ಮಧ್ಯಪ್ರದೇಶ: ರಿಕ್ಷಾದಲ್ಲಿ ಕಿರುಕುಳ ಮತ್ತು ಚುಡಾಯಿಸಿದ ಆರೋಪದ ಮೇಲೆ ಯುವತಿಯೊಬ್ಬಳು ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಲ್ಲಿ ಹೊಡೆದಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಇಂದು(ನ.30) ಮಧ್ಯಾಹ್ನ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಾಹಿತಿಯ ಪ್ರಕಾರ, ಪಾದವ್ ಪೊಲೀಸ್ ಠಾಣಾ ವ್ಯಾಪ್ತಿಯ ಫೂಲ್‌ಬಾಗ್ ಸ್ಕ್ವೇರ್‌ನಲ್ಲಿ ಈ ಘಟನೆ ನಡೆದಿದೆ. ರಿಕ್ಷಾದೊಳಗೆ ಮಧ್ಯವಯಸ್ಕ ವ್ಯಕ್ತಿಯೊಬ್ಬ ಯುವತಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಕೋಪಗೊಂಡ ಯುವತಿ ರಿಕ್ಷಾದಿಂದ ಹೊರಬಂದು, ವ್ಯಕ್ತಿಯನ್ನು ಹೊರಗೆಳೆದು ಸಾರ್ವಜನಿಕವಾಗಿ ಚಪ್ಪಳಿಯಲ್ಲಿ ಥಳಿಸಿದ್ದಾಳೆ. ಈ ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯರು ಮೊಬೈಲ್ ಮೂಲಕ ವಿಡಿಯೋ ಮಾಡಿ, ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ.
#WATCH | Gwalior: Man Thrashed With ‘Chappals’ For Misbehaving With Girl; Touches Women’s Feet In Apology#MadhyaPradesh #gwalior #MPNews pic.twitter.com/qCUPHL970A
— Free Press Madhya Pradesh (@FreePressMP) November 30, 2024
ಇದನ್ನೂ ಓದಿ: 52 ಕೋಟಿ ಕೊಟ್ಟು ಹರಾಜಿನಲ್ಲಿ ಖರೀದಿಸಿದ್ದ ಬಾಳೆಹಣ್ಣನ್ನು ಒಂದೇ ಕ್ಷಣದಲ್ಲಿ ತಿಂದು ಮುಗಿಸಿದ ವ್ಯಕ್ತಿ
ಈ ಬಗ್ಗೆ ಯುವತಿ ಇನ್ನೂ ಔಪಚಾರಿಕವಾಗಿ ದೂರು ದಾಖಲಿಸಿಲ್ಲ . ದೂರು ನೀಡಿದರೆ ಆ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಪೊಲೀಸರು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿರುವುದು ವರದಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ