Viral Video : ಸಣ್ಣ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಅನ್ನು ಟೇಕಾಫ್ ಮಾಡುವಾಗ ಪೈಲಟ್ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಈ ವಿಡಿಯೋ ಎಲ್ಲಿ ಯಾವಾಗ ಚಿತ್ರೀಕರಿಸಿದ್ದು ಎಂಬ ವಿವರಗಳು ತಿಳಿದುಬಂದಿಲ್ಲ. ಆದರೆ ಇದೊಂದು ಹಳೆಯ ವಿಡಿಯೋ ಇರಬಹುದು ಎಂಬ ಅಂದಾಜು. ನಿಯಂತ್ರಣ ಕಳೆದುಕೊಂಡ ಹೆಲಿಕಾಪ್ಟರ್ ಮುಂದೇನಾಗುತ್ತದೆ ಎಂದು ತಿಳಿದುಕೊಳ್ಳಲು ಈ ವಿಡಿಯೋ ನೋಡಿ.
Imagine tryna explain this to the insurance company without the video pic.twitter.com/fEg8DtS6Be
ಇದನ್ನೂ ಓದಿ— Lance?? (@BornAKang) December 28, 2022
ಲ್ಯಾನ್ಸ್ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಅನ್ನು ಪೋಸ್ಟ್ ಮಾಡಿದ್ದಾರೆ. ಹೆಲಿಪ್ಯಾಡ್ನ ಬಳಿ ಎರಡು ಕಾರುಗಳು ನಿಂತಿವೆ. ಅವಘಡವನ್ನು ಅಂದಾಜಿಸಿದ ನಾಯಿ ಓಡಿಬರುತ್ತದೆ. ಆ ಹೊತ್ತಿಗೆ ನಿಯಂತ್ರಣ ಕಳೆದುಕೊಂಡ ಹೆಲಿಕಾಪ್ಟರ್ಗೆ ನೆಲಕ್ಕಭಿಮುಖವಾಗಿ ಅಪ್ಪಳಿಸುತ್ತದೆ. ಇನ್ಷುರೆನ್ಸ್ ಕಂಪೆನಿಗೆ ಈ ಅಪಘಾತದ ಕುರಿತು ವಿಡಿಯೋ ಸಾಕ್ಷ್ಯ ಇಲ್ಲದೇ ವಿವರಿಸಿ ಎಂದು ಲ್ಯಾನ್ಸ್ ನೋಟ್ ಹಾಕಿದ್ದಾರೆ.
ಹೆಲಿಕಾಪ್ಟರ್ಗೆ ಇನ್ಶುರೆನ್ಸ್ ಇದೆಯೇ? ಎಂದು ನೆಟ್ಟಿಗರು ಕೇಳಿದ್ದಾರೆ. ಈ ನಾಯಿಮರಿಗೆ ಮೊದಲೇ ತಿಳಿದಿತ್ತೆ, ಹೀಗೊಂದು ಅವಘಡ ಸಂಭವಿಸಬಹುದೆಂದು? ಹೀಗೆ ಕೇಳಿದ್ದಾರೆ ಒಬ್ಬರು. ಪೈಲಟ್ ಮೊದಲ ಸಲ ಹೆಲಿಕಾಪ್ಟರ್ ಓಡಿಸುತ್ತಾನೆಯೇ? ಎಂದು ಮತ್ತೊಬ್ಬರು ಕೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ