Viral Video: ನೀವು ಎಂದಾದರೂ ಆಮೆ – ನಾಯಿ ಫುಟ್ಬಾಲ್ ಆಡುವುದನ್ನು ನೋಡಿದ್ದೀರಾ?

ನಾಯಿ ಮರಿಯೊಂದು ಆಮೆಯ ಜೊತೆ ಸೇರಿ ಫುಟ್ಬಾಲ್ ಆಡುವ ಮುದ್ದಾದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಗೇಬ್ರಿಯೆಲ್ ಕಾರ್ನೋ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Viral Video: ನೀವು ಎಂದಾದರೂ ಆಮೆ - ನಾಯಿ ಫುಟ್ಬಾಲ್ ಆಡುವುದನ್ನು ನೋಡಿದ್ದೀರಾ?
ವೈರಲ್ ವೀಡಿಯೊ
Edited By:

Updated on: Apr 28, 2023 | 5:15 PM

ಸಾಕು ಪ್ರಾಣಿಗಳು ಅಥವಾ ಇತರೆ ಯಾವುದೇ ಪ್ರಾಣಿಗಳು ಸ್ವತಂತ್ರವಾಗಿ ಆಟವಾಡುವುದನ್ನು ನೋಡುವುದೇ ಒಂದು ಚಂದ. ಸಾಕು ಪ್ರಾಣಿಗಳು ಮುದ್ದಾಗಿ ಆಟವಾಡುವುದನ್ನು ನೋಡುವಾಗ ನಮ್ಮ ಮನಸ್ಸಿಗೆ ಏನೋ ಖುಷಿ ಸಿಗುತ್ತದೆ. ಆದರೆ ಪ್ರಾಣಿಗಳು ತಾವು ಇತರ ಪ್ರಭೇದದ ಪ್ರಾಣಿಗಳೊಂದಿಗೆ ಆಟವಾಡುವುದಕ್ಕಿಂತ ಜಗಳವಾಡುವುದೇ ಹೆಚ್ಚು. ಉದಾಹರಣೆಗೆ ನಾಯಿ ಮತ್ತು ಬೆಕ್ಕು ಜೊತೆಯಾಗಿ ಆಟವಾಡುವುದಕ್ಕಿಂತ ಒಂದನ್ನೊಂದು ಕಂಡಾಗ ಕೋಪಿಸಿಕೊಳ್ಳುವುದೇ ಹೆಚ್ಚು. ನಾಯಿಗಳು ಬೇರೆ ಯಾವುದೇ ಪ್ರಾಣಿಯನ್ನು ಕಂಡರೂ ಕೋಪಗೊಂಡು ಬೊಗಳುತ್ತಿರುತ್ತವೆ. ಆದರೂ ಕೆಲವೊಂದು ಬಾರಿ ಈ ಪ್ರಾಣಿಗಳು ಇತರ ಪ್ರಾಣಿಗಳೊಂದಿಗೆ ಸೇರಿಕೊಂಡು ಆಡವಾಡುತ್ತಾ, ನಲಿದಾಡುತ್ತವೆ. ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಂದು ನಾಯಿ ಮರಿ ಆಮೆಯೊಂದಿಗೆ ಸೇರಿಕೊಂಡು ಫುಟ್ಬಾಲ್ ಖುಷಿ ಖುಷಿಯಾಗಿ ಆಟವಾಡುತ್ತಿದೆ. ಈ ನಾಯಿ ಮತ್ತು ಆಮೆ ಆಟವಾಡುತ್ತಿರುವ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ಕ್ಲಿಪ್​​​ನಲ್ಲಿ ಮೊದಲಿಗೆ ಆಮೆಯು ತನ್ನ ತಲೆಯ ಸಹಾಯದಿಂದ ಫುಟ್ಬಾಲ್​​ನ್ನು ತಳ್ಳುತ್ತದೆ. ಇದನ್ನು ಕಂಡು ಅಲ್ಲೇ ಇದ್ದ ನಾಯಿ ಮರಿ ಸಂತೋಷದಿಂದ ಜಿಗಿಯುತ್ತಾ ಬಾಲ್ ಬಳಿ ಹೋಗಿ ತಾನು ಕೂಡಾ ಚೆಂಡಿನೊಂಡಿಗೆ ಆಟವಾಡಲು ಪ್ರಾರಂಭಿಸುತ್ತದೆ. ಹಾಗೂ ನಾಯಿ ಮರಿ ಒಮ್ಮೆ ಚೆಂಡನ್ನು ತಳ್ಳುತ್ತಾ, ಇನ್ನೊಮ್ಮೆ ಆಮೆಯ ಹಿಂದೆ ಮುಂದೆ ಕುಣಿದಾಡುತ್ತಾ ಆಟವಾಡುವುದನ್ನು ಕಾಣಬಹುದು.


ಇದನ್ನೂ ಓದಿ:Viral Video: ಪ್ರೀತಿಯಿಂದ ಸಾಕಿದ ನಾಯಿಯ ಮೇಲೆ ಭಯಾನಕ ದಾಳಿ, ಮಾಲೀಕರ ಕಣ್ಣು ಮುಂದೆಯೇ ನಡೆಯಿತು ಅನಾಹುತ

ಗೇಬ್ರಿಯೆಲ್ ಕಾರ್ನೋ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಮುದ್ದಾದ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೆ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಅನೇಕರು ಈ ಮುದ್ದಾದ ವಿಡಿಯೋಗೆ ಮನಸೋತು ಕಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾದರು ಅತೀ ವೇಗದ ಆಮೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಸುಂದರವಾದ ವಿಡಿಯೋ ನನ್ನ ದಿನವನ್ನು ಸಂಪೂರ್ಣಗೊಳಿಸಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕ ಬಳಕೆದಾರರು ಈ ವಿಡಿಯೋ ತುಂಬಾ ಮುದ್ದಾಗಿದೆ ಎಂದು ತಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: