ಈ ಜನರು ಮದ್ವೆ ದಿನ ಮಾತ್ರ ಸ್ನಾನ ಮಾಡ್ತಾರೆ, ಆದ್ರೂ ದೇಹದ ಸ್ವಚ್ಛತೆ ಕಡೆಗೆ ಗಮನ ಕೊಡ್ತಾರೆ, ಹೇಗೆ ಅಂತೀರಾ?

ಪ್ರತಿದಿನ ಸ್ನಾನ ಮಾಡುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಕೆಲವರು ದಿನಕ್ಕೆ ಎರಡೆರಡು ಬಾರಿ ಸ್ನಾನ ಮಾಡ್ತಾರೆ. ಆದರೆ ಈ ಜನರು ಮಾತ್ರ ಸ್ನಾನ ಅಂದ್ರೆ ಸಾಕು, ಮಾರು ದೂರ ಓಡ್ತಾರೆರಂತೆ. ಹೌದು, ಇಲ್ಲಿನ ಜನರ ಜೀವನಶೈಲಿ ಮಾತ್ರ ಇವತ್ತಿಗೂ ಬದಲಾಗಿಲ್ಲ. ಇಂದಿಗೂ ತಮ್ಮ ಹಿಂದಿನ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುವ ಇಲ್ಲಿನ ಮಹಿಳೆಯರು ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವುದು. ಹಾಗಾದ್ರೆ ಇಂತಹ ವಿಚಿತ್ರ ಜನರು ಇರುವುದು ಎಲ್ಲಿ? ದೇಹದ ಸ್ವಚ್ಛತೆ ಹೇಗೆ ಮಾಡ್ತಾರೆ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಜನರು ಮದ್ವೆ ದಿನ ಮಾತ್ರ ಸ್ನಾನ ಮಾಡ್ತಾರೆ, ಆದ್ರೂ ದೇಹದ ಸ್ವಚ್ಛತೆ ಕಡೆಗೆ ಗಮನ ಕೊಡ್ತಾರೆ, ಹೇಗೆ ಅಂತೀರಾ?
ಹಿಂಬಾ ಬುಡಕಟ್ಟು ಜನಾಂಗದ ವಿಶಿಷ್ಟ ಆಚರಣೆ
Image Credit source: Jami Tarris/Stone/Getty Images

Updated on: Jun 23, 2025 | 5:22 PM

ಸ್ನಾನ (bath) ದೇಹವನ್ನು ಮಾತ್ರ ಶುಚಿಗೊಳಿಸುವುದು ಮಾತ್ರವಲ್ಲ ಮನಸ್ಸನ್ನು ಹಗುರಾಗಿಸುತ್ತದೆ. ಆಯಾಯ ದೇಶದ ಜನರು ಬೆಳಗ್ಗೆ ಹಾಗೂ ಸಂಜೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ನಾನ ಮಾಡುತ್ತಾರೆ. ಆದರೆ ಒಂದೆರಡು ದಿನ ಸ್ನಾನ ಮಾಡದೇ ಇದ್ರೆ ಹೇಗೋ ಇರಬಹುದು. ಸ್ನಾನ ಮಾಡದೇನೆ ಇದ್ರೆ ಹೇಗೆ ಆಗ್ಬಹುದು, ಇದನ್ನು ಊಹಿಸಲು ಕೂಡ ಅಸಾಧ್ಯ. ಆದರೆ ಈ ಬುಡಕಟ್ಟು ಜನಾಂಗದ (Tribal) ಮಹಿಳೆಯರು ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡ್ತಾರೆಯಂತೆ. ನಿಮಗೆ ಇದನ್ನು ನಂಬಲು ಕಷ್ಟವಾಗಬಹುದು, ಆದರೆ ಇದು ಸತ್ಯ. ಸ್ನಾನ ಮಾಡದೇ ಇದ್ರೂ ಇಲ್ಲಿನ ಮಹಿಳೆಯರು ದೇಹದ ಸ್ವಚ್ಛತೆಯನ್ನು (cleanliness) ಕಾಪಾಡಿಕೊಳ್ತಾರೆ.

ಈ ಬುಡಕಟ್ಟು ಜನಾಂಗದಲ್ಲಿ ಸ್ನಾನಕ್ಕಿದೆ ನಿಷೇಧ

ಈ ಬುಡಕಟ್ಟು ಜನಾಂಗದವರು ತಮ್ಮ ಹಿರಿಯರು ಪಾಲಿಸಿಕೊಂಡ ಬಂದ ಸಂಪ್ರದಾಯವನ್ನು ಇವತ್ತಿಗೂ ಕೂಡ ಅನುಸರಿಸಿಕೊಂಡು ಬರುತ್ತಿದ್ದಾರಂತೆ. ಅಂತಹ ಆಚರಣೆಗಳಲ್ಲಿ ಒಂದು ಸ್ನಾನ ಮಾಡದೇ ಇರುವುದು. ಪ್ರಪಂಚದಲ್ಲಿರುವ ಈ ಬುಡಕಟ್ಟು ಜನಾಂಗದಲ್ಲಿ ಮಹಿಳೆಯರು ಸ್ನಾನ ಮಾಡುವುದನ್ನೇ ನಿಷೇಧಿಸಲಾಗಿದೆ, ಹೌದು, ಈ ಬುಡಕಟ್ಟು ಜನಾಂಗದ ಹೆಸರು ಹಿಂಬಾ ಬುಡಕಟ್ಟು. ಆಫ್ರಿಕಾ ನಮೀಬಾ ದೇಶದ ಮರುಭೂಮಿಗಳಲ್ಲಿ ಈ ಬುಡಕಟ್ಟು ಜನಾಂಗದ ಜನರು ನೆಲೆಸಿದ್ದು, ಆಧುನಿಕತೆಯಿಂದ ಸಂಪೂರ್ಣ ದೂರ ಉಳಿದಿದ್ದಾರೆ.

ಇದನ್ನೂ ಓದಿ
ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳು, ಸೂಪರ್ ಮ್ಯಾನ್ ಆದ ಅಪ್ಪ
ಫುಡ್ ಡೆಲಿವರಿ ಬಾಯ್‌ಗೆ ಬರ್ತ್ಡೇ ಸರ್ಪ್ರೈಸ್ ನೀಡಿದ ಮನೆಮಂದಿ
ಶ್ವಾನದ ಮೇಲೆ ಕಾರು ಹತ್ತಿಸಿ, ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ವ್ಯಕ್ತಿ
ನಿಂತ ಮಳೆನೀರಲ್ಲಿ ಕುಣಿಯಲು ಹೋಗಿ ಮುಗ್ಗರಿಸಿ ಬಿದ್ದ ಯುವತಿ

ಈ ದಿನ ಮಾತ್ರ ಸ್ನಾನ ಮಾಡ್ತಾರೆ ಇಲ್ಲಿನ ಮಹಿಳೆಯರು

ನಮ್ಗೆಲ್ಲರಿಗೂ ಒಂದು ದಿನ ಸ್ನಾನ ಮಾಡದೇ ಇದ್ರೆ ಕಿರಿಕಿರಿ ಅನುಭವ ಆಗ್ತದೆ, ಕೆಲವರ ದೇಹದಿಂದ ಗಬ್ಬು ವಾಸನೆ ಬರಲು ಶುರುವಾಗುತ್ತದೆ, ಆದರೆ ಬುಡಕಟ್ಟು ಜನಾಂಗದ ಮಹಿಳೆಯರು ಬೇಸಿಗೆಯಿರಲಿ, ಚಳಿಗಾಲವಿರಲಿ, ಮಳೆಗಾಲವೇ ಇರಲಿ ಸ್ನಾನ ಮಾಡುವುದೇ ಇಲ್ಲ. ಅಷ್ಟೇ ಅಲ್ಲದೇ, ಈ ಮಹಿಳೆಯರು ಬಟ್ಟೆ ಕೂಡ ಒಗೆಯೋದಿಲ್ಲವಂತೆ. ಆದರೆ ಜೀವಮಾನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡೋದು, ಅದುವೇ ತಮ್ಮ ಮದುವೆ ದಿನವಂತೆ.

ಇದನ್ನೂ ಓದಿ : Video : ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ

ಸ್ನಾನ ಮಾಡದಿದ್ರೂ ಸ್ವಚ್ಛತೆಗೆ ಕಡೆಗೆ ಗಮನಹರಿಸ್ತಾರೆ ಈ ಮಹಿಳೆಯರು

ಮದುವೆ ದಿನ ಮಾತ್ರ ಸ್ನಾನ ಮಾಡಿದ್ರು ಕೂಡ ಇಲ್ಲಿನ ಮಹಿಳೆಯರು ಸ್ವಚ್ಛತೆಯ ಕಡೆಗೆ ಹೆಚ್ಚು ಗಮನಹರಿಸ್ತಾರೆ. ದೇಹದ ಸ್ವಚ್ಛತೆಗಾಗಿ ಗಿಡಮೂಲಿಕೆಯನ್ನು ಬಳಸ್ತಾರೆ. ಹೌದು ತಮ್ಮ ಸುತ್ತಮುತ್ತಲಿನಲ್ಲಿ ಸಿಗುವ ವಿಶೇಷ ಗಿಡಮೂಲಿಕೆಗಳನ್ನು ನೀರಿನಲ್ಲಿ ಕುದಿಸುತ್ತಾರೆ. ಅದರ ಹೊಗೆಯನ್ನು ಬಳಸಿ ತಮ್ಮ ದೇಹವನ್ನು ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಸೂರ್ಯನ ಬೆಳಕಿನಿಂದ ಚರ್ಮವನ್ನು ರಕ್ಷಿಸಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾದ ವಿಶೇಷ ಲೋಷನ್ ಬಳಸುತ್ತಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ