಗೊಂಡ ಒತ್ತಡ ಈ ಪ್ರಕ್ರಿಯೆಯಿಂದ ಬಿಡುಗಡೆ ಪಡೆದು ಮಗುವಿನ ಮನಸ್ಸು ಪ್ರಫುಲ್ಲಿತವಾಗುತ್ತದೆ. ಹಾಗಾಗಿ ಮಗುವಿನ ಗೀಚುವಿಕೆಯನ್ನು ತಡೆಯಬೇಡಿ ಎನ್ನುತ್ತಾರೆ ಮನೋವೈದ್ಯರು. ನಿಜ, ಅದು ಹೀಗೆ ಎಲ್ಲೆಂದರಲ್ಲಿ ಗೀಚಿದರೆ ನಿಭಾಯಿಸಲು ಕಷ್ಟವೇ. ಹಾಗಾಗಿ ಈ ಗೀಚುವಿಕೆಗೆ ಒಂದು ಸರಿಯಾದ ವ್ಯವಸ್ಥೆಯನ್ನು ಸಾಮಾನ್ಯವಾಗಿ ತಂದೆತಾಯಿಗಳು ಕಲ್ಪಿಸಿಕೊಡುತ್ತಾರೆ. ಪೇಪರ್ ಮೇಲೋ, ಬೋರ್ಡಿನ ಮೇಲೋ ಹೀಗೆ. ಆದರೂ ಮಕ್ಕಳು ಕೇಳವು! ಗೋಡೆಯೇ ಆಗಬೇಕು, ಟೇಬಲ್ಲೇ ಆಗಬೇಕು ಅನ್ನುತ್ತವೆ. ಏಕೆಂದರೆ ಗೀಚುತ್ತಿದ್ದಾಗ ಹೊಮ್ಮುವ ಸೂಕ್ಷ್ಮವಾದ ಕರಕರ ಶಬ್ದವನ್ನು ಮಕ್ಕಳು ಆನಂದಿಸುತ್ತವೆ. ಇದ್ಯಾವುದಕ್ಕೂ ನೀವು ಅವಕಾಶ ಮಾಡಿಕೊಡದಿದ್ದರೆ ಈಗ ನೋಡಿ ಈ ವಿಡಿಯೋದ ಗತಿ ಉಂಟಾಗುತ್ತದೆ!
He’ll own a body shop one da ? pic.twitter.com/Jhx6qOxY95
ಇದನ್ನೂ ಓದಿ— Morissa Schwartz (Dr. Rissy) (@MorissaSchwartz) October 20, 2022
ತೀರಾ ಕಟ್ಟಿಹಾಕಿದರೆ ಮಕ್ಕಳು ಹೀಗೆಲ್ಲ ಅದ್ಭುತವಾಗಿ ಹಾದಿ ಹುಡುಕಿಕೊಳ್ಳುತ್ತವೆ. ಒಂದು ಡಝನ್ನಷ್ಟು ತನ್ನ ಅಮ್ಮನ ಲಿಪ್ಸ್ಟಿಕ್ ತಂದು, ತನ್ನ ಅಪ್ಪನ ಕಾರಿಗೆ ಹೀಗೆಲ್ಲ ಗೀಚಿದೆ ಈ ಮಗು. ಅಷ್ಟೇ ಅಲ್ಲ, ನಂತರ ಅಪ್ಪ ಅಮ್ಮ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎನ್ನುವುದು ಗೊತ್ತಲ್ಲ, ತಕ್ಷಣವೇ ತನ್ನ ಸೈಕಲ್ ಏರಿ ಅಲ್ಲಿಂದ ತಪ್ಪಿಸಿಕೊಳ್ಳಲು ನೋಡಿದೆ. ಎಂಥ ಮುದ್ದು ಕಿರಾತಕ ಇದು ಈಗಲೇ?
1 ಮಿಲಿಯನ್ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿ ಮನಸೋತಿದ್ದಾರೆ. ಹಲವಾರು ಜನ ಮಗುವನ್ನು ಶ್ಲಾಘಿಸಿದ್ದಾರೆ. ‘ಬೀದಿಬೀದಿ ತಿರುಗಿಕೊಂಡು ಹೋಗುವ ಬದಲಾಗಿ ಇವನು ಹೀಗೆ ಮಾಡಿದ್ದು ಒಳ್ಳೆಯದೇ’ ಎಂದಿದ್ದಾರೆ ಒಬ್ಬರು. ‘ಇವನು ಮತ್ತಷ್ಟು ಸುಂದರಗೊಳಿಸಿದ್ದಾನೆ ಈ ಕಾರನ್ನು’ ಎಂದಿದ್ದಾರೆ ಮತ್ತೊಬ್ಬರು. ‘ಬಿಡಬೇಡಿ ಇವನಿಗೆ ದಂಡ ಹಾಕಿ!’ ಎಂದು ಮುದ್ದಾಗಿ ಗದರಿದ್ದಾರೆ ಮತ್ತೊಬ್ಬರು. ‘ಹೀಗೆ ಮಾಡು ಎಂದು ಇವನಮ್ಮನೇ ಕಳಿಸಿರಲು ಸಾಕು!’ ಎಂದಿದ್ದಾರೆ ಮಗದೊಬ್ಬರು. ‘ಇವನು ಭವಿಷ್ಯದ ಕಾರ್ ವಿನ್ಯಾಸಕ’ ಎಂದಿದ್ದಾರೆ ಇನ್ನೂ ಒಬ್ಬರು.
ನಿಮಗೆ ಅದೇ ಲಿಪ್ಸ್ಟಿಕ್ ಹಚ್ಚಿ ಹಚ್ಚಿ ಬೇಸರವಾಗಿದ್ದರೆ ಮತ್ತು ನಿಮ್ಮ ಕಾರಿಗೆ ವಿನ್ಯಾಸ ಬೇಕಿದ್ದರೆ ಈ ಮುದ್ದುಮಗುವನ್ನು ಸಂಪರ್ಕಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:25 pm, Sat, 22 October 22