Shocking: ಕೆಎಫ್ಸಿ ಚಿಕನ್ನಲ್ಲಿ ಕೋಳಿಯ ತಲೆ ಪತ್ತೆ: ಶಾಕ್ ಆದ ಮಹಿಳೆ
ಯುಎಸ್ನ ಮಹಿಳೆಯೊಬ್ಬರು ಆರ್ಡರ್ ಮಾಡಿದ್ದ ಕೆಎಫ್ಸಿ ಚಿಕನ್ ನಲ್ಲಿ ಕೋಳಿಯ ಇಡಿಯಾದ ತಲೆ ಸಿಕ್ಕಿದೆ. ಈ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ.
ಆನ್ಲೈನ್ ಫುಡ್ ಆರ್ಡರ್ ಮಾಡಿದಾಗ ಎಷ್ಟು ಜಾಗೃತೆವಹಿಸಿದರೂ ಸಾಲದು. ಆರ್ಡರ್ ಮಾಡಿ ತರಿಸಿಕೊಂಡ ಆಹಾರದಲ್ಲಿ ಅಸಹ್ಯವಾಗುವ ವಸ್ತುಗಳಿದ್ದರೆ ತಿನ್ನಲು ಮನಸ್ಸಾಗುವುದಿಲ್ಲ. ಅಂತಹ ಹಲವು ಸನ್ನಿವೇಶಗಳು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಹಲವು ಬಾರಿ ಕಾಣಿಸಿಕೊಂಡಿದೆ. ಈ ಹಿಂದೆ ಘಾನ ದೇಶದಲ್ಲಿ ಮಹಿಳೆಯೊಬ್ಬರಿಗೆ ಹೊಟೇಲ್ವೊಂದರಲ್ಲಿ ಊಟ ಮಾಡುವಾಗ ಮರ್ಮಾಂಗ ಸಿಕ್ಕಿತ್ತು. ಈ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬೀದಿ ಬದಿ ಆಹಾರವನ್ನು ತಿನ್ನು ಮೊದಲು ಎಚ್ಚರಿಕೆವಹಿಸುವಂತೆ ಹೇಳಿದ್ದರು.
ಇದೀಗ ಯುಎಸ್ನ ಮಹಿಳೆಯೊಬ್ಬರು ಆರ್ಡರ್ ಮಾಡಿದ್ದ ಕೆಎಫ್ಸಿ ಚಿಕನ್ ನಲ್ಲಿ ಕೋಳಿಯ ಇಡಿಯಾದ ತಲೆ ಸಿಕ್ಕಿದೆ. ಈ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ. ಗೆಬ್ರಿಯಲ್ ಎನ್ನುವ ಮಹಿಳೆ ಈ ಚಿಕನ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗೆಬ್ಬರಿಯಲ್ಲಿ ಕೋಳಿಯ ತಲೆ ಪತ್ತೆಯಾಗಿದ್ದರ ಫೊಟೋ ಹಂಚಿಕೊಂಡಿದ್ದಾರೆ. ನೆಟ್ಟಿಗರು ಅದ್ನು ನೋಡಿ ಅಸಹ್ಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಗೆಬ್ರಿಯಲ್ ನಾನು ಇಷ್ಟಪಟ್ಟು ತರಿಸದ್ದ ಚಿಕನ್ನಲ್ಲಿ ಕೋಳಿಯ ತಲೆಯನ್ನುನೋಡಿ ಗಾಬರಿಗೊಂಡಿದ್ದೇನೆ. ಊಟವನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ನೀವೂ ಆಹಾರವನ್ನು ತಿರಸಿಕೊಳ್ಳುವ ಮೊದಲು ಎಚ್ಚರವಹಿಸಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್
Published On - 5:33 pm, Thu, 23 December 21