‘ಸೋಮವಾರವು ವಾರದ ಕೆಟ್ಟ ದಿನ’ ಗಿನ್ನೀಸ್​ ವರ್ಲ್ಡ್ ರೆಕಾರ್ಡ್ಸ್​ ಅಧಿಕೃತ ಘೋಷಣೆ

Guinness World Records : ಓಹೋ Monday Blues ಕುರಿತು ಹೀಗೆ ಹೇಳಲು ಈಗಾಗಲೇ ನೀವು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದೀರಿ ಎಂದು ನೆಟ್ಟಿಗರೊಬ್ಬರು ರೀಟ್ವೀಟ್ ಮಾಡಿ ತಮಾಷೆ ಮಾಡಿದ್ದಾರೆ.

‘ಸೋಮವಾರವು ವಾರದ ಕೆಟ್ಟ ದಿನ’ ಗಿನ್ನೀಸ್​ ವರ್ಲ್ಡ್ ರೆಕಾರ್ಡ್ಸ್​ ಅಧಿಕೃತ ಘೋಷಣೆ
Guinness World Records Officially Declares Monday as Worst Day of the Week
Updated By: ಶ್ರೀದೇವಿ ಕಳಸದ

Updated on: Oct 18, 2022 | 1:07 PM

Viral Video : ಸೋಮವಾರವು ವಾರದ ಕೆಟ್ಟ ದಿನ ಎಂದು ಗಿನ್ನೀಸ್​ ವರ್ಲ್ಡ್​ ರೆಕಾರ್ಡ್​ ಅಧಿಕೃತವಾಗಿ ಘೋಷಿಸಿದ್ದು, ಈ ಪೋಸ್ಟ್​ ಇದೀಗ ವೈರಲ್ ಆಗಿದೆ. ಏನಾದರೂ ಹೊಸ ಕೆಲಸ ಆರಂಭಿಸಲು, ವಿಶೇಷ ಯೋಜನೆ ಹಮ್ಮಿಕೊಳ್ಳಲು ಅಥವಾ ಯಾವುದೇ ಶುಭಾರಂಭಕ್ಕೆ ಸೋಮವಾರ ಸೂಕ್ತ ದಿನವಲ್ಲ. ಅಕಸ್ಮಾತ್​ ಮುಂದುವರಿದರೆ ಖಂಡಿತವಾಗಿಯೂ ಏಳ್ಗೆ ಸಾಧ್ಯವಾಗದು ಎನ್ನುವ ಅರ್ಥವನ್ನು ಈ ಒಕ್ಕಣೆ ಹೊಮ್ಮಿಸುತ್ತದೆ. Monday Blues ಕುರಿತು ಹೀಗೆ ಹೇಳಲು ಈಗಾಗಲೇ ನೀವು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದೀರಿ ಎಂದು ನೆಟ್ಟಿಗರೊಬ್ಬರು ರೀಟ್ವೀಟ್ ಮಾಡಿ ತಮಾಷೆ ಮಾಡಿದ್ದಾರೆ.

ಇದು ವಿಚಿತ್ರವಾಗಿದೆ ಹಾಗಿದ್ದರೆ ಬುಧವಾರದ ಬಗ್ಗೆ ಏನು ಹೇಳುತ್ತೀರಿ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಆ ದಿನವೇ ನನ್ನ ಜನ್ಮದಿನ ಏನು ಮಾಡಲಿ ಎಂದು ಮತ್ತೊಬ್ಬರು ಕೇಳಿದ್ದಾರೆ. ಆಗ್ನೇಯ ನೈಜೀರಿಯಾ ನಿವಾಸಿಗಳು ಇದನ್ನು ನಂಬುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಇನ್ನೂ ಒಬ್ಬರು. ನಿಜ, ನೀವು ಹೇಳಿದ್ದು ಸರಿ ಇದೆ Monday Blues ಕುರಿತು, ನಾನಿದನ್ನು ಅನುಭವಿಸಿದ್ದೇನೆ ಎಂದು ಮಗದೊಬ್ಬರು ಹೇಳಿದ್ದಾರೆ. ಇದೊಂದು ಹುಚ್ಚತನ, ನನಗಂತೂ ನಗು ಬರುತ್ತಿದೆ ಎಂದು ಇನ್ನೊಬ್ಬ ನೆಟ್ಟಿಗರು ರೀಟ್ವೀಟ್ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಅವರವರ ಆಯ್ಕೆಗಳು ಇದ್ದೇ ಇರುತ್ತವೆ. ನನಗಂತೂ ಸೋಮವಾರವೆಂದರೆ ಶ್ರೇಷ್ಠ, ನಿಮಗೆ ಯಾವ ದಿನ ಶ್ರೇಷ್ಠ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

7 ಲಕ್ಷ ಜನರು ರೀಟ್ವೀಟ್ ಮಾಡಿದ್ದಾರೆ. 4 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ಪೋಸ್ಟ್​ ಲೈಕ್​ ಮಾಡಿದ್ದಾರೆ. ನಿಮಗೆ ಏನು ಅನ್ನಿಸುತ್ತಿದೆ ಗಿನ್ನೀಸ್​ ವರ್ಲ್ಡ್​ ರೆಕಾರ್ಡ್​ನ ಈ ಟ್ವೀಟ್​?

ಮತ್ತಷ್ಟು ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:54 pm, Tue, 18 October 22