ಆಫೀಸ್ನಿಂದ ಸಂಜೆ 6 ಗಂಟೆ ಬಿಟ್ಟು, ಮನೆಗೆ ತಲುಪಿದ್ದು ರಾತ್ರಿ 9.15ಕ್ಕೆ, ಇದಕ್ಕೆಲ್ಲ ಬೆಂಗಳೂರು ಟ್ರಾಫಿಕ್ ಕಾರಣ
ಬೆಂಗಳೂರು ಟ್ರಾಫಿಕ್ಗೆ ಪ್ರಸಿದ್ಧಿಯಾಗುತ್ತಿದೆ. ಈ ಸಮಸ್ಯೆಯನ್ನು ಪ್ರತಿದಿನ ಇಲ್ಲಿ ಜನ ಅಭವಿಸುತ್ತಿರುವುದು ಸಹಜ, ಆದರೆ ಈ ಸಮಸ್ಯೆಗೆ ಪರಿಹಾರ ಇಲ್ಲವೇ ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಹೌದು ರೆಡ್ಡಿಟ್‌ನಲ್ಲಿ ಟ್ರಾಫಿಕ್ನಿಂದ ತಾನು ಅನುಭವಿಸಿದ ಸಮಸ್ಯೆಯನ್ನು ವಿವರಿಸಿದ್ದಾರೆ. ಕಚೇರಿಯಿಂದ ಮನೆಗೆ ಇರುವುದು ಕೇವಲ 12 ಕಿಲೋ ಮೀಟರ್, ಆದರೆ ಈ ಟ್ರಾಫಿಕ್ನಿಂದ 6.00 ಗಂಟೆ ಆಫೀಸ್ ಬಿಟ್ಟ ಈ ವ್ಯಕ್ತಿ, ಮನೆಗೆ ತಲುಪಿದ್ದು 9.15ಕ್ಕೆ. ಈ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾರೆ ನೋಡಿ.

ಟ್ರಾಫಿಕ್ ಟ್ರಾಫಿಕ್… ಬೆಂಗಳೂರು ಟ್ರಾಫಿಕ್ ಬಹಳ ದೊಡ್ಡ ಸಮಸ್ಯೆಯಾಗಿದೆ. ಅದರೂ ಬೆಂಗಳೂರಿಗರು ಇದಕ್ಕೆ ಹೊಂದಿಕೊಳ್ಳಬೇಕು. ಇದು ಅನಿವಾರ್ಯ ಕೂಡ ಹೌದು. ಬೆಂಗಳೂರು ಟ್ರಾಫಿಕ್ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಅದೇ ರೀತಿ ಬೆಂಗಳೂರು ಟ್ರಾಫಿಕ್ನಿಂದ ತಾನು ಪಟ್ಟಪಾಡನ್ನು ಇಲ್ಲೊಬ್ಬ ವ್ಯಕ್ತಿ ವಿವರಿಸಿದ್ದಾರೆ. ರೆಡ್ಡಿಟ್ನ್ಲಲಿ @AverageGamer411 ಎಂಬ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಕುಖ್ಯಾತ ಸಮಸ್ಯೆಯೆಂದರೆ ಅದು ಟ್ರಾಫಿಕ್, ನನ್ನ ಮನೆಗೆ ಆಫೀಸ್ನಿಂದ ಇರುವುದು 12 ಕಿಲೋ ಮೀಟರ್ ದೂರ, ನಾನು ಆಫೀಸ್ನಿಂದ ಸಂಜೆ 6 ಗಂಟೆಗೆ ಬಿಟ್ಟಿದ್ದೇನೆ, ಆದರೆ ಮನೆಗೆ ಬಂದು ತಲುಪಿದ್ದು ರಾತ್ರಿ 9:15 ಕ್ಕೆ, ಕೇವಲ 12 ಕಿಲೋ ಮೀಟರ್ ದಾರಿಗೆ ನಾನು ಇಷ್ಟು ಸಮಯ ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ.
ಒಂದು ವೇಳೆ ಮಳೆ, ಪ್ರತಿಭಟನೆ, ಅಪಘಾತದಂತಹ ಘಟನೆ ಏನಾದರೂ ಆದ್ರೆ ಹೌದು ಟ್ರಾಫಿಕ್ ಆಗುವುದು ಸಹಜ, ಆದರೆ ಇದು ಯಾವುದು ಅವತ್ತು ನಡೆದಿಲ್ಲ. ಈ ಕಾರಣಕ್ಕೆ ಬೆಂಗಳೂರು ಅಂದ್ರೆ ಬೆಂಗಳೂರು ಅಷ್ಟೇ ಎಂದು ಹೇಳುವುದು ಎಂದು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಎಲ್ಲ ಕಡೆ ವೈರಲ್ ಆಗುತ್ತಿದೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 800 ಕ್ಕೂ ಹೆಚ್ಚು ಲೈಕ್, ಕಮೆಂಟ್ಗಳು ಬಂದಿದೆ. ಈ ಬಗ್ಗೆ ಮುಂದುವರಿಸಿದ ಈ ವ್ಯಕ್ತಿ, ನಾನು ಬಸ್‌ನಲ್ಲಿ ಹೋಗಬೇಕಿತ್ತು. ಆದರೆ ಅವತ್ತು ಯಾಕೋ ಗೊತ್ತಿಲ್ಲ ನಮ್ಮ ರೂಟ್ಗೆ ಹೋಗಬೇಕಿದ್ದ ಬಸ್ ಬರಲೇ ಇಲ್ಲ. ಕಾದು ಕಾದು ಸಾಕಾಯಿತು, ಕೊನೆಗೂ ಒಂದು ಬಸ್ ಬಂತು. ಆದರೆ ಈ ಬಸ್‌ನಲ್ಲಿ ಮಧ್ಯೆದಲ್ಲೇ ಸಮಸ್ಯೆಯಾಗಿದೆ ಎಂದು ಹೇಳಿ ಇಳಿಸಿದ್ರು, ಕೊನೆಗೆ ಬೇರೆ ದಾರಿ ಇಲ್ಲವೆಂದು ನಮ್ಮ ಯಾತ್ರಾದಲ್ಲಿ ಆಟೋ ಬುಕ್ ಮಾಡಲು ಮುಂದಾದೇ, ಆದರೆ ಅದರಲ್ಲಿ ಆಟೋಗೆ 50 ರೂ. ಟಿಪ್ ನೀಡಬೇಕು. ಈ ಟಿಪ್ ಎಂಬ ವಿಚಾರ ತುಂಬಾ ತಮಾಷೆಯಾಗಿದೆ ಎಂದು ನನಗೆ ಅನಿಸುತ್ತದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
The city that breaks you one commute at a time byu/AverageGamer411 inBengaluru
ಇದನ್ನೂ ಓದಿ
ಇನ್ನು ಆಟೋದಲ್ಲಿ ಹೋಗುವುದು ನನಗೆ ಅನಿವಾರ್ಯ, ಆಟೋ ಹತ್ತಿಕೊಂಡು ಮನೆಗೆ ಬಂದೇ, ಬಂದು ತಲುಪುವಾಗ 9.15 ಆಗಿದೆ. ಆದ್ರೆ ನನ್ನ ಪ್ರಶ್ನೆ ಈ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಇಲ್ವಾ? ಯಾಕೆ ಟ್ರಾಫಿಕ್ ಆಗುತ್ತಿದೆ. ದೇಶದ ನವೋದ್ಯಮ ರಾಜಧಾನಿ ಆಗಬೇಕಾದ ಬೆಂಗಳೂರಿನಲ್ಲಿ ಇಂತಹ ಘಟನೆಗಳು ನಡೆಯಲು ಕಾರಣ ಏನೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇನ್ನು ಆಫೀಸ್ಗೆ ಹೋಗುವಾಗ ಕೂಡ ಈ ಸಮ್ಯಸ್ಯೆಯನ್ನು ಎದುರಿಸುತ್ತೇವೆ. ಆಗ ಕಾರಿನಲ್ಲಿ ಅಥವಾ ಆಟೋದಲ್ಲಿ ಕೆಲಸ ಮಾಡುತ್ತಾ ಹೋಗುತ್ತೇವೆ. ಆದರೆ ಸಂಜೆ ಆಫೀಸ್ ಬಿಡುವಾಗ ಮಾತ್ರ ಟ್ರಾಫಿಕ್ ಯುದ್ಧಕ್ಕೆ ನಿಂತಿರುವ ರೀತಿ ಕಾಣುತ್ತದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನದಲ್ಲಿ ಐದು ಪ್ರಯಾಣಿಕರು ಅಸ್ವಸ್ಥ, ಊಟದಲ್ಲಿ ವಿಷದ ಶಂಕೆ
ಈ ಬಗ್ಗೆ ಅನೇಕರು ರೆಡ್ಡಿಟ್‌ನಲ್ಲಿ ಕಮೆಂಟ್ ಮಾಡಿದ್ದಾರೆ. ಟ್ರಾಫಿಕ್ ವಿಚಾರಕ್ಕೆ ಬಂದರೆ ಇದಕ್ಕೆಲ್ಲ ಸರ್ಕಾರವೇ ಕಾರಣ, ಬೈಕ್ ಟ್ಯಾಕ್ಸಿಗಳನ್ನು ಸಹ ರದ್ದು ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮತ್ತೊಬ್ಬ ಬಳಕೆದಾರ, ಈ ನಗರದ ದೊಡ್ಡ ಪ್ರಮಾದವೆಂದರೆ ಹೆಚ್ಚು ಜನದಟ್ಟಣೆ ಇರುವ ಸ್ಥಳಗಳಿಗೆ ಮೆಟ್ರೋ ಸಂಪರ್ಕವಿಲ್ಲ ಎಂದು ಹೇಳಿದ್ದಾರೆ. ಮೊದಲು ಸಂಚಾರ ಸಮಸ್ಯೆ ಮಾತ್ರ ಇತ್ತು. ಈಗ ಸಂಚಾರ ಮತ್ತು ಸಾರಿಗೆ ಸೌಲಭ್ಯವೂ ಇದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಇನ್ನೊಬ್ಬ ರಸ್ತೆಯ ಪರಿಸ್ಥಿತಿ ಶೋಚನೀಯವಾಗಿದೆ, ವಿಶೇಷವಾಗಿ ಬೆಳ್ಳಂದೂರು ಮತ್ತು ಮಾರತಹಳ್ಳಿ ಕಡೆಗೆ ಹೋಗುವ ಸರ್ವಿಸ್ ರಸ್ತೆಗಳಲ್ಲಿ ನರಕದಂತೆ ಆಗಿದೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Tue, 24 June 25