ಮೇಕೆ ಮತ್ತು ಕೋತಿಮರಿ ನಡುವಿನ ಬಾಂಧವ್ಯದ ವಿಡಿಯೋ ನೆಟ್ಟಿಗರನ್ನು ದಂಗಾಗಿಸಿದೆ! ಕ್ಯೂಟೆಸ್ಟ್ ವಿಡಿಯೋ ಅನ್ನುತ್ತಿದ್ದಾರೆ!!
ವೀಡಿಯೋದಲ್ಲಿ, ಒಬ್ಬ ವ್ಯಕ್ತಿ ತನ್ನ ಬೊಗಸೆಯಲ್ಲಿ ಹಣ್ಣುಗಳನ್ನು ಹಿಡಿದು ಮೇಕೆಯನ್ನು ಕರೆಯುವುದು ಕಾಣಬಹುದು. ಅವನ ಕೂಗು ಕೇಳಿ, ಮೇಕೆ ಕಾಡಿನಿಂದ ಓಡುತ್ತಾ ಬರುತ್ತದೆ. ಅದರ ಕುತ್ತಿಗೆಗೆ ಕೋತಿಮರಿಯೊಂದು ಜೋತು ಬಿದ್ದಿದೆ!
ಆಫೀಸಲ್ಲಿ ಕೂತು ಕೆಲಸ ಮಾಡಿ ಬೋರಾಗುತ್ತಿದೆಯೇ? ನಿಮ್ಮ ಮೂಡನ್ನು ಉತ್ತಮಪಡಿಸುವ, ಮನಸ್ಸನ್ನು ಚೇತೋಹಾರಿಗೊಳಿಸುವ (mood elevator) ವಿಡಿಯೋವೊಂದು ನಮ್ಮಲ್ಲಿದೆ. ಇದೊಂದು ಹಳೆಯ (old) ವಿಡಿಯೋ. ಹಾಗೆ ನೋಡಿದರೆ ಇದು ಕಳೆದ ವರ್ಷವೇ ವೈರಲ್ ಆಗಿತ್ತು. ಆದರೆ ಟ್ವಟರ್ ನಲ್ಲಿ ರೀಎಂಟ್ರಿ ಪಡೆದಿದೆ.
ಮೇಕೆ ಮತ್ತು ಅದರ ಪುಟ್ಟ ಸ್ನೇಹಿತ ಕೋತಿ ಒಟ್ಟಿಗೆ ಬೆರ್ರಿ ಹಣ್ಣುಗಳನ್ನು ತಿನ್ನುವ ವಿಡಿಯೋ ನಿಮ್ಮನ್ನು ಖುಷಿಪಡಿಸುವುದರಲ್ಲಿ ಸಂಶಯವಿಲ್ಲ. ವೀಡಿಯೋದಲ್ಲಿ, ಒಬ್ಬ ವ್ಯಕ್ತಿ ತನ್ನ ಬೊಗಸೆಯಲ್ಲಿ ಹಣ್ಣುಗಳನ್ನು ಹಿಡಿದು ಮೇಕೆಯನ್ನು ಕರೆಯುವುದು ಕಾಣಬಹುದು. ಅವನ ಕೂಗು ಕೇಳಿ, ಮೇಕೆ ಕಾಡಿನಿಂದ ಓಡುತ್ತಾ ಬರುತ್ತದೆ. ಅದರ ಕುತ್ತಿಗೆಗೆ ಕೋತಿಮರಿಯೊಂದು ಜೋತು ಬಿದ್ದಿದೆ!
Goat and his little monkey friend.. ? pic.twitter.com/mp7recVIHo
— Buitengebieden (@buitengebieden) September 8, 2022
ಮೊದಲು ಮೇಕೆ ಒಂದಾದ ನಂತರ ಒಂದು ಹಣ್ಣು ತಿನ್ನಲು ಪ್ರಾರಂಭಿಸುತ್ತದೆ. ಸ್ವಲ್ಪ ಸಮಯದ ಬಳಿಕ ಮಂಗ ಕೂಡ ಮೆತ್ತಗೆ ಒಂದು ಬೆರ್ರಿಯನ್ನು ಅಳುಕುತ್ತಲೇ ತೆಗೆದುಕೊಳ್ಳುತ್ತದೆ. ಹಣ್ಣುಗಳನ್ನು ಹಿಡಿದಿರುವ ವ್ಯಕ್ತಿ ಗದರದ ಕಾರಣ ಅದರ ಆತ್ಮವಿಶ್ವಾಸದ ಲೆವೆಲ್ ಜಾಸ್ತಿಯಾಗಿ ಮೇಕೆಯ ಬೆನ್ನು ಹತ್ತಿ ಹಣ್ಣು ತಿನ್ನಲಾರಂಭಿಸುತ್ತದೆ!
ಈ ವಿಡಿಯೋವನ್ನು ಅಸಲಿಗೆ ಎನಿಮಲ್ಸ್ ಹೋಮ್ ಯೂಟ್ಯೂಬ್ ನಲ್ಲಿ ಬ್ಯೂ ಮಿನ್ಹ್ ಥಾನ್ ಅನ್ನುವವರು ಶೇರ್ ಮಾಡಿದ್ದು ಗುರುವಾರದದಂದು ಬ್ಯುಟೆನ್ಗೀಬೈಡೆನ್ ನಲ್ಲಿ ಟ್ವಿಟರ್ ಹ್ಯಾಂಡಲ್ ನಲ್ಲಿ ರೀಶೇರ್ ಮಾಡಲಾಗಿದೆ. ಒಂದು ದಿನದಲ್ಲಿ 4 ಲಕ್ಷಕ್ಕೂ ಹೆಚ್ಚು ಜನ ಅದನನ್ನು ವೀಕ್ಷಿಸಿದ್ದಾರೆ ಮತ್ತು 23,000 ಸಾವಿರ ಜನ ಲೈಕ್ ಮಾಡಿದ್ದಾರೆ. ವಿಡಿಯೋ ಸುಮಾರು 3,500 ಸಲ ರೀಟ್ವೀಟ್ ಆಗಿದೆ.
ನೆಟ್ಟಿಗರು ಈ ಪ್ರಾಣಿಗಳ ಸ್ನೇಹ ಮತ್ತು ಅವುಗಳ ನಡುವಿನ ಬಾಂಧವ್ಯ ಕಂಡು ಸಂತೋಷಭರಿತರಾಗಿದ್ದಾರೆ, ಅಶ್ಚರ್ಯಚಕಿತರಾಗಿದ್ದಾರೆ.
‘ಈ ಜೋಡಿಯನ್ನು ಅವುಗಳಿಗೆ ಡಿಸ್ಟರ್ಬ್ ಆಗದ ಹಾಗೆ ನೋಡುವುದನ್ನು ಇಷ್ಟಪಡುತ್ತೇನೆ. ಅವು ಮಾಡುವ ಸಣ್ಣಪುಟ್ಟ ಸಾಹಸಗಳನ್ನು ನೋಡಬೇಕೆನಿಸುತ್ತದೆ. ಅವು ಕೊಳದ ಹತ್ತಿರ ಹೋಗಿ ನೀರಿನಲ್ಲಿ ಆಡುವುದು, ನಿದ್ರೆ ಮಾಡೋದು, ಪರಸ್ಪರ ಕಾಲೆಳೆಯುವುದು, ಕುಣಿದಾಡುವುದು-ಎಲ್ಲವನ್ನೂ ನೋಡುವ ಬಯಕೆಯಾಗುತ್ತಿದೆ. ಓ ದೇವರೇ ಎಷ್ಟು ಮುದ್ದಾದ ಜೋಡಿಯಿದು,’ ಅಂತ ಒಬ್ಬ ಯೂಸರ್ ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, ‘ಅಯ್ಯೋ ದೇವರೇ, ವಿಡಿಯೋವನ್ನು ಅರ್ಧಕ್ಕೆ ಕಟ್ ಮಾಡಿದ್ದು ಯಾಕೆ? ನನಗಂತೂ ಅದನ್ನು ನೋಡುತ್ತಲೇ ಇರಬೇಕೆನಿಸುತ್ತಿದೆ. ಓ ದೇವರೇ, ಈ ಕೋತಿಮರಿ ಅದ್ಹೇಗೆ ನನ್ನ ಕಣ್ಣಿಗೆ ಬೀಳಲಿಲ್ಲ?’ ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮೂರನೇಯವರು, ‘ಹಲವಾರು ಸೆಕೆಂಡುಗಳವರೆಗೆ ನನಗೆ ಕೋತಿ ಕಾಣಿಸಲೇ ಇಲ್ಲ!’ ಅಂತ ಹೇಳಿದ್ದಾರೆ. ಎಮಿಮಲ್ಸ್ ಹೋಮ್ ಚ್ಯಾನೆಲ್ನಲ್ಲಿ ಬಿಬಿ ಹೆಸರಿನ ಒಂದು ಕೋತಿಯ ಸಾಹಸಗಳನ್ನು ಶೇರ್ ಮಾಡಲಾಗುತ್ತದೆ.