ಜಗತ್ತಿನಲ್ಲಿ ನಾವು ತಿಳಿದುಕೊಳ್ಳುವ ವಿಚಾರಗಳು ಹಲವಿದೆ. ಒಂದು ಕಾಲದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದೇ ಖುಷಿಯ ವಿಚಾರವಾಗಿತ್ತು. ಅದರಲ್ಲೂ ವಿಮಾನದಲ್ಲಿ ಎಲ್ಲಾದರೂ ಹೋದರೆ ಅದು ಹೆಮ್ಮೆಯ ವಿಷಯವಾಗಿತ್ತು. ಕಾಲ ಬದಲಾದಂತೆ ಮನುಷ್ಯನ ಆಲೋಚನೆಗಳು ಕೂಡ ಬದಲಾಗಿವೆ. ಇಲ್ಲಿ ಐಷಾರಾಮಿ ಪ್ರಯಾಣವನ್ನು ಒದಗಿಸುವ ವಿಮಾನವಿದೆ ಆದರೆ ವಿಮಾನ ನಿಲ್ದಾಣದಲ್ಲಿ ಯಾವುದೇ ಸೌಕರ್ಯಗಳಿಲ್ಲ.
ವಿಮಾನ ನಿಲ್ದಾಣ ಎಂದ ತಕ್ಷಣ ನಿಮ್ಮ ಕಣ್ಣಿಗೆ ವೇಟಿಂಗ್ ಪ್ರದೇಶ, ತಿಂಡಿ, ತಿನಿಸುಗಳು, ವಿಮಾನಗಳು, ಐಷಾರಾಮಿ ಮೂಲಸೌಕರ್ಯಗಳೇ ನೆನಪಿಗೆ ಬರುತ್ತವೆ. ಶ್ವದ ಒಂದು ವಿಮಾನ ನಿಲ್ದಾಣವು ಸಾಮಾನ್ಯ ವಿಮಾನ ನಿಲ್ದಾಣಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಅದು ಜಗತ್ತಿನ ಸಣ್ಣ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಕೊಲಂಬಿಯಾದ ಅಗುವಾಚಿಕಾ ಎಂಬ ಸ್ಥಳದಲ್ಲಿ ಹಕಾರಿಟಮಾ ವಿಮಾನ ನಿಲ್ದಾಣವಿದೆ. ವಿಮಾನ ನಿಲ್ದಾಣದ ಗಾತ್ರದಿಂದಾಗಿ ಅದು ಪ್ರಸಿದ್ಧವಾಗಿದೆ. ವಿಮಾನ ಹೊರಡಲು 20 ನಿಮಿಷಗಳು ಬಾಕಿ ಇರುವಾಗ ಬೋರ್ಡಿಂಗ್ ಪ್ರಕ್ರಿಯೆಗಳು ಶುರುವಾಗುತ್ತವೆ.
ಮತ್ತಷ್ಟು ಓದಿ: ಜಗತ್ತಿನ ಈ ಒಂದು ದೇಶದಲ್ಲಿ ಮಾತ್ರ ವರ್ಷಕ್ಕೆ 12 ಅಲ್ಲ 13 ತಿಂಗಳಂತೆ! ವಾರಕ್ಕೆ ಐದೇ ದಿನವಂತೆ
ಅಲ್ಲಿ ಲಗೇಶ್ ಪರಿಶೀಲಿಸಲು ಸ್ಕ್ಯಾನ್ ಕೂಡ ಇಲ್ಲ, ಕೈಯಲ್ಲಿ ಪರಿಶೀಲಿಸಲಾಗುತ್ತದೆ. ಇಲ್ಲಿ ಸ್ಕ್ಯಾನರ್ ಯಂತ್ರ ಇರಿಸಲೂ ಕೂಡ ಸ್ಥಳವಿಲ್ಲ. ಜನರು ವಿಮಾನ ನಿಲ್ದಾಣಕ್ಕೆ ಬಂದರೆ ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕು.
ಇಲ್ಲಿ ಐಷಾರಾಮಿ ಕಾಯುವ ಕೊಠಡಿ ಇಲ್ಲ, ಬದಲಿಗೆ ಮಾವಿನ ಮರದ ಕೆಳಗೆ ನಿರ್ಮಿಸಲಾದ ಬೆಂಚುಗಳ ಮೇಲೆ ಜನರು ಕಾಯುತ್ತಾರೆ. ಪುರುಷರು ಮತ್ತು ಮಹಿಳೆಯರಿಗೆ ತಲಾ ಒಂದು ಕಾಯುವ ಕೊಠಡಿ ಇದೆ.
ಇಲ್ಲಿ ವಿಮಾನವು ಚಿಕ್ಕದಾಗಿದ್ದರೂ, ಆಸನಗಳು ಸಾಕಷ್ಟು ಆರಾಮದಾಯಕವಾಗಿವೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ