ವರ್ಷದ ಆರಂಭಕ್ಕೂ ಅಂತ್ಯಕ್ಕೂ ಕೊರೋನಾ ಆತಂಕವೇ ತುಂಬಿದೆ. ಆದರೂ 2021 ಮುಗಿಯಲು ಇನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿದೆ. ಒಂದು ವರ್ಷದಲ್ಲಿ ಹಲವು ವಿಭಿನ್ನ, ವಿಚಿತ್ರ, ಖುಷಿಯ, ನೋವಿನ ಘಟನೆಗಳು ನಡೆದುಹೋಗಿದೆ. ವರ್ಷದ ಅಂತ್ಯಕ್ಕೆ ಬಂದು ನಿಂತು ಹಿಂತಿರುಗಿ ನೋಡಿದಾಗ ಒಂದಷ್ಟು ಮರೆಯಾಲಾಗದ ಘಟನೆಗಳು ಕಣ್ಣು ಮುಂದೆ ಬಂದು ಹೋಗುತ್ತವೆ. ಈ ವರ್ಷವೂ ಜಗತ್ತಿನ ವಿವಿಧ ದೇಶಗಳ, ವಿವಿಧ ರೀತಿಯ ಸಾವಿರಾರು ವೀಡಿಯೋಗಳೂ ವೈರಲ್ ಆಗಿವೆ. ಆದರೆ ಅವುಗಳಲ್ಲಿ ಕೆಲವು ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತೆ ಮಾಡಿದೆ. 2021ರಲ್ಲಿ ವೈರಲ್ ಆದ ವೀಡಿಯೋಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳಲು ನೀವು ಬಯಸಿದರೆ ಇಲ್ಲಿದೆ ನೋಡಿ.
ಪಾವ್ರಿ ಹೋ ರಹಿ ಹೈ
ಪಾಕಿಸ್ತಾನಿ ಯುವತಿಯ ಟಿಕ್ ಟಾಕ್ ವೀಡಿಯೋವೋಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಯಶ್ರಾಜ್ ಮುಖಾಟೆ ಅವರ ಹಾಡಿನೊಂದಿಗೆ ಧನನಿರ್ ಮೊಬಾನಿ ಎನ್ನುವ ಯುವತಿ ತನ್ನ ಸ್ನೇಹಿತರೊಂದಿಗೆ ಮಾಡಿದ ಟಿಕ್ ಟಾಕ್ ವೀಡಿಯೋ ಸಖತ್ ವೈರಲ್ ಆಗಿತ್ತು. ವೀಡಿಯೋದಲ್ಲಿ ಯುವತಿ “Ye humari car hai, aur yeh hum hai. Aur ye humari pawry ho rahi hai. ಎನ್ನುವುದನ್ನು ನೋಡಬಹುದು.
ಬಚ್ಪನ್ ಕಾ ಪ್ಯಾರ್
ಛತ್ತೀಸ್ಗಡದ ಹುಡುಗ ಸಹದೇವ್ ದಿರ್ಡೋ ಹಾಡಿದ ಬಚ್ಪನ್ ಕಾ ಪ್ಯಾರ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 2021ರಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ವೀಡಿಯೋಗಳಲ್ಲಿ ಬಚ್ಪನ್ ಕಾ ಪ್ಯಾರ್ ಕೂಡ ಒಂದಾಗಿದೆ. ಛತ್ತೀಸ್ಗಡದ ಮುಖ್ಯಮಂತ್ರಿಗಳೂ ಕೂಡ ಬಾಲಕನನ್ನು ಸನ್ಮಾನಿಸಿದ್ದರು. ಜತೆಗೆ ಬಾಲಿವುಡ್ ರಾಪರ್ ಬಾದ್ ಶಾರೊಂದಿಗೂ ಬಾಲಕ ಹಾಡನ್ನು ಹಾಡಿದ್ದ.
ಮನಿಕೆ ಮಾಗೆ ಹಿತೆ
ವೀಡಿಯೋ ಬಿಡುಗಡೆಯಾಗಿ ಬರೋಬ್ಬರಿ 2 ವರ್ಷಗಳ ಬಳಿಕ ಶ್ರೀಲಂಕಾ ಮೂಲದ ಗಾಯಕಿ ಯೋಹಾನಿ ಅವರ ಮನಿಕೆ ಮಗೆ ಹಿತೆ ಹಾಡು ಹೊಸ ದಾಖಲೆ ನಿರ್ಮಿಸಿದೆ. ಸಿಂಹಿಳೀಯ ಭಾಷೆಯ ಹಾಡು ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲೂ ಡಬ್ ಆಗುವ ಮೂಲಕ ನೆಟ್ಟಿಗರ ಮನ ಗೆದ್ದತ್ತು. ರಾತ್ರಿ ಬೆಳಗಾಗುವುದರೊಳಗೆ ವೈರಲ್ ಆದ ಹಾಡು 3 ತಿಂಗಳಿನಲ್ಲಿ 91 ಮಿಲಿಯನ್ ವೀಕ್ಷಣೆ ಪಡೆದಿತ್ತು.
ಇಂದಿರಾ ನಗರ್ ಕಾ ಗುಂಡ
ರಾಹುಲ್ ದ್ರಾವಿಡ್ ಅವರ ಕ್ರೆಡಿಟ್ ಕಾರ್ಡ್ ಜಾಹೀರಾತಿನ ವೀಡಿಯೋ ಈ ವರ್ಷ ಸಖತ್ ವೈರಲ್ ಆಗಿತ್ತು. ವೀಡಿಯೋದಲ್ಲಿ ಜನರನ್ನು ಕೂಗುವುದು, ಕಾರ್ ಬೈಕ್ಗಳ ಸೈಡ್ ಮಿರರ್ಗಳನ್ನು ಒಡೆದು ಹಾಕಿ ಹಿಂದಿಯಲ್ಲಿ ಇಂದಿರಾ ನಗರ್ ಕಾ ಗುಂಡಾ ಹು ಮೇ ಎಂದು ಹೇಳುವ ವೀಡಿಯೋ ವೈರಲ್ ಆಗಿತ್ತು.
ಐರ್ಲೆಂಡ್ ಅಧ್ಯಕ್ಷರ ನಾಯಿಯ ವೀಡಿಯೋ
ಐರ್ಲೆಂಡ್ ಅಧ್ಯಕ್ಷ ಮೈಕೆಲ್ ಹಿಗ್ಗಿನ್ಸ್ ಅವರು ಭಾಷಣ ಮಾಡುತ್ತಿದ್ದ ವೇಳೆ ಅವರ ಸಾಕು ನಾಯಿ ಹಿಂದಿನಿಂದ ಬಂದು ಅಡ್ಡಿಪಡಿಸಿತ್ತು. ಇದರ ಕ್ಯೂಟ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಸೆಳೆದಿತ್ತು.
ವೀಡಿಯೋ ಕಾಲ್ ವೇಳೆ ಪತಿಗೆ ಮತ್ತು ನೀಡಿದ ಮಹಿಳೆ
Zoom call …..so funny ? ??pic.twitter.com/6SV62xukMN
— Harsh Goenka (@hvgoenka) February 19, 2021
ಝೂಮ್ ವೀಡಿಯೋ ಕಾಲ್ ವೇಳೆ ಮಹಿಳೆಯೊಬ್ಬಳು ಪತಿಗೆ ಮುತ್ತು ನೀಡಲು ಬರುತ್ತಿರುವ ವೀಡಿಯೋ ವೈರಲ್ ಆಗಿತ್ತು. ಇದರ ವೀಡಿಯೋವನ್ನು ಆನಂದ್ರ ಮಹಿಂದ್ರಾ ಸೇರಿದಂತೆ ಹಲವರು ಹಂಚಿಕೊಂಡಿದ್ದರು. ಜನರನ್ನು ನಗೆಗಡಲ್ಲಿ ತೇಲಿಸಿತ್ತು.
ರೆಮೋ ಡಿ ಸೋಜಾ ಹಂಚಿಕೊಂಡ ವೀಡಿಯೋ
ನೃತ್ಯ ಸಂಯೋಜಕ ರೆಮೊ ಡಿಸೋಜಾ ಅವರು ಹಂಚಿಕೊಂಡ ವೀಡಿಯೋ ವೈರಲ್ ಆಗಿತ್ತು. ಸಾರ್ವಜನಿಕವಾಗಿ ವ್ಯಕ್ತಿಯೊಬ್ಬ ಕೊರೋನಾ ಔಷಧಿ ರೆಮಿಡಿಸಿವಿರ್ ಹೆಸರನ್ನು ಹೇಳಲು ಬರದೆ ಸಿಪ್ಲಾ ಕಂಪನಿಯ ರೆಮೊ ಡಿಸೋಜಾ ಎಂದಿದ್ದ ವೀಡಿಯೋ ವೈರಲ್ ಆಗಿತ್ತು.
ಮದ್ಯ ಬೇಕೆಂದ ಮಹಿಳೆಯ ವೀಡಿಯೋ
#WATCH Delhi: A woman, who has come to purchase liquor, at a shop in Shivpuri Geeta Colony, says, “…Injection fayda nahi karega, ye alcohol fayda karegi…Mujhe dawaion se asar nahi hoga, peg se asar hoga…” pic.twitter.com/iat5N9vdFZ
— ANI (@ANI) April 19, 2021
ಕೊರೋನಾ ಆರಂಭದ ಎಪ್ರಿಲ್ನಲ್ಲಿ ದೆಹಲಿಯಲ್ಲಿ ಮದ್ಯದಂಗಡಿಯನ್ನು ಬಂದ್ ಮಾಡಲಾಗಿತ್ತು ಈ ವೇಳೆ ಮಹಿಳೆಯೊಬ್ಬರು ಮದ್ಯ ಖರೀದಿಸಿ, ಕೊರೋನಾ ಇಂಜಕ್ಷನ್ನಿಂದ ಏನೂ ಆಗುವುದಿಲ್ಲ. ಮದ್ಯ ಕುಡಿದರೆ ಎಲ್ಲವೂ ಸರಿಹೋಗುತ್ತದೆ ಎನ್ನುವ ವೀಡಿಯೋ ವೈರಲ್ ಅಗಿತ್ತು.
ಇದನ್ನೂ ಓದಿ: