ದೇಹಕ್ಕೆ ನಿದ್ರೆ ಬೇಕೇ ಬೇಕು. ದಿನವಿಡೀ ಚಟುವಟಿಕೆಯಿಂದ ಇರುವ ದೇಹಕ್ಕೆ ವಿಶ್ರಾಂತಿ ತುಂಬಾ ಮುಖ್ಯ. ಮನುಷ್ಯರು, ಪ್ರಾಣಿ ಪಕ್ಷಿಗಳು ಸೇರಿದಂತೆ ಭೂಮಿ ಮೇಲಿನ ಪ್ರತಿಯೊಂದು ಜೀವಿಯೂ ಕೂಡಾ ನಿದ್ರೆ ಮಾಡುವ ಮೂಲಕ ದೇಹಕ್ಕೆ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತವೆ. ಹೀಗೆ ಮನುಷ್ಯರು ಮತ್ತು ಪ್ರಾಣಿಗಳು ಹಾಯಾಗಿ ಮಲಗಿ ನಿದ್ರಿಸುವುದನ್ನು ನೀವು ನೋಡಿಯೇ ಇರುತ್ತಿರಿ ಅಲ್ವಾ. ಆದ್ರೆ ನೀವು ಎಂದಾದ್ರೂ ಪಕ್ಷಿಗಳು ಹೇಗೆ ನಿದ್ರಿಸುತ್ತವೆ ಎಂಬುದನ್ನು ನೋಡಿದ್ದೀರಾ? ಹಾಗಿದ್ರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ.
ಫಿಲ್ಮ್ ಮೇಕರ್, ಫೋಟೊಗ್ರಾಫರ್ ಅಮೋಘವರ್ಷ (amoghavarsha) ಈ ಕುರಿತ ಅದ್ಭುತ ವಿಡಿಯೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು, “ ನೀವು ಪಕ್ಷಿಗಳು ಮಲಗುವುದನ್ನು ನೋಡಿದ್ದೀರಾ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಹಕ್ಕಿಯೊಂದು ಹಾಯಾಗಿ ನಿದ್ರಿಸಿರುವ ಸುಂದರ ದೃಶ್ಯವನ್ನು ಕಾಣಬಹುದು. ಫೋಟೋಗ್ರಾಫರ್ ಅಮೋಘವರ್ವ ಮತ್ತು ಅವರ ಸ್ನೇಹಿತ ವೈಲ್ಡ್ ಲೈಫ್ ಫೋಟೋಗ್ರಫಿ ಸಂದರ್ಭದಲ್ಲಿ ಈ ಅದ್ಭುತ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಸಾಮಾನ್ಯವಾಗಿ ಹಕ್ಕಿಗಳು ಕೂಡಾ ರಾತ್ರಿ ಹೊತ್ತಿನಲ್ಲಿ ನಿದ್ರೆ ಮಾಡುವುದರಿಂದ ಅವುಗಳು ಹೇಗೆ ನಿದ್ರಿಸುತ್ತವೆ ಎಂಬುದನ್ನು ನೋಡಲು ಸಾಧ್ಯವಿಲ್ಲ. ಆದ್ರೆ ಕೆಲವೊಂದು ಪಕ್ಷಿಗಳು ರಾತ್ರಿಯಿಡಿ ಎಚ್ಚರವಿದ್ದು, ಹಗಲು ಹೊತ್ತಿನಲ್ಲಿ ನಿದ್ರಿಸುತ್ತವೆ. ಹೀಗೆ ಹಗಲು ಹೊತ್ತಿನಲ್ಲಿ ನಿದ್ರಿಸುವ ಹಕ್ಕಿಗಳಲ್ಲಿ ಸಿಲೋನ್ ಫ್ರಾಗ್‌ಮೌತ್ ಕೂಡಾ ಒಂದು. ಅದು ಹೇಗೆ ನಿದ್ರಿಸುತ್ತವೆ ಎಂಬುದನ್ನು ನೋಡಿ ಎಂದು ಹೇಳುವ ದೃಶ್ಯ ಕಾಣಬಹುದು.
ಇದನ್ನೂ ಓದಿ: ನನ್ನ ಹೆಂಡ್ತಿ ದಿನಾ ಕುಡಿಯುತ್ತಾಳೆ, ನನಗೂ ಕುಡಿಯಲು ಒತ್ತಾಯಿಸುತ್ತಾಳೆ, ವಿಚ್ಛೇದಕ್ಕೆ ಮುಂದಾದ ಪತಿ
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಅಬ್ಬಬ್ಬಾ ಈ ದೃಶ್ಯ ತುಂಬಾನೇ ಅದ್ಭುತವಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹಕ್ಕಿ ತುಂಬಾ ಮುದ್ದಾಗಿದೆʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ