Viral Video: ಜಪಾನಿನ ಮ್ಯಾಜಿಕ್ ಬೌಲ್ ನೋಡಿದ್ದೀರಾ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 02, 2024 | 5:44 PM

ನೀವು ವಿವಿಧ ರೀತಿಯ ಸೂಪ್ ಬೌಲ್​​ಗಳನ್ನು ನೋಡಿರಬಹುದು. ಆದ್ರೆ ನೀವು ಎಂದಾದರೂ ಮ್ಯಾಜಿಕ್ ಸೂಪ್ ಬೌಲ್ ಅನ್ನು ನೋಡಿದ್ದೀರಾ, ಅಥವಾ ಅದ್ರ ಬಗ್ಗೆ ಕೇಳಿದ್ದೀರಾ? ಅರೇ ಇದೇನಪ್ಪಾ ಹೊಸದು, ಅಷ್ಟಕ್ಕೂ ಈ ಬೌಲ್ ಏನು ಮ್ಯಾಜಿಕ್ ಮಾಡುತ್ತೆ ಅಂತ ಯೋಚ್ನೆ ಮಾಡ್ತಿದ್ದೀರಾ, ಹಾಗಿದ್ರೆ ಈ ವಿಡಿಯೋವನ್ನೊಮ್ಮೆ ನೋಡಿ…

Viral Video: ಜಪಾನಿನ ಮ್ಯಾಜಿಕ್ ಬೌಲ್ ನೋಡಿದ್ದೀರಾ
ವೈರಲ್​​ ವಿಡಿಯೋ
Follow us on

ತಂತ್ರಜ್ಞಾನ ಕ್ಷೇತ್ರದಲ್ಲಿ ಜಪಾನ್ ದೇಶ  ಮಿಕ್ಕ ಎಲ್ಲಾ ದೇಶಗಳಿಗಿಂತ ಹತ್ತಾರು ವರ್ಷ ಮುಂದಿದೆ. ಈ ದೇಶವನ್ನು ಆಧುನಿಕ ತಂತ್ರಜ್ಞಾನದ ಪಿತಾಮಹ ಅಂತಾನೇ ಕರಿತಾರೆ.  ಹೌದು ಬುಲೆಟ್ ಟ್ರೈನ್ ಇಂದ ಹಿಡಿದು ವೆಂಡಿಂಗ್ ಮಿಷಿನ್, ರೋಬೋಟ್ ರೆಸ್ಟೋರೆಂಟ್ ವರೆಗೆ ಎಲ್ಲಾ ಆಧುನಿಕ ವ್ಯವಸ್ಥೆ ಜಪಾನ್ ದೇಶದಲ್ಲಿದೆ.   ಜಪಾನ್ ದೇಶ ಮತ್ತು ಅಲ್ಲಿನ ಸಂಶೋಧನೆಗಳು, ಆವಿಷ್ಕಾರಗಳು ತುಂಬಾನೇ ಕ್ರಿಯೇಟಿವ್ ಆಗಿರುತ್ತೆ.  ಹೀಗೆ ಈ ದೇಶದ ತಂತ್ರಜ್ಞಾನ ವ್ಯವಸ್ಥೆಗಳ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ. ಇದೀಗ  ಈ ಜಪಾನ್ ದೇಶ ವಿಶಿಷ್ಟ ಹಾಗೇನೇ ಬಹಳ ಸುಂದರವಾಗಿರುವ ಮ್ಯಾಜಿಕ್ ಸೂಪ್ ಬೌಲ್ ಒಂದನ್ನು ಸಹ ಪರಿಚಯಿಸಿದೆ. ಈ ಯೂಮೀರ್ ಸಕುರಾ ಸೆರಾಮಿಕ್ ಬೌಲಿನ ವಿಶೇಷತೆಯೇನಂದರೆ, ಇದಕ್ಕೆ  ಬಿಸಿ ನೀರನ್ನು ಅಥವಾ ಯಾವುದೇ ಬಿಸಿ ಸೂಪ್ ಹಾಕಿದಾಗ ಬೌಲ್ ಒಳಗೆ ಗುಲಾಬಿ  ಬಣ್ಣದ ಹೂವುಗಳು ಅರಳುವುದನ್ನು ಕಾಣಬಹುದು. ಅದೇ ತಣ್ಣೀರನ್ನು ಹಾಕಿದಾಗ ಬೌಲ್ ಒಳಗಡೆ ಹೂವುಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ. ಈ ಮ್ಯಾಜಿಕ್ ಯೂಮೀರ್ ಸಕುರಾ ಸೆರಾಮಿಕ್ ಬೌಲ್ ಅಮೆಜಾನ್ ಅಲ್ಲಿಯೂ ಲಭ್ಯವಿದೆ.   ಈ ಮ್ಯಾಜಿಕ್ ಬೌಲ್ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗಿದೆ.

@gunsnrosesgirl3 ಎಂಬ  X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಮ್ಯಾಜಿಕ್ ಬೌಲ್ಗೆ ನೀರನ್ನು ಹಾಕಿದಾದ ಬೌಲ್ ಒಳಗಡೆ  ಹೂವುಗಳು ಅರಳುವ ಮ್ಯಾಜಿಕಲ್ ದೃಶ್ಯವನ್ನು ಕಾಣಬಹುದು.

ಈ ವೈರಲ್​​ ವಿಡಿಯೋ ಇಲ್ಲಿದೆ:

9 ಸೆಕೆಂಡುಗಳ ಈ ವೈರಲ್ ವಿಡಿಯೋದಲ್ಲಿ  ಎಲೆಗಳಿಲ್ಲದ ಮರದ ಚಿತ್ರವನ್ನು ಹೊಂದಿರುವ ಬಿಳಿಬಣ್ಣದ ಸೆರಾಮಿಕ್ ಸೂಪ್ ಬೌಲ್ ಅನ್ನು ಕಾಣಬಹುದು. ಈ ಬೌಲ್ಗೆ ಒಬ್ಬ ವ್ಯಕ್ತಿ ಬಿಸಿ ನೀರನ್ನು ಸುರಿಯುತ್ತಾರೆ. ಆ ಸಂದರ್ಭದಲ್ಲಿ ಬೌಲ್ ಒಳಗಿನ ಮರದ ಚಿತ್ರದ ಸುತ್ತಲೂ  ಗುಲಾಬಿ ಬಣ್ಣದ ಹೂವುಗಳು (ಚೆರ್ರಿ ಬ್ಲಾಸಮ್) ಅರಳುವ ಸುಂದರ ದೃಶ್ಯವನ್ನು  ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಸ್ಲ್ಯಾಪ್ ಕಬಡ್ಡಿ: ಇದರಲ್ಲಿ ರೈಡಿಂಗ್ ಇಲ್ಲ, ಒಬ್ಬರಿಗೊಬ್ಬರು ಎದೆಗೆ ಹೊಡೆಯುವುದು 

ಜನವರಿ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ  14.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಾವ್!! ಮ್ಯಾಜಿಕಲ್ ಬೌಲ್ʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ತುಂಬಾ ಅದ್ಭುತವಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರು ʼಈ ಚೆರ್ರಿ ಬ್ಲಾಸಮ್ ಮ್ಯಾಜಿಕಲ್ ಬೌಲ್ ತುಂಬಾ ಮುದ್ದಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ತುಂಬಾ ಅದ್ಭುತವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: