ಭಾರತದ ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವದ ಪ್ರಯುಕ್ತ ಅಂಚೆ ಕಚೇರಿಗಳು ಹರ್ ಘರ್ ತಿರಂಗಾ ಅಭಿಯಾನದ ಮೂಲಕ ದೇಶದಾದ್ಯಂತ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುತ್ತಿವೆ. ಅಂಚೆ ಇಲಾಖೆಯು ಇ-ಪೋಸ್ಟ್ ಆಫೀಸ್ ಪೋರ್ಟಲ್ www.epostoffice.gov.in ಮೂಲಕ ಧ್ವಜಗಳ ಆನ್‌ಲೈನ್ ಮಾರಾಟವನ್ನು ಈಗಾಗಲೇ ಅರಂಭಿಸಿದ್ದು, ಕನಿಷ್ಠ ಸಮಯದಲ್ಲಿ ಧ್ವಜಗಳನ್ನು ತಲುಪಿಸಲು ಇಲಾಖೆಯು ಅಂಚೆ ಕಚೇರಿಗಳಿಗೆ ಆದೇಶಿಸಿದೆ. ನಾಗರಿಕರ ಮನೆಗಳಲ್ಲಿ ಹಗಲು ರಾತ್ರಿ ಭಾರತೀಯ ಧ್ವಜವನ್ನು ಹಾರಿಸಲು ಸರ್ಕಾರವು ಭಾರತದ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿದೆ. ಹೀಗಿದ್ದಾಗ ನಿಮ್ಮ ಮನೆಗಳಲ್ಲಿ ಧ್ವಜವನ್ನು ಹಾರಿಸಲು ಹೆಚ್ಚಿನ ಮೊತ್ತವನ್ನು ಪಾವತಿಸಿ ಧ್ವಜವನ್ನು ಖರೀದಿಸುವ ಅವಶ್ಯಕತೆ ಇಲ್ಲ. ಅಂಚೆ ಮೂಲಕ ಕೇವಲ 25 ರೂಪಾಯಿಗಳಲ್ಲಿ ಖರೀದಿಸಬಹುದು. ಖರೀದಿ ಹಂತಗಳು ಈ ಕೆಳಗಿನಂತಿವೆ.
ಭಾರತೀಯ ಧ್ವಜವನ್ನು ಹೇಗೆ ಖರೀದಿಸುವುದು?
ಅಂಚೆ ಇಲಾಖೆಯು ಇತ್ತೀಚೆಗೆ ಇ-ಪೋಸ್ಟ್ ಆಫೀಸ್ ಪೋರ್ಟಲ್ www.epostoffice.gov.in ಮೂಲಕ ರಾಷ್ಟ್ರೀಯ ಧ್ವಜಗಳ ಆನ್‌ಲೈನ್ ಮಾರಾಟವನ್ನು ಪ್ರಕಟಿಸಿದೆ. ಈ ವೆಬ್ಸೈಟ್ಗೆ ಭೇಟಿ ಕೊಡಬೇಕು. ePostoffice ಪೋರ್ಟಲ್ ಮುಖಪುಟದಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರದ ಮೇಲೆ ಕ್ಲಿಕ್ ಮಾಡಿ. ನಂತರ ವಿತರಣೆಯ ವಿಳಾಸ, ಧ್ವಜಗಳ ಪ್ರಮಾಣ (ಗ್ರಾಹಕರಿಗೆ ಆರಂಭಿಕವಾಗಿ ಗರಿಷ್ಠ 5 ಧ್ವಜಗಳು) ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿರ್ದಿಷ್ಟಪಡಿಸಿ. ಖರೀದಿ ಪ್ರಕ್ರಿಯೆಯಲ್ಲಿ ಇತ್ತೀಚಿನ ಧ್ವಜದ ನಿಯಮಗಳನ್ನು ಅನುಸರಿಸಲು ನಿಮ್ಮನ್ನು ಕೇಳಲಾಗುತ್ತದೆ. ಆರ್ಡರ್ ಅನ್ನು ಪೂರ್ಣಗೊಳಿಸಲು ಪಾವತಿ ಮಾಡಬೇಕು.
ಧ್ವಜದ ಬೆಲೆ ಮತ್ತು ಗಾತ್ರ
ಭಾರತೀಯ ಧ್ವಜದ ಗಾತ್ರವು 20 x 30 ಇಂಚುಗಳಷ್ಟು ಗಾತ್ರ ಇರುತ್ತದೆ. ತ್ರಿವರ್ಣ ಧ್ವಜದ ಮಾರಾಟ ಬೆಲೆ ಪ್ರತಿ ಧ್ವಜಕ್ಕೆ 25 ರೂಪಾಯಿ ಆಗಿದೆ. ಗಮನಿಸಬೇಕಾದ ಅಂಶವೆಂದರೆ ಧ್ವಜದ ಮೇಲೆ ಜಿಎಸ್‌ಟಿ ಇರುವುದಿಲ್ಲ. ಒಂದೊಮ್ಮೆ ನೀವು ಆರ್ಡರ್ ಮಾಡಿದ ನಂತರ ಅದನ್ನು ರದ್ದು ಮಾಡುವ ಅವಕಾಶ ಇರುವುದಿಲ್ಲ. ನೀವು ಆರ್ಡರ್ ಮಾಡಿದ ನಂತರ ಹತ್ತಿರದ ಅಂಚೆ ಕಚೇರಿಯಿಂದ ಉಚಿತವಾಗಿ ನೀಡಲಾಗುತ್ತದೆ.