ಹರಿಯಾಣ ಮಹಿಳಾ ಅಯೋಗದ ಮುಖ್ಯಸ್ಥೆ ಮಹಿಳಾ ಪೊಲೀಸ್ ಅಧಿಕಾರಿಗೆ ಸಭೆ ನಡೆಯುವಾಗ ‘ಗೆಟೌಟ್’ ಅಂದ ವಿಡಿಯೋ ವೈರಲ್!

ಹೇವರಿಕೆ ಮೂಡಿಸುವ ಈ ಕಿತ್ತಾಟ ಕೆಮೆರಾಗಳ ಸಮ್ಮುಖದಲ್ಲಿ ನಡೆದಿದ್ದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 ಹರಿಯಾಣ ಮಹಿಳಾ ಅಯೋಗದ ಮುಖ್ಯಸ್ಥೆ ಮಹಿಳಾ ಪೊಲೀಸ್ ಅಧಿಕಾರಿಗೆ ಸಭೆ ನಡೆಯುವಾಗ ‘ಗೆಟೌಟ್’ ಅಂದ ವಿಡಿಯೋ ವೈರಲ್!
ಮಹಿಳಾ ಪೊಲೀಸ್ ಅಧಿಕಾರಿಗೆ ತೊಲಗಾಚೆ ಅನ್ನುತ್ತಿರುವ ರೇಣು ಭಾಟಿಯ
Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 10, 2022 | 4:18 PM

ಹರಿಯಾಣಾ ಮಹಿಳಾ ಹಕ್ಕುಗಳ (women’s panel) ಅಯೋಗದ ಮುಖ್ಯಸ್ಥೆ ಮತ್ತು ಮಹಿಳಾ ಪೊಲೀಸ್ (woman cop) ಅಧಿಕಾರಿಯಿಬ್ಬರ ನಡುವೆ ಶುಕ್ರವಾರ ಮೀಟಿಂಗೊಂದರಲ್ಲಿ ನಡೆದ ವಾಗ್ವಾದದ ವಿಡಿಯೋ ವೈರಲ್ ಆಗಿದೆ ಮಾರಾಯ್ರೇ. ಈ ವಾಗ್ವಾದ ಅಂತ್ಯದಲ್ಲಿ ಕೆರಳುವ ಆಯೋಗದ ಮುಖ್ಯಸ್ಥೆ ರೇಣು ಭಾಟಿಯಾ (Renu Bhatia) ಮೀಟಿಂಗ್ ನಡೆಯುತ್ತಿದ್ದ ಸಭಾಂಗಣದಿಂದ ಹೊರಗೋಗುವಂತೆ ಹೇಳುತ್ತಾರೆ.

ಹೇವರಿಕೆ ಮೂಡಿಸುವ ಈ ಕಿತ್ತಾಟ ಕೆಮೆರಾಗಳ ಸಮ್ಮುಖದಲ್ಲಿ ನಡೆದಿದ್ದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆಯು ಸೆಪ್ಟೆಂಬರ್ 9 ರಂದು ಕೈತಾಲ್ ನಲ್ಲಿ ನಡೆದಿದೆ. ಗಂಡ-ಹೆಂಡತಿ ನಡುವಿನ ಪ್ರಕರಣವೊಂದನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ರೇಣು ಭಾಟಿಯ ವ್ಯಗ್ರಗೊಂಡಿದ್ದರು ಅಂತ ಹೇಳಲಾಗಿದೆ.

ಸ್ಥಳೀಯ ವರದಿಗಾರರೊಬ್ಬರು ಹೇಳಿರುವ ಪ್ರಕಾರ ರೇಣು ಭಾಟಿಯ ಪೊಲೀಸ್ ಅಧಿಕಾರಿಗೆ, ‘ಅವನ ಕೆನ್ನೆಗೆ ಬಾರಿಸಬೇಕಿತ್ತು, ಇಲ್ಲಿಂದ ತೊಲಗು, ನಿನ್ನಿಂದ ಯಾವುದೇ ಸಮಜಾಯಿಷಿ ನನಗೆ ಬೇಕಿಲ್ಲ,’ ಅಂತ ಅರಚಿದ್ದಾರೆ.

ಮಹಿಳಾ ಪೊಲೀಸ್ ತಮ್ಮನ್ನು ಸಮರ್ಥನೆಯಲ್ಲಿ ಏನ್ನನ್ನೋ ಹೇಳಲು ಮುಂದಾದಾಗ ಭಾಟಿಯ ಅಲ್ಲಿದ್ದ ಒಬ್ಬ ಎಸ್ ಹೆಚ್ ಓಗೆ, ‘ಮೊದಲು ಅವಳನ್ನು ಹೊರಗೆ ಕರೆದುಕೊಂಡು ಹೋಗಿ,’ ಅಂತ ಹೇಳುತ್ತಾರೆ.

‘ನಿನ್ನ ವಿರುದ್ಧ ಇಲಾಖಾ ತನಿಖೆ ನಡೆಸಲಾಗುತ್ತದೆ,’ ಎಂದು ಭಾಟಿಯ ಪೊಲೀಸ್ ಆದಿಕಾರಿಗೆ ಹೇಳುವುದು ವಿಡಿಯೋನಲ್ಲಿ ರೆಕಾರ್ಡ್ ಆಗಿದೆ. ಬೇರೆ ಮಹಿಳಾ ಪೊಲೀಸರು ಅವರನ್ನು ಹೊರಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುವಾಗ ಪೊಲೀಸ್ ಅಧಿಕಾರಿ, ‘ಹೀಗೆ ಅಪಮಾನಕ್ಕೊಳಗಾಗಲು ನಾವು ಮೀಟಿಂಗ್ ಬರಬೇಕಾ?’ ಅಂತ ಕೇಳುತ್ತಾರೆ.

‘ಅಂದರೆ, ಆ ಹುಡುಗಿಗೆ ಅವಮಾನವಾಗಲಿ ಅಂತ ಬಂದಿದ್ದೀಯಾ?’ ಅಂತ ಭಾಟಿಯಾ ಕೇಳುತ್ತಾರೆ.

ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಭಾಟಿಯ, ‘ಸದರಿ ಪ್ರಕರಣ ಒಬ್ಬ ವ್ಯಕ್ತಿ ಮತ್ತು ಅವನ ಹೆಂಡತಿಗೆ ಸಂಬಂಧಿಸಿದ್ದಾಗಿದೆ. ಅಯೋಗದ ಸದಸ್ಯರು ಮತ್ತು ಪೊಲೀಸರೊಂದಿಗೆ ಅವನು ಹಲವಾರು ಬಾರಿ ಅನುಚಿತವಾಗಿ ವರ್ತಿಸಿದ್ದಾನೆ. ತನ್ನ ಹೆಂಡತಿ ದೈಹಿಕವಾಗಿ ಸರಿಯಿಲ್ಲ ಅಂತ ಆರೋಪಿಸಿ ಅವನು ತನ್ನ ಹೆಂಡತಿಯನ್ನು ಬಿಟ್ಟು ಬಿಡಬೇಕು ಅಂತ ಅಂದುಕೊಂಡಿದ್ದಾನೆ,’ ಅಂತ ಹೇಳಿದ್ದಾರೆ.

‘ಹಾಗಾಗಿ ಪತಿ ಮತ್ತು ಪತ್ನಿ ಇಬ್ಬರ ವೈದ್ಯಕೀಯ ಪರೀಕ್ಷೆ ನಡೆಸಲು ಅಯೋಗ ಆದೇಶಿಸಿತ್ತು. ಮಹಿಳೆ ಮೂರು ಸಲ ಪರೀಕ್ಷೆಗೆ ಒಳಪಟ್ಟರೆ ಅವನು ಸುತಾರಾಂ ತನಗೆ ಪರೀಕ್ಷೆ ಬೇಡವೆಂದಿದ್ದಾನೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಈ ಮಹಿಳಾ ಕಾಪ್ ಅವನನ್ನು ಪರೀಕ್ಷೆಗೊಳಪಡಿಸಲು ವಿಫಲಳಾಗಿದ್ದಾಳೆ, ಹಾಗಾಗೇ, ಅವಳ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದೇವೆ,’ ಎಂದು ಭಾಟಿಯಾ ಹೇಳಿದ್ದಾರೆ.