Viral: ಅರರೇ… ಕಲ್ಲಿನಿಂದ ನ್ಯಾಚುರಲ್‌ ಮೆಹಂದಿ ರೆಡಿ ಮಾಡಿದ ಯುವತಿ; ವಿಡಿಯೋ ವೈರಲ್‌

ಸಾಮಾನ್ಯವಾಗಿ ಗೋರಂಟಿ ಎಲೆಗಳಿಂದ ಮೆಹಂದಿಯನ್ನು ತಯಾರು ಮಾಡುತ್ತಾರೆ ಅಲ್ವಾ. ಅದು ಕೈಗೆ ಹಾಕಿದಾಗ ಗಾಢ ಬಣ್ಣ ಬರಲಿ ಎಂದು ಅದಕ್ಕೆ ಒಂದಷ್ಟು ಕೆಮಿಕಲ್‌ ಉತ್ಪನ್ನಗಳನ್ನು ಕೂಡಾ ಹಾಕ್ತಾರೆ. ಆದ್ರೆ ಇಲ್ಲೊಬ್ಬಳು ಯುವತಿ ಕಲ್ಲಿನಿಂದ ನ್ಯಾಚುರಲ್‌ ಆಗಿರುವಂತಹ ಮೆಹಂದಿಯನ್ನು ತಯಾರಿಸಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗಿತ್ತಿದ್ದು, ಅರೇ ಕಲ್ಲಿನಿಂದ ಇದು ಹೇಗಪ್ಪಾ ಮೆಹಂದಿ ರೆಡಿ ಮಾಡೋಕೆ ಸಾಧ್ಯ ಎಂದು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ.

Viral: ಅರರೇ… ಕಲ್ಲಿನಿಂದ ನ್ಯಾಚುರಲ್‌ ಮೆಹಂದಿ ರೆಡಿ ಮಾಡಿದ ಯುವತಿ; ವಿಡಿಯೋ ವೈರಲ್‌
ವೈರಲ್‌ ವಿಡಿಯೋ
Image Credit source: Instagram

Updated on: May 10, 2025 | 4:03 PM

ಹಿಮಾಚಲ ಪ್ರದೇಶ, ಮೇ 10: ಕೈಗಳಿಗೆ ಮೆಹಂದಿ (Mehandi) ಹಚ್ಚುವುದೆಂದರೆ ಹೆಂಗಳೆಯರಿಗೆ ಪಂಚಪ್ರಾಣ. ಮೆಹಂದಿಯನ್ನು ಮಂಗಳಕರ ಎಂದು ಪರಿಗಣಿಸಿರುವ ಕಾರಣ ಹೆಚ್ಚಿನ ಮಹಿಳೆಯರು ಶುಭ ಕಾರ್ಯಗಳ ಸಂದರ್ಭದಲ್ಲಿ ಕೈತುಂಬಾ ಮೆಹಂದಿ ಹಾಕಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಮೆಹಂದಿಗಳನ್ನು ಗೋರಂಟಿ ಎಲೆಗಳಿಂದ ರೆಡಿ ಮಾಡ್ತಾರೆ. ಜೊತೆಗೆ ಕೈಗೆ ಹಾಕಿದ ಬಳಿಕ ಗೋರಂಟಿ ಬಣ್ಣ ಗಾಢವಾಗಿ ಮೂಡಲಿ ಎಂದು ಒಂದಷ್ಟು ಕೆಮಿಕಲ್‌ಗಳನ್ನು ಕೂಡಾ ಸೇರಿಸ್ತಾರೆ. ಹೀಗಿರುವಾಗ ಇಲ್ಲೊಬ್ಬಳು ರೂಬಿ ಠಾಕೂರ್‌ ಎಂಬಾಕೆ ಕೆಮಿಕಲ್‌ ಫ್ರೀ ಮೆಹಂದಿಯ ಬಗ್ಗೆ ತಿಳಿಸಿಕೊಟ್ಟಿದ್ದಾಳೆ. ಹೌದು ಹಿಮಾಚಲ ಪ್ರದೇಶದ (Himachal Pradesh) ಆಕೆ ಅಲ್ಲಿನ ಪಹಾಡಿ ಸಂಪ್ರದಾಯದಂತೆ (Pahadi Tradition) ಕಲ್ಲುಗಳಲ್ಲಿ ಅಂಟಿರುವ ಪಾಚಿಯಂತಹ ವಸ್ತುವಿನಿಂದ ನೈಸರ್ಗಿಕ ಮೆಹಂದಿಯನ್ನು ತಯಾರಿಸಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಕಲ್ಲಿನಿಂದ ನ್ಯಾಚುರಲ್‌ ಮೆಹಂದಿ ರೆಡಿ ಮಾಡಿದ ಯುವತಿ:

ಮೆಹಂದಿಯನ್ನು ಗೋರಂಟಿ ಎಲೆಗಳಿಂದ ತಯಾರು ಮಾಡ್ತಾರೆ ಅನ್ನೋ ವಿಚಾರ ಬಹುತೇಕ ನಮಗೆಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಇಲ್ಲೊಬ್ಬಳು ಹಿಮಾಚಲ ಪ್ರದೇಶದ ಯುವತಿ ಕಲ್ಲಿನಿಂದ ನ್ಯಾಚುರಲ್‌ ಮೆಹಂದಿ ತೆಗೆಯುವುದು ಹೇಗೆಂಬುದನ್ನು ಹೇಳಿ ಕೊಟ್ಟಿದ್ದಾಳೆ. ಆಕೆ ಬಂಡೆ ಕಲ್ಲಿನಲ್ಲಿ ಅಂಟಿರುವಂತಹ ಪಾಚಿಯಂತಹ ವಸ್ತುವನ್ನು ತೆಗೆದು ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಅರೆದು ಮೆಹಂದಿ ರೆಡಿ ಮಾಡಿ ಅದನ್ನು ಕೈಗೆ ಹಚ್ಚಿದ್ದಾಳೆ.

ಇದನ್ನೂ ಓದಿ
ತಾಯಿ ಶ್ವಾನದ ಕೈಕಾಲು ಹಿಡಿದು ಮರಿಗಳಿಗೆ ಎದೆ ಹಾಲು ಕುಡಿಸಿದ ಹುಡುಗ್ರು
ಬಲುಬುದ್ಧಿವಂತ ಪಾಕ್ ರಕ್ಷಣಾ ಸಚಿವ, ಅಸಲಿ ವಿಚಾರ ಇಲ್ಲಿದೆ
ಹಾಡು ಹಾಡಿ ದಾಂಪತ್ಯ ಉಳಿಸಿಕೊಂಡ ಪತಿ, ಲಾಯರ್ ಶಾಕ್ ದಂಪತಿ ರಾಕ್
ಹೆಚ್ಚುವರಿ ದರ ವಸೂಲಿ ಪ್ರಶ್ನಿಸಿದ್ದಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ

ಈ ನ್ಯಾಚುರಲ್‌ ಮೆಹಂದಿ ವಿಡಿಯೋವನ್ನು ರೂಬಿ ಠಾಕೂರ್‌ (Thakurraveena982) ಎಂಬಾಕೆ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ನೀವ್ಯಾವತ್ತದ್ರೂ ಕಲ್ಲಿನಿಂದ ತೆಗೆದ ಮೆಹಂದಿಯನ್ನು ಹಚ್ಚಿದ್ದೀರಾ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: ತಾಯಿ ಶ್ವಾನದ ಕೈಕಾಲು ಹಿಡಿದು ಮರಿಗಳಿಗೆ ಎದೆ ಹಾಲು ಕುಡಿಸಿದ ಹುಡುಗ್ರು; ಹೃದಯಸ್ಪರ್ಶಿ ದೃಶ್ಯ ವೈರಲ್‌

ವೈರಲ್‌ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಕಲ್ಲಿನಿಂದ ನ್ಯಾಚುರಲ್‌ ಮೆಹಂದಿ ತಯಾರಿಸುವ ದೃಶ್ಯವನ್ನು ಕಾಣಬಹುದು. ಹೌದು ಆಕೆ ಕಲ್ಲಿನಲ್ಲಿ ಅಂಟಿರುವಂತಹ ಪಾಚಿಯಂತಹ ವಸ್ತುವನ್ನು ತೆಗೆದು ಅದನ್ನು ನೀರು ಬೆರೆಸಿ ಚೆನ್ನಾಗಿ ಅರೆದು ಕೈಗೆ ಹಚ್ಚಿದ್ದಾಳೆ. ಗೋರಂಟಿ ಎಲೆಯಿಂದ ತಯಾರಿಸಿದ ಮೆಹಂದಿಯಂತೆ ಈ ನ್ಯಾಚುರಲ್‌ ಮೆಹಂದಿ ಕೂಡಾ ಕೈಗೆ ಗಾಢವಾಗ ಬಣ್ಣವನ್ನು ನೀಡಿದೆ.

ನಾಲ್ಕು ದಿನಗಳ ಹಿಂದೆ ಶೇರ್‌ ಮಾಡಲಾದ ಈ ವಿಡಿಯೋ  7.8 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ತುಂಬಾನೇ ಅದ್ಭುತವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕಲ್ಲಿನಿಂದಲೂ ಮೆಹಂದಿ ತಯಾರಿಸಬಹುದೆಂದು ಇವತ್ತೇ ಗೊತ್ತಾಗಿದ್ದುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಾಲ್ಯದಲ್ಲಿ ನಾವು ಕೂಡಾ ಈ ಮೆಹಂದಿಯನ್ನು ಹಾಕಿದ್ದೇವೆʼ ಎಂದು ಹೇಳಿದ್ದಾರೆ. ಇನ್ನೋ ಅನೇಕರು ಇದು ಹೊಸ ವಿಷಯವೆಂದು ಆಶ್ಚರ್ಯಪಟ್ಟಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Sat, 10 May 25