Viral : ದ್ವೇಷ ಬಿಟ್ಟು, ಭಾಷೆ ಕಲಿಯಿರಿ : ಎರಡು ವರ್ಷದಿಂದ ಬೆಂಗಳೂರಿನಲ್ಲಿ ವಾಸ, ಸಲೀಸಾಗಿ ಕನ್ನಡ ಮಾತನಾಡುತ್ತಿರುವ ಓಡಿಶಾದ ಪ್ಲಂಬರ್
ಬೇರೆ ರಾಜ್ಯ ಹಾಗೂ ಊರುಗಳಿಂದ ಬೆಂಗಳೂರಿಗೆ ಬರುವವರ ಸಂಖ್ಯೆಯೂ ಹೆಚ್ಚು. ಹೀಗೆ ಬಂದ ಜನರಲ್ಲಿ ಬಹುತೇಕರು ಕನ್ನಡ ಭಾಷೆಯನ್ನು ಕಲಿಯಲು ಹಿಂದೇಟು ಹಾಕುತ್ತಾರೆ. ಕಳೆದ ಕೆಲವು ದಿನಗಳಿಂದ ಭಾಷಾ ವಿಚಾರವಾಗಿ ಭಾರೀ ಗದ್ದಲಗಳು ಉಂಟಾಗಿತ್ತು. ಈ ಬಗ್ಗೆ ಕೆಲವೊಂದು ವಿಡಿಯೋ ಕೂಡ ವೈರಲ್ ಆಗಿತ್ತು, ಈ ಕಾರಣಕ್ಕೆ ಪರಭಾಷಿಕರು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು ಮಾಡಿರುವ ಸಕರಾತ್ಮಕ ಪೋಸ್ಟ್ ವೈರಲ್ ಆಗಿದೆ. ಓಡಿಶಾದಿಂದ ಮಾಯಾನಗರಿಗೆ ಕೆಲಸಕ್ಕೆಂದು ಬಂದ ಪ್ಲಂಬರ್‌ರೊಬ್ಬರು ಅದ್ಭುತವಾಗಿ ಕನ್ನಡ ಮಾತನಾಡುವ ಮೂಲಕ ಎಲ್ಲರ ಮನಸ್ಸು ಗೆದ್ದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಬೇರೆ ಊರು ಹಾಗೂ ರಾಜ್ಯಗಳಿಂದ ಉದ್ಯೋಗ ಅರಸಿ ಬಂದ ಜನರೇ ಹೆಚ್ಚು. ಕನಸುಗಳನ್ನು ಕಟ್ಟಿಕೊಂಡು ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದ ಜನರು ಕನ್ನಡ ಭಾಷೆಯನ್ನು ಕಲಿಯಲು ಮನಸ್ಸು ಮಾಡುವುದು ತೀರಾ ಕಡಿಮೆಯೇ. ಭಾಷೆ ಗೊತ್ತಿದ್ದರೂ ಮಾತನಾಡುವುದಿಲ್ಲ. ಹೀಗಾಗಿ ಕನ್ನಡ ಭಾಷೆ ಬೆಳೆಸಿ ಹಾಗೂ ಉಳಿಸಿ ಎನ್ನುವ ಕೂಗು ಕೇಳಿಬರುತ್ತಿರುತ್ತದೆ. ಭಾಷೆಯನ್ನು ಅವರೇ ಕಲಿಯಬೇಕು ಹೊರತು ಯಾರದೋ ಒತ್ತಾಯಕ್ಕೆ ಕಲಿಯಬಾರದು. ಬೇರೆ ರಾಜ್ಯದಿಂದ ಬಂದು ಕನ್ನಡ ಕಲಿತವರು ಅದೆಷ್ಟೋ ಜನ. ಇವರ ಪೈಕಿ ಒಡಿಶಾದಿಂದ (Odisha) ಬೆಂಗಳೂರಿಗೆ ಬಂದು ನೆಲೆಸಿರುವ ಪ್ಲಂಬರ್ ಕೂಡ ಒಬ್ಬರು. ಇದೀಗ ಇವರು ಪರಭಾಷಿಕರಿಗೆ ಮಾದರಿಯಾಗಿದ್ದಾರೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಹಂಚಿಕೊಂಡ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿದ್ದು, ಪರರಾಜ್ಯದಿಂದ ಇಲ್ಲಿಗೆ ಬಂದು ನೆಲೆಸಿದ್ದರೂ ಓಡಿಶಾದ ವ್ಯಕ್ತಿಯ ಕನ್ನಡ ಕಲಿಯುವ ಪ್ರಯತ್ನಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
@sridattaa ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾದ ಪೋಸ್ಟ್‌ನಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು , ಓಡಿಶಾದಿಂದ ಬೆಂಗಳೂರಿಗೆ ಬಂದ ಪ್ಲಂಬರ್‌ರೊಬ್ಬರ ಜೊತೆಗಿನ ಸಂಭಾಷಣೆಯ ಕುರಿತು ಉಲ್ಲೇಖಿಸಿದ್ದಾರೆ. ಈ ಪ್ಲಂಬರ್ ಅರ್ಬನ್ ಕಂಪೆನಿ ಮೂಲಕ ಬೆಂಗಳೂರಿಗೆ ಬಂದಿದ್ದು, ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ನಿಧಾನವಾಗಿ ಕನ್ನಡ ಭಾಷೆಯನ್ನು ಕಲಿಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಬಂದು ವೃತ್ತಿಪರರಾಗಿ ಕೆಲಸ ಮಾಡುವುದನ್ನು ನಾನು ಗಮನಿಸಿದ್ದೇನೆ ಎಂದು ಬರೆದುಕೊಂಡಿರುವುದನ್ನು ಕಾಣಬಹುದು.
ಇದನ್ನೂ ಓದಿ : Video : ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Today the plumber whom I booked from Urban company said working in Bengaluru from past two years, Already spoke decent beginner Kannada, and said still learning. He was from Odisha, – was on time and behaved professionally. This I have observed seen in workers from that state.
— Śrīdatta (@sridatta_a) June 21, 2025
ಈ ಪೋಸ್ಟ್ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ನಿಮ್ಮ ಮಾತನ್ನು ಒಪ್ಪುತ್ತೇನೆ. ನಾವು ಒಂದು ರೆಸಾರ್ಟ್‌ಗೆ ಹೋಗಿದ್ದಾಗ ಅಲ್ಲಿದ್ದ ಓಡಿಶಾದ ಹುಡುಗರು ನಮ್ಮೊಂದಿಗೆ ಕನ್ನಡದಲ್ಲಿ ಮಾತನಾಡಿದ್ದರು. ಆ ಹುಡುಗರು ಎರಡು ವರ್ಷಗಳಿಂದ ಇಲ್ಲಿ ವಾಸವಿದ್ದಾರಂತೆ ಎಂದಿದ್ದಾರೆ. ಇನ್ನೊಬ್ಬರು, ಇದು ಕೇವಲ ಹಿಂದಿ ಭಾಷಿಗರ ಸಮಸ್ಯೆ, ಇತರ ರಾಜ್ಯಗಳದ್ದು ಅಲ್ಲವೇ ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇದು ನನ್ನ ವೈಯುಕ್ತಿಕ ಅನುಭವ, ಓಡಿಶಾದ ಜನರು ನಿಜಕ್ಕೂ ಸಭ್ಯರು, ವೃತ್ತಿಪರರು, ಬುದ್ದಿವಂತರು, ಅವರು ಅನಗತ್ಯ ಸಂಘರ್ಷಗಳಲ್ಲಿ ಆಸಕ್ತಿ ಹೊಂದಿಲ್ಲ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 am, Tue, 24 June 25








