17 ಮಿಲಿಯನ್​ ನೆಟ್ಟಿಗರ ಅಚ್ಚರಿಗೆ ಕಾರಣವಾಗಿರುವ ಈ ‘ಕೇಶಶಿಲ್ಪ’

| Updated By: ಶ್ರೀದೇವಿ ಕಳಸದ

Updated on: Oct 10, 2022 | 12:19 PM

Hair Style : ಈ ರೂಪದರ್ಶಿಯ ತಲೆಯ ಮೇಲಿರುವ ಚೌಕಟ್ಟುಗಳು ಮತ್ತು ಟೆಡ್ಡಿಬೇರುಗಳನ್ನು ನೋಡುತ್ತಿದ್ದರೆ ನಿಮ್ಮ ಮನಸ್ಸಿನಲ್ಲಿ ಏನು ಹೊಳೆಯಬಹುದು. ನೆಟ್ಟಿಗರಂತೂ ಈ ಕೇಶಶಿಲ್ಪವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

17 ಮಿಲಿಯನ್​ ನೆಟ್ಟಿಗರ ಅಚ್ಚರಿಗೆ ಕಾರಣವಾಗಿರುವ ಈ ‘ಕೇಶಶಿಲ್ಪ’
ಕೇಶಶಿಲ್ಪ
Follow us on

Viral Video : ನೀವು ಜಗತ್ತಿನ ಗಮನವನ್ನು ಕುಳಿತಲ್ಲಿಯೇ ಸೆಳೆಯಬಹುದು. ಅಂಥ ಅದ್ಭುತ ಅವಕಾಶವನ್ನು ಇಂಟರ್​ನೆಟ್​ ನೀಡಿದೆ. ಸಾಮಾಜಿಕ ಜಾಲತಾಣಗಳು ಅದಕ್ಕೆ ಒತ್ತಾಸೆಯಾಗಿ ನಿಂತಿವೆ. ನಿಮ್ಮಷ್ಟಕ್ಕೆ ನೀವು ನಿಮಗಿಷ್ಟವಾದ ಹವ್ಯಾಸ, ಕಲೆ, ವೃತ್ತಿಯಲ್ಲಿ ತೊಡಗಿಕೊಂಡೇ ಗಮನ ಸೆಳೆಯಬಹುದಾದ ಕಾಲ ಇದಾಗಿದೆ. ಇತ್ತೀಚೆಗೆ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ಲಂಡನ್‌ನ ಶಮಾರಾ ರೋಪರ್ ಎಂಬ ಕೇಶವಿನ್ಯಾಸಕಿಯು ರೂಪದರ್ಶಿಯ ತಲೆಯ ಮೇಲೆ ನಿರ್ಮಿಸಿದ ಈ ಕೇಶಶಿಲ್ಪ ಬಹಳ ವಿಭಿನ್ನವಾಗಿದೆ. 17 ಮಿಲಿಯನ್​ಗಿಂತಲೂ ಹೆಚ್ಚು ಜನರನ್ನು ಸೆಳೆದಿದೆ. 3 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ಪೋಸ್ಟ್​ ಮೆಚ್ಚಿದ್ದಾರೆ. ಸುಮಾರು 9 ಸಾವಿರ ಜನರು ಪ್ರತಿಕ್ರಿಯಿಸಿದ್ಧಾರೆ. ನೋಡಿ ಈ ಕೇಶಶಿಲ್ಪ ತಯಾರಾಗಿದ್ದು ಹೇಗೆಂದು.

ರೂಪದರ್ಶಿಯ ಮೋಟುಕೂದಲನ್ನು ಉಪಯೋಗಿಸಿಕೊಂಡು ಇನ್ನಿತರ ಪರಿಕರಗಳ ಸಹಾಯದೊಂದಿಗೆ ಅವಳ ತಲೆಯ ಮೇಲೆ ರೂಪಿಸುವ ಈ ಕೇಶಶಿಲ್ಪ ಬಹಳಷ್ಟು ಕುಶಲತೆಯಿಂದ ಕೂಡಿದೆ. ಚೌಕಟ್ಟುಗಳೊಂದಿಗೆ ಟೆಡ್ಡಿಬೇರ್​ಗಳನ್ನು ಕೂಡ ಈ ಶಿಲ್ಪದಲ್ಲಿ ಅಳವಡಿಸಲಾಗಿದೆ.

‘ಗೂಪಾ ಮ್ಯಾಗ್​ಝೀನ್​ನ ‘ಗೌಪಾ ಗಾಲಾ’ ಕಾರ್ಯಕ್ರಮಕ್ಕೆ ಫೇರಿಟೇಲ್​ ಅಥವಾ ಜಾನಪದ ಕಥೆಗಳ ಥೀಮ್ ಅನ್ನು ವಿನ್ಯಾಸ ಮಾಡಲು ಯೋಚಿಸುತ್ತಿದ್ದೆ. ಆಗ ಈ ಐಡಿಯಾ ಹೊಳೆಯಿತು ಎಂದಿದ್ದಾರೆ ‘ಬೆಸ್ಟ್ ಇನ್​ ಗ್ಲ್ಯಾಮ್​’ಗೆ ಆಯ್ಕೆಯಾದ ಶಮಾರಾ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 12:18 pm, Mon, 10 October 22