Queen Elizabeth II: ಮರಳಿನಲ್ಲಿ ಮೂಡಿದ ರಾಣಿ ಎಲಿಜಬೆತ್ II, ರಾಣಿಗೆ ಒಡಿಶಾದ ಕಲಾವಿದನಿಂದ ಗೌರವ
ರಾಣಿ ಎಲಿಜಬೆತ್ II ಬ್ರಿಟನ್‌ನ ಸುದೀರ್ಘ ಆಳ್ವಿಕೆಯ ನಡೆಸಿದ ಗೌರವ ಅವರದ್ದು, ಇದೀಗ ಅವರಿಗೆ ಗೌರವರ್ಥವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಒಡಿಶಾದ ಮರಳು ಕಲಾವಿದ ಮಾನಸ್ ಕುಮಾರ್ ಸಾಹೂ ಅವರು ರಾಣಿ ಎಲಿಜಬೆತ್‌ಗಾಗಿ ಮರಳು ಕಲೆಯನ್ನು ರಚಿಸಿ ಗೌರವ ಸಲ್ಲಿಸಿದ್ದಾರೆ.
ರಾಣಿ ಎಲಿಜಬೆತ್ II ಆರೋಗ್ಯದಿಂದ ಬಳಲುತ್ತಿದ್ದು, ಇದೀಗ ಆ.8ರಂದು ಸಾವನ್ನಪ್ಪಿದ್ದಾರೆ. ಇದೀಗ 96 ವರ್ಷದ ರಾಣಿ ಎಲಿಜಬೆತ್ II ಬ್ರಿಟನ್‌ನ ಸುದೀರ್ಘ ಆಳ್ವಿಕೆಯ ನಡೆಸಿದ ಗೌರವ ಅವರದ್ದು, ಇದೀಗ ಅವರಿಗೆ ಗೌರವರ್ಥವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಒಡಿಶಾದ ಮರಳು ಕಲಾವಿದ ಮಾನಸ್ ಕುಮಾರ್ ಸಾಹೂ ಅವರು ರಾಣಿ ಎಲಿಜಬೆತ್‌ಗಾಗಿ ಮರಳು ಕಲೆಯನ್ನು ರಚಿಸಿ ಗೌರವ ಸಲ್ಲಿಸಿದ್ದಾರೆ.
ರಾಣಿಯ ಹಠಾತ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಮಾನಸ್ ಕುಮಾರ್ ಸಾಹೂ ಅವರು ಒಡಿಶಾದ ಪುರಿಯ ಗೋಲ್ಡನ್ ಸೀ ಬೀಚ್‌ನಲ್ಲಿ ಲೈಟ್‌ಹೌಸ್ ಬಳಿ ರಾಣಿಯ ಮರಳಿನ ಶಿಲ್ಪವನ್ನು ಮಾಡಿದರು. ಇದನ್ನು ರಚನೆ ಮಾಡಲು ಅವರು ಸುಮಾರು 5 ಗಂಟೆಗಳು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮರಳು ಕಲೆ 10 ಅಡಿ ಉದ್ದವಿದ್ದು, ಸುಮಾರು 5 ಟನ್ ಮರಳಿನಿಂದ ನಿರ್ಮಿಸಲಾಗಿದೆ. ಇದು ಶಿಲ್ಪದ ಕೆಳಭಾಗದಲ್ಲಿ “ರಾಣಿಗೆ ಗೌರವ” ಎಂಬ ಸಂದೇಶವನ್ನು ಮರಳಿನಲ್ಲಿ ಕೆತ್ತಲಾಗಿದೆ.
ರಾಣಿ ಎಲಿಜಬೆತ್ ಅವರ ಪತಿ, ಪ್ರಿನ್ಸ್ ಫಿಲಿಪ್, ಡ್ಯೂಕ್ ಆಫ್ ಎಡಿನ್ಬರ್ಗ್, ಏಪ್ರಿಲ್ 9, 2021 ರಂದು 99 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಮಗ ಇಂದು ರಾಜನಾಗಿ ಅಧಿಕಾರ ಸ್ವೀಕರ ಮಾಡಿದ್ದಾರೆ. ತಾಯಿಯ ಆಸೆಯಂತೆ ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಲು ನಾನು ಪ್ರತಿಜ್ಞೆ ಮಾಡುವೇ ಎಂದು ಹೇಳಿದ್ದಾರೆ.
Published On - 12:56 pm, Sat, 10 September 22