Viral Video: ಕೆಳಗೆ ಇಳೀ ಮಗು; ಅಡುಗೆಮನೆಯ ಕಟ್ಟೆ ಏರಿ ತಪಸ್ಸಿಗೆ ಕುಳಿತ ಮಾರ್ಜಾಲ

|

Updated on: Aug 30, 2023 | 11:04 AM

Viral Video: ತನ್ನನ್ನು ಸಾಕಿದವರ ಗಮನ ಸದಾ ತನ್ನ ಮೇಲೆಯೇ ಇರಬೇಕು. ಅದನ್ನು ಪ್ರೀತಿಸುವ ಅಥವಾ ನೋಡಿಕೊಳ್ಳುವ ವಿಷಯದಲ್ಲಿ ಚೂರು ಹೆಚ್ಚೂ ಕಡಿಮೆಯಾದರೂ ಹೀಗೆ ಹಠಕ್ಕಿಳಿದು ಬಿಡುತ್ತದೆ ಬೆಕ್ಕು. ಕಣ್ಣುಮುಚ್ಚಿಕೊಂಡೇ ಮೌನದಲ್ಲಿ ತನ್ನ ಹಠವನ್ನು ಸಾಧಿಸತೊಡಗುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಇದಕ್ಕೆ ಹಾಲು ಬೇಕಿದೆಯೋ ಪ್ರೀತಿಯೋ?

Viral Video: ಕೆಳಗೆ ಇಳೀ ಮಗು; ಅಡುಗೆಮನೆಯ ಕಟ್ಟೆ ಏರಿ ತಪಸ್ಸಿಗೆ ಕುಳಿತ ಮಾರ್ಜಾಲ
ಮಗು ಕೆಳಗಿಳಿ... ಅಮ್ಮನ ಮಾತನ್ನು ಕೇಳದ ಬೆಕ್ಕು!
Follow us on

Cat: ಇಷ್ಟೊಂದು ತಿಳಿವಳಿಕೆಯುಳ್ಳ ನೀನು ಹೀಗೆ ಮಾಡುವುದೆ? ಇಳಿ ಕೆಳಗೇ. ಏನಿದು ಕಣ್ಣುಮುಚ್ಚಿಕೊಂಡು ಕೂತಿದ್ದೀಯಾ, ಕಿವಿನೂ ಮುಚ್ಚಿಕೊಂಡಿದ್ದೀಯೋ ಏನು? ಮಗು ಕೆಳಗೆ ಇಳಿ. ನಿನ್ನ ಊಟ ತಿಂಡಿಯೆಲ್ಲ ಕೆಳಗಿದೆ. ಇಲ್ಲಿ ಹೀಗೆ ಕುಳಿತರೇ ಮೈಸುಟ್ಟುಕೊಳ್ಳುತ್ತೀ. ಒಲೆಯ ಮೇಲಿಟ್ಟಿರುವುದು ಹಾಲಲ್ಲ, ತಿಳಿಯಿತೋ? ಎಂದು ಈ ಬೆಕ್ಕಿನ ಅಮ್ಮ ತಿಳಿಸಿ ಹೇಳುತ್ತಿದ್ದಾಳೆ. ಆದರೆ ಈ ಮಗುಬೆಕ್ಕು ಮಾತ್ರ ಕಣ್ಣು ಕಿವಿ ಮುಚ್ಚಿಕೊಂಡು ಅಡುಗೆಮನೆಯ ​ ಕಟ್ಟೆ ಏರಿ ಕುಳಿತುಬಿಟ್ಟಿದೆ. ಈ ಮುದ್ದಾದ ವಿಡಿಯೋ (Video) ನೋಡಿದ ಸಾಮಾಜಿಕ ಜಾಲತಾಣಿಗಳು ಬಗೆಬಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಬಚ್ನಾ ಏ ಹಸೀ; ಅಬ್ಬಾ ಎಂಥಾ ಶಕ್ತಿ! ಅಮ್ಮ ಮಗಳ ನೃತ್ಯ ನೋಡಿದ ನೆಟ್ಟಿಗರ ಅಚ್ಚರಿ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಡುಗೆಮನೆಯ ಕಟ್ಟೆ ಏರಿ ತಪಸ್ಸಿಗೆ ಕುಳಿತುಬಿಟ್ಟಿದೆ ಈ ಬೆಕ್ಕು. ಎಷ್ಟೋ ದಿನದಿಂದ ಊಟಕ್ಕೇ ಹಾಕಿಲ್ಲವೇನೋ ಎಂಬರ್ಥದಲ್ಲಿ. ಇದರ ಅಮ್ಮ ಅದೆಷ್ಟು ಮುದ್ದಿನಿಂದ ಕೆಳಗಿಳಿಯಲು ಹೇಳುತ್ತಿದ್ದಾಳೆ, ಆದರೂ ಅದು ಜಗ್ಗುತ್ತಿಲ್ಲ. ಮೌನವಾಗಿ ಅವಳೊಂದಿಗೆ ಸಂಭಾಷಿಸುತ್ತಿದೆ. ಮನಸ್ಸನ್ನು ಕರಗಿಸುವಂಥ ಈ ವಿಡಿಯೋ ನೋಡಿ ಅನೇಕರು ಈ ಬೆಕ್ಕು ನನಗೆ ಬೇಕು ಎನ್ನುತ್ತಿದ್ದಾರೆ.

ಕಟ್ಟೆ ಬಿಟ್ಟು ಕೆಳಗಿಳಿಯಲು ಒಪ್ಪದ ಬೆಕ್ಕು

ಕಣ್ಣುಮುಚ್ಚಿಕೊಂಡು ಹೇಳಿದ್ದೆಲ್ಲವನ್ನೂ ಕೇಳಿಸಿಕೊಳ್ಳುತ್ತ ಹಠ ಹಿಡಿದಿರುವ ಮುದ್ದುಮರಿಯು ಭಾರೀ ಮೋಡಿ ಮಾಡಿದೆ.  ಸ್ಟ್ರೇ ಕ್ಯಾಟ್ಸ್ ಲವರ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ಅನ್ನು 3 ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಸುಮಾರು 8.4 ಲಕ್ಷ ಜನರು ಲೈಕ್ ಮಾಡಿದ್ದಾರೆ. 6 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಲಕ್ಷಾಂತರ ಜನರು ಈ ವಿಡಿಯೋದಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: ಬೆಂಗಳೂರು; ಎಸ್​ಎಸ್​ಎಲ್​ಸಿ ಮುಗಿಸಿ 38 ವರ್ಷಗಳ ನಂತರ ಪಿಯುಸಿ ಪರೀಕ್ಷೆ ಬರೆಯಲಿರುವ ಆಟೋ ಚಾಲಕ

ಈ ಪುಟ್ಟ ಮಗುವನ್ನು ಅಪ್ಪಿಕೊಳ್ಳಬೇಕು ಎನ್ನಿಸುತ್ತಿದೆ ಎಂದು ಒಬ್ಬರು. ಈ ಅಮ್ಮನೂ ಮತ್ತವಳ ಮಗುವೂ ತುಂಬಾ ಮುದ್ದಾಗಿದ್ದಾರೆ ಎಂದು ಇನ್ನೊಬ್ಬರು. ನಮ್ಮ ಮನೆಯಲ್ಲಿ ಮೂರು ಬೆಕ್ಕುಗಳಿವೆ. ಅಡುಗೆಮನೆ ಕಟ್ಟೆ, ಡೈನಿಂಗ್​ ಟೇಬಲ್ ಕೂಡ ಅವುಗಳಿಗೆ ಸಾಲುವುದಿಲ್ಲ ಎಂದಿದ್ದಾರೆ ಮತ್ತೊಬ್ಬರು. ಈಕೆ ಆ ಬೆಕ್ಕಿಗೆ ಏನು ಹೇಳುತ್ತಿದ್ದಾಳೆ ಎಂದು ನನಗೆ ಸ್ವಲ್ಪವೂ ಅರ್ಥವಾಗುತ್ತಿಲ್ಲ. ಆದರೆ ಈ ವಿಡಿಯೋ ಅನ್ನು ನಾನು ಬಹಳ ಪ್ರೀತಿಸುತ್ತಿದ್ದೇನೆ ಎಂದಿದ್ದಾರೆ ಇನ್ನೊಬ್ಬರು. ಅಯ್ಯೋ ನನ್ನ ಬೆಕ್ಕು ಕೂಡ ಹೀಗೆಯೇ ಮಾಡುತ್ತದೆ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:01 am, Wed, 30 August 23