Viral Video : ಬಾಯಿ ಚಪ್ಪರಿಸುತ್ತಾ ನೂಡಲ್ಸ್ ಸವಿಯುತ್ತೀರಾ, ಈ ವಿಡಿಯೋ ನೋಡಿದ್ರೆ ನೂಡಲ್ಸ್ ಹೆಸರು ಸಹ ಹೇಳುವುದಿಲ್ಲ!

ಆಹಾರ ಪ್ರಿಯರಿಗೆ ತಿನ್ನುವುದೆಂದರೆ ಬಹಳ ಇಷ್ಟ. ಹೀಗಾಗಿ ಬಗೆ ಬಗೆಯ ಆಹಾರಗಳ ರುಚಿಯನ್ನು ಸವಿಸಲು ಇಷ್ಟ ಪಡುತ್ತಾರೆ. ಇಂತಹ ಆಹಾರ ಪ್ರಿಯರ ಮನಸ್ಸನ್ನು ಸೆಳೆಯಲು ವಿವಿಧ ಆಹಾರ ತಿಂಡಿ ತಯಾರಿಸುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬೀದಿ ವ್ಯಾಪಾರಿಯೊಬ್ಬರು ನದಿಯ ನೀರಿನಲ್ಲಿ ನೂಡಲ್ಸ್ ತೊಳೆಯುತ್ತಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ನೂಡಲ್ಸ್ ಪ್ರಿಯರು ಶಾಕ್ ಆಗಿದ್ದಾರೆ.

Viral Video : ಬಾಯಿ ಚಪ್ಪರಿಸುತ್ತಾ ನೂಡಲ್ಸ್ ಸವಿಯುತ್ತೀರಾ, ಈ ವಿಡಿಯೋ ನೋಡಿದ್ರೆ ನೂಡಲ್ಸ್ ಹೆಸರು ಸಹ ಹೇಳುವುದಿಲ್ಲ!
Viral VideoImage Credit source: instagram
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Jan 27, 2024 | 6:38 PM

ಸಂಜೆಯಾದರೆ ಸಾಕು ಬೀದಿ ಬದಿಗಳಲ್ಲಿ ವ್ಯಾಪಾರಿಗಳು ಫಾಸ್ಟ್ ಫುಡ್ ಗಳನ್ನು ತಯಾರಿಸುತ್ತಾ ತಮ್ಮ ವ್ಯಾಪಾರವನ್ನು ಶುರು ಮಾಡುತ್ತಿರುತ್ತಾರೆ. ಆಹಾರ ಪ್ರಿಯರಂತೂ ಫಾಸ್ಟ್ ಫುಡ್ ಗಳನ್ನು ಸವಿಯಲು ಕ್ಯೂ ನಿಂತಿರುತ್ತಾರೆ. ಬೀದಿ ಬದಿಯ ವ್ಯಾಪಾರಿಗಳು ರುಚಿ ರುಚಿಯಾಗಿ ತಿಂಡಿ ತಿನಿಸುಗಳನ್ನು ತಯಾರಿಸುವ ಕಾರಣ ಹೋಟೆಲ್ ರೆಸ್ಟೋರೆಂಟ್‌ಗೆ ಹೋಗುವ ಬದಲು ಸಣ್ಣ ಪುಟ್ಟ ಅಂಗಡಿಗಳಿಗೆ ಹೋಗುವವರೇ ಹೆಚ್ಚು. ಈ ಅಂಗಡಿಗಳಲ್ಲಿ ಜೇಬಿಗೆ ಅಷ್ಟೇನು ಕತ್ತರಿ ಬೀಳುವುದಿಲ್ಲ ಜೊತೆಗೆ ರುಚಿಯ ವಿಚಾರದಲ್ಲಿ ಮೋಸವಿರುವುದಿಲ್ಲ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬೀದಿ ವ್ಯಾಪಾರಿಯೊಬ್ಬರು ನದಿಯ ನೀರಿನಲ್ಲಿ ನೂಡಲ್ಸ್ ತೊಳೆಯುತ್ತಿದ್ದಾರೆ.

ಈ ವಿಡಿಯೋವನ್ನು ನೋಡಿದ ಮೇಲೆ ಆಹಾರ ಪ್ರಿಯರಲ್ಲಿ ಬೀದಿ ಬದಿಯಲ್ಲಿರುವ ಅಂಗಡಿಗಳಲ್ಲಿ ಫಾಸ್ಟ್ ಫುಡ್ ಸೇವಿಸುವುದು ಒಳ್ಳೆಯದಾ, ನೂಡಲ್ಸ್ ಹೀಗೂ ತಯಾರಿಸುತ್ತಾರಾ ಎನ್ನುವ ಪ್ರಶ್ನೆಗಳು ಮೂಡಿದೆ. ಬೀದಿ ಬದಿಯ ವ್ಯಾಪಾರಿಯೊಬ್ಬರು ನದಿಯಲ್ಲಿ ನೂಡಲ್ಸ್ ತೊಳೆಯುತ್ತಿದ್ದು ನದಿಯ ನೀರು ಕಲುಷಿತಗೊಂಡಿದೆ. ಇದು ಉತ್ತರ ಪ್ರದೇಶದ ಕುಕುರ್ಘಾಟಿ ಗ್ರಾಮದಲ್ಲಿನ ವಿಡಿಯೋ ಇದಾಗಿದೆ. ಈ ನೂಡಲ್ಸ್ ತಯಾರಿಸಲು ಮೊದಲು ಅದನ್ನು ಕುದಿಸಿ ನಂತರ ತೊಳೆಯಲಾಗುತ್ತದೆ. ಆದರೆ ಈ ಬೀದಿ ಬದಿ ವ್ಯಾಪಾರಿಯೂ ಕಲುಷಿತ ಗೊಂಡಿರುವ ನದಿಯ ನೀರಿನಲ್ಲಿ ನೂಡಲ್ಸ್ ತೊಳೆಯುತ್ತಿರುವುದೇ ವೈರಲ್ ಆಗಲು ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: ಹೆಂಡತಿಯನ್ನು ಎತ್ತಿಕೊಳ್ಳಲು ಹೋಗಿ ಸೊಂಟ ಮುರಿದುಕೊಂಡ ಗಂಡ; ವಿಡಿಯೋ ವೈರಲ್

ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ. ನೈರ್ಮಲ್ಯಕ್ಕೆ ಗಮನ ಕೊಡದೇ ಕಲುಷಿತ ನೀರಿನಲ್ಲಿ ನೂಡಲ್ಸ್ ತೊಳೆಯುತ್ತಿರುವ ಈ ವಿಡಿಯೋ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯೆ ವ್ಯಕ್ತಪಡಿಸುವ ಮೂಲಕ ಆರೋಗ್ಯ ಏನಾಗಬೇಡ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬಳಕೆದಾರೊಬ್ಬರು, ʼʼಶುದ್ಧತೆ ಎನ್ನುವುದು ಇಲ್ಲಿ ಅಪರಾಧ ಎನ್ನುವಂತಿದೆʼʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ʼʼಇನ್ನು ಮುಂದೆ ಬೀದಿ ಬದಿ ಆಹಾರ ಸೇವಿಸುವ ಮುನ್ನ ನೂರು ಬಾರಿ ಆಲೋಚಿಸಿʼʼ ಎಂದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ