AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೋಮಿನೋಸ್ ಪಿಝಾದಲ್ಲಿ ಗಾಜಿನ ಚೂರುಗಳು ಪತ್ತೆ, ನೆಟ್ಟಿಗರ ಆಕ್ರೋಶ

Domino‘s Pizza : ಮಹಾರಾಷ್ಟ್ರದ ಅರುಣ್​ ಎನ್ನುವವರು ತಕ್ಷಣವೇ ಗಾಜಿನ ಚೂರುಳ್ಳ ಪಿಝಾ ಅನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ ಸಂಬಂಧಿಸಿದವರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಮುಂಬೈ ಪೊಲೀಸರು ಸ್ಪಂದಿಸಿದ್ದಾರೆ.

ಡೋಮಿನೋಸ್ ಪಿಝಾದಲ್ಲಿ ಗಾಜಿನ ಚೂರುಗಳು ಪತ್ತೆ, ನೆಟ್ಟಿಗರ ಆಕ್ರೋಶ
ಪಿಝಾದಲ್ಲಿ ಗಾಜಿನ ಚೂರು
TV9 Web
| Updated By: ಶ್ರೀದೇವಿ ಕಳಸದ|

Updated on:Oct 10, 2022 | 12:30 PM

Share

Viral : ಹಣವೊಂದಿದ್ದರೆ ಸಾಕು, ಈವತ್ತು ಕುಳಿತಲ್ಲಿಯೇ ಎಲ್ಲವೂ ಸುಲಭವಾಗಿ ಲಭಿಸುತ್ತದೆ. ಬೇಕಾದ್ದು ಬೇಡವಾದ್ದು ಹೀಗೆ ಎಲ್ಲವೂ. ಆದರೆ ಅಪಾಯಕಾರಿಯಾದದ್ದು!? ಅದೂ ಸಿಗುತ್ತದೆ, ಏಮಾರಿದರೆ. ಇತ್ತೀಚೆಗೆ ವೈರಲ್ ಆಗುತ್ತಿರುವ ಟ್ವಿಟರ್ ಪೋಸ್ಟ್​ ಈ ಅಪಾಯದ ಕುರಿತು ಎಚ್ಚರಿಸಿದೆ. ಡೋಮಿನೋಸ್​ ಪಿಝಾನಲ್ಲಿ ಗಾಜಿನ ಚೂರುಗಳು ಪತ್ತೆಯಾಗಿದ್ದು, ಆರ್ಡರ್ ಮಾಡಿದ ವ್ಯಕ್ತಿ ಫೋಟೋ ತೆಗೆದು ಆನ್​ಲೈನಿನಲ್ಲಿ ಹಂಚಿಕೊಂಡಿದ್ದಾರೆ.  ಮುಂಬೈ ಪೊಲೀಸರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರದ ಅರುಣ್ ಎಂಬುವವರು ಡೋಮಿನೋಸ್​ ಪಿಝಾ ಅನ್ನು ಆರ್ಡರ್ ಮೂಲಕ ತರಿಸಿಕೊಂಡಿದ್ದಾರೆ. ತಿನ್ನುವಾಗ ಎರಡುಮೂರು ಗಾಜಿನ ಚೂರುಗಳು ಅದರೊಳಗಿದ್ದದ್ದು ಪತ್ತೆಯಾಗಿದೆ. ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು ತಕ್ಷಣವೇ ಫೋಟೋ ತೆಗೆದು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯವನ್ನು ಪರಿಶೀಲಿಸುವಂತೆ ಡೋಮಿನೋಸ್​ ಇಂಡಿಯಾ, ಮುಂಬೈ ಪೊಲೀಸ್​ ಮತ್ತು ಸಂಬಂಧಿಸಿದ ಇತರರಿಗೆ ಟ್ಯಾಗ್​ ಮಾಡಿದ್ದಾರೆ.

ಇದನ್ನೂ ಓದಿ
Image
2000 ಚಾಕೋಲೇಟ್ ಗರಿಗಳ​ ಫೀನಿಕ್ಸ್ ಈಗ ಅಂತರ್ಜಾಲದಲ್ಲಿ ಹಾರಾಡುತ್ತಿದೆ
Image
ಹುಡುಗಿಯನ್ನು ಒಲಿಸಿಕೊಳ್ಳಲು ಸ್ಟಂಟ್ ಮಾಡಲು ಹೋದ ಈ ಹುಡುಗನ ಪರಿಸ್ಥಿತಿ ನೋಡಿ
Image
ಆನ್​ಲೈನಲ್ಲಿ ಹಾವಳಿ ಎಬ್ಬಿಸಿರುವ ಈ ಮುದ್ದುಪ್ರಚಂಡೆಯರ ವಿಡಿಯೋ
Image
ತಡವಾಗಿ ಬಂದಿದ್ದಕ್ಕೆ ಝೊಮ್ಯಾಟೋ ಏಜೆಂಟ್​ಗೆ ಆರತಿ ಮಾಡಿ ಸ್ವಾಗತಿಸಿದ ಗ್ರಾಹಕ

ಝೊಮ್ಯಾಟೋ ಮೂಲಕ ಅರುಣ್ ಆರ್ಡರ್ ತರಿಸಿಕೊಂಡಿದ್ದಾರೆ. ‘ಬಾಕ್ಸ್​ ಡ್ಯಾಮೇಜ್ ಆಗಿತ್ತೇ?’ ಎಂದು ಝೊಮ್ಯಾಟೋ ಕೇಳಿದೆ. ಇಲ್ಲ ಸುಸ್ಥಿತಿಯಲ್ಲಿತ್ತು ಎಂದು ಅರುಣ್ ಉತ್ತರಿಸಿದ್ದಾರೆ. ಕ್ಷಮಿಸಿ, ಈ ಕುರಿತು ಪರಿಶೀಲಿಸುತ್ತೇವೆ ಮತ್ತೊಂದು ಪಿಝಾ ತಲುಪಿಸುತ್ತೇವೆ ಎಂದು ಝೊಮ್ಯಾಟೊ ತಿಳಿಸಿದೆ.

ನಂತರ ಮುಂಬೈ ಪೊಲೀಸರು, ಕಸ್ಟಮರ್ ಕೇರ್‌ಗೆ ಈ ಕುರಿತು ತಿಳಿಸಿರಿ ಎಂದಿದ್ದಾರೆ. ಒಂದು ವೇಳೆ ಅವರು ನಿಮಗೆ ಉತ್ತರಿಸದಿದ್ದರೆ ಅಥವಾ ಸಮರ್ಪಕವಾಗಿ ಸ್ಪಂದಿಸದಿದ್ದರೆ ನೀವು ಕಾನೂನಿನ ಮೊರೆ ಹೋಗಬಹುದು ಎಂದಿದ್ದಾರೆ. ಆ ಪ್ರಕಾರ ಅರುಣ್, ಕಸ್ಟಮರ್ ಕೇರ್​ ವಿಭಾಗವನ್ನು ಸಂಪರ್ಕಸಿದ್ದಾರೆ. ಡೋಮಿನೋಸ್ ಪ್ರತಿನಿಧಿ ಅರುಣ್ ಅವರನ್ನು ಪುನಾ ಸಂಪರ್ಕಿಸಿ, ಈ ಕುರಿತು ಸಂಪೂರ್ಣ ತನಿಖೆಯನ್ನು ನಡೆಸಲಾಗಿದೆ. ನಮ್ಮ ಅಡುಗೆಮನೆಯಲ್ಲಿ ಎಲ್ಲವೂ ಶುಚಿತ್ವದ ನೀತಿನಿಯಮಗಳನ್ನು ಪಾಲಿಸಲಾಗುತ್ತಿದೆ. ಗಾಜಿನಿಂದ ಕೂಡಿದ ವಸ್ತುಗಳ ಬಳಕೆಯೂ ಅಲ್ಲಿ ನಿಯಮಕ್ಕನುಸಾರವಾಗಿ ನಿಷಿದ್ಧ ಎಂದು ತಿಳಿಸಿದ್ದಾರೆ.

ಈ ಪೋಸ್ಟ್​ಗೆ ಸಂಬಂಧಿಸಿ ಅನೇಕರು ತಮ್ಮ ತಮ್ಮ ಕಹಿ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಡೋಮಿನೋಸ್​ ತನ್ನ ಕಡೆಯಿಂದ ಏನೂ ವ್ಯತ್ಯಯ ಉಂಟಾಗಿಲ್ಲ ಎಂದು ಹೇಳುತ್ತಿರುವಾಗ, ಅರುಣ್ ಕಾನೂನಿನ ಸಹಾಯ ಯಾಚಿಸುತ್ತಾರಾ ನೋಡಬೇಕು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:22 am, Mon, 10 October 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ