3 ಗಂಟೆ 6 ನಿಮಿಷ 45 ಸೆಕೆಂಡ್‌ಗಳ ಕಾಲ ಐಸ್ ಪೆಟ್ಟಿಗೆಯಲ್ಲಿ ನಿಂತುಕೊಳ್ಳುವ ಮೂಲಕ ಪೋಲೆಂಡ್ನ ಕಟರ್ಜಿನಾ ಜಕುಬೌಸ್ಕಾ (48) ವಿಶ್ವ ದಾಖಲೆಯನ್ನು(Guinness World Records) ಬರೆದಿದ್ದಾರೆ. ಈ ಹಿಂದೆ 1 ಗಂಟೆ 53 ನಿಮಿಷಗಳ ವರೆಗೆ ಐಸ್ ಬಾಕ್ಸ್‌ನಲ್ಲಿ ನಿಂತು “ದಿ ಐಸ್‌ಮ್ಯಾನ್” ಎಂದು ದಾಖಲೆ ಬರೆದಿದ್ದ ವ್ಯಕ್ತಿ ದಾಖಲೆಯನ್ನು ಮುರಿದು ‘ದಿ ಐಸ್ ವುಮೆನ್’ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಡಿಸೈನರ್ ಆಗಿ ಕೆಲಸ ಮಾಡುವ ಕಟರ್ಜೈನಾ ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ಮತ್ತು ಸವಾಲುಗಳಲ್ಲಿ ಹೆಚ್ಚಿನ ಮಹಿಳಾ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಈ ದಾಖಲೆಯನ್ನು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದ್ದಾರೆ. ಈ ವಿಶ್ವ ದಾಖಲೆಯನ್ನು ಪ್ರಯತ್ನಿಸುವ ಮೊದಲು, ಕಟಾರ್ಜಿನಾಗೆ ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. 3ಗಂಟೆಗಳ ಕಾಲ ಐಸ್ ಬಾಕ್ಸ್‌ನಲ್ಲಿ ನಿಂತಿರುವ ಸಮಯದಲ್ಲಿ ಅವಳ ದೇಹದ ಉಷ್ಣತೆಯ ಏರಿಳಿತಗಳನ್ನು ಪರೀಕ್ಷಿಸಲಾಗಿತ್ತು.
ಇದನ್ನೂ ಓದಿ: ಇದು ಸೂರಿಲ್ಲದವರ ಬದುಕಿನ ನೈಜ ಚಿತ್ರಣ, ರೈಲು ಹಳಿಗಳ ಪಕ್ಕದಲ್ಲಿ ಕುಳಿತು ಜೀವನ ಕಳೆಯುತ್ತಿರುವ ಕುಟುಂಬ!
ತಾನು ವಿಶ್ವದಾಖಲೆ ಮಾಡುವ 3ಗಂಟೆಗಳಲ್ಲಿ ಯಾವುದೇ ನೋವು ಅಥವಾ ಅಸ್ವಸ್ಥತೆಯನ್ನು ಅನುಭವಿಸಲಿಲ್ಲ ಎಂದು ಕಟಾರ್ಜಿನಾ ಹೇಳಿದ್ದಾರೆ. ರೆಕಾರ್ಡ್ ಪ್ರಯತ್ನದ ಉದ್ದಕ್ಕೂ, ಆಕೆಯ ದೇಹದ ಉಷ್ಣತೆ ಮತ್ತು ಪ್ರಜ್ಞೆಯ ಸ್ಥಿತಿಯನ್ನು ನಿಯಮಿತವಾಗಿ ತಪಾಸಣೆ ಮಾಡಲಾಗಿದ್ದು, ಆಕೆ ಮುಂದುವರಿಯಲು ಸಮರ್ಥಳಾಗಿದ್ದಾಳೆ ಎಂದು ಖಚಿತಪಡಿಸಿಕೊಳ್ಳಲಾಗಿತ್ತು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ