ಹಿಂದೂ ಪದ್ಧತಿಯಂತೆ ಕೋತಿಯ ಅಂತ್ಯಕ್ರಿಯೆ, ರಾಜಸ್ಥಾನದ ಹಳ್ಳಿಯೊಂದರಲ್ಲಿ ನಡೆದ ಘಟನೆ ವೈರಲ್
Hindu Rituals : ‘ಅರೆ ಈಗ ಇದೇನಿದು, ಹೊಸ ಭಾರತವಾ?’ ನೆಟ್ಟಿಗರೊಬ್ಬರ ಪ್ರಶ್ನೆಗೆ, ‘ಹಳೆಯ ಭಾರತದಲ್ಲಿ ಕುರಿಯನ್ನು ಗೌರವದಿಂದ ಕಾಣುತ್ತಿದ್ದರು’ ಎಂದು ಪ್ರತಿಯಾಗಿ ಟ್ವೀಟಿಸಿದ್ದಾರೆ ಇನ್ನೊಬ್ಬರು. ನಿಮ್ಮ ಅಭಿಪ್ರಾಯವೇನು ಈ ವಿಷಯವಾಗಿ?
Viral Video : ಪ್ರಾಣಿಪ್ರಿಯರು ಸಾಕುಪ್ರಾಣಿಗಳನ್ನು ಮನೆಯ ಸದಸ್ಯರಂತೆಯೇ ಕಾಣುತ್ತಾರೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪುರಾವೆಗಳಿವೆ. ಪ್ರಾಣಿಗಳಿಗೆಂದೇ ಪ್ರತ್ಯೇಕ ಪುಟವನ್ನು ಸೃಷ್ಟಿಸಿ ಅವುಗಳ ಚಟುವಟಿಕೆಗಳನ್ನು ಅಪ್ಡೇಟ್ ಮಾಡುವುದನ್ನು ನಿತ್ಯವೂ ನೋಡುತ್ತೇವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೋತಿಯೊಂದರ ಅಂತ್ಯಸಂಸ್ಕಾರವನ್ನು ಹಿಂದೂ ಪದ್ಧತಿಯಂತೆ ನೆರವೇರಿಸಿರುವುದು ಕಂಡುಬರುತ್ತದೆ. ಶನಿವಾರದಂದು ಅಕಸ್ಮಾತ್ ಆಗಿ ಕರೆಂಟ್ ತಗುಲಿ ಮೃತಪಟ್ಟ ಈ ಕೋತಿಯನ್ನು ಹಳ್ಳಿಗರು ಮನುಷ್ಯ ಸಮಾನ ಗೌರವ ಸಲ್ಲಿಸಿ ಅದರ ಅಂತಿಮಯಾತ್ರೆಯನ್ನು ಸಂಪನ್ನಗೊಳಿಸಿದ್ದಾರೆ.
करंट लगने से हुई बंदर की मौत, गाने-बाजे के साथ निकली शव यात्रा | Unseen India pic.twitter.com/d1o8xwJMTI
ಇದನ್ನೂ ಓದಿ— UnSeen India (@USIndia_) October 17, 2022
ನಿತ್ಯವೂ ಒಡನಾಡುವ ಕೋತಿಯು ಹೀಗೆ ಆಕಸ್ಮಿಕ ಅವಘಡದಿಂದ ಸಾವನ್ನಪ್ಪಿದಾಗ ರಾಜಸ್ಥಾನದ ಅಳ್ವರ್ ಗ್ರಾಮಸ್ಥರಿಗೆ ದುಃಖವಾಗಿದೆ. ಆಗ ಕೋತಿಯ ಶವವನ್ನು ಹೂ ಮತ್ತು ಗುಲಾಲಿನಿಂದ ಅಲಂಕರಿಸಿ, ಅದನ್ನು ಹೊತ್ತೊಯ್ಯುವ ಗಾಡಿಯನ್ನೂ ಹೂ, ಬಲೂನುಗಳಿಂದ ಚೆಂದಗೊಳಿಸಿ, ಬಾಜಾ ಭಜಂತ್ರಿಯೊಂದಿಗೆ ಹಳ್ಳಿಯ ತುಂಬಾ ಮೆರವಣಿಗೆ ಮಾಡಿ ಹಿಂದೂ ಪದ್ಧತಿಯ ಪ್ರಕಾರ ಅದರ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.
ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕೆಲ ಹಳ್ಳಿಗರು ಈ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿರುವುದನ್ನು ಕಾಣಬಹುದಾಗಿದೆ. ಭಾರತದಲ್ಲಿ ಕೆಲವೆಡೆ ಕೋತಿಯನ್ನು ಹನುಮಂತನ ಅಪರಾವತಾರ ಎಂದು ಪೂಜಿಸುವುದು ಚಾಲ್ತಿಯಲ್ಲಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ನೆಟ್ಟಿಗರು ಈ ವಿಡಿಯೋ ಕುರಿತು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ‘ಅರೆ ಈಗ ಇದೇನಿದು? ಹೊಸ ಭಾರತವಾ’ ಎಂದು ಒಬ್ಬರು ಟೀಕಿಸಿದ್ದಾರೆ. ‘ಹಳೆಯ ಭಾರತದಲ್ಲಿ ಕುರಿಯನ್ನು ಗೌರವದಿಂದ ಕಾಣುತ್ತಿದ್ದರು’ ಎಂದು ಮತ್ತೊಬ್ಬರು ಈ ಟ್ವೀಟ್ಗೆ ಪ್ರತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಹೀಗೆ ಕೋತಿಯನ್ನು ಅಂತ್ಯಸಂಸ್ಕಾರ ಮಾಡಿದ್ದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:10 pm, Tue, 18 October 22