Viral : HMT ವಾಚ್‌ನಲ್ಲೂ ಕನ್ನಡದ ಕಂಪು, ಈ ವಾಚ್ ಹೇಗಿದೆ ನೋಡಿ
ಸಾಮಾನ್ಯವಾಗಿ ಕೈಗಡಿಯಾರ ಖರೀದಿಸುವಾಗ ಯಾವ ಕಂಪೆನಿಯದ್ದು, ಇದರ ಎಷ್ಟು ಬೆಲೆ ಎಂದು ನೋಡುತ್ತೀರಿ. ಆದರೆ ಈ ರೀತಿಯ ಆಕರ್ಷಕ ವಾಚ್ ನೀವು ನೋಡಿರಲು ಸಾಧ್ಯವೇ ಇಲ್ಲ. ವಿಭಿನ್ನ ಹಾಗೂ ಆಕರ್ಷಕವಾದ ಕೈಗಡಿಯಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ವಾಚ್ ಕನ್ನಡಿಗರನ್ನು ಆಕರ್ಷಿಸಲು ಮುಖ್ಯ ಕಾರಣವೇ ಕನ್ನಡ ಅಂಕಿಗಳು ಹಾಗೂ ಕರ್ನಾಟಕದ ಲಾಂಛನ ಗಂಡಭೇರುಂಡ . ಹೌದು, ಕನ್ನಡಿಗರೊಬ್ಬರು ಕೈಗಡಿಯಾರದ ಫೋಟೋವನ್ನು ಶೇರ್ ಮಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕೆಲವರಿಗೆ ವಾಚ್ (Watch) ಖರೀದಿಸುವುದೆಂದರೆ ಅದೇನೋ ಕ್ರೇಜ್. ಹೀಗಾಗಿ ದುಬಾರಿ ಬೆಲೆಯ ಹಾಗೂ ಯಾರ ಬಳಿಯೂ ಇರದ ವಾಚ್ ಕಲೆಕ್ಷನ್ ಇಟ್ಟುಕೊಂಡಿರುತ್ತಾರೆ. ಯಾವುದೇ ಕೈಗಡಿಯಾರವಿರಲಿ, ಅದರಲ್ಲಿ ಕಂಪೆನಿಯ ಹೆಸರು ಹಾಗೂ 1,2, 3 ಹೀಗೆ ಹನ್ನೆರಡರವರೆಗೂ ಸಂಖ್ಯೆಗಳನ್ನು ಬರೆದಿರುವುದನ್ನು ನೀವು ನೋಡಿರುತ್ತೀರಿ. ಆದರೆ ಹೆಚ್‌ಎಂಟಿ ಕಂಪೆನಿಯ (HMT Company) ಈ ವಾಚ್ ಮಾತ್ರ ವಿಭಿನ್ನತೆಯಿಂದಲೇ ಕನ್ನಡಿಗರ ಗಮನ ಸೆಳೆದಿದೆ. ಹೌದು ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವಾಗಿರುವ ಗಂಡಭೇರುಂಡ ಹಾಗೂ ಕನ್ನಡ ಅಂಕಿಗಳಿರುವುದೇ ಈ ಕೈಗಡಿಯಾರದ ವಿಶೇಷತೆಯಾಗಿದ್ದು, ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಕೈಗಡಿಯಾರದ ಪೋಟೋ ಕಂಡ ನೆಟ್ಟಿಗರು ಇದು ನಮ್ಮ ಕನ್ನಡದ ಗುರುತಿನ ಪ್ರತೀಕ ಎಂದು ಕಾಮೆಂಟ್ ಮಾಡಿದ್ದಾರೆ.
@Ellarakannada ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ನಿಮ್ಮ ಮನಸ್ಸನ್ನು “ವಸಾಹತುಶಾಹಿಯಿಂದ ಮುಕ್ತಗೊಳಿಸುವುದು ಹಾಗೂ ಬ್ರಿಟಿಷ್ ಯುಗದ ಹ್ಯಾಂಗೊವರ್‌ನಿಂದ ಹೊರಬರುವುದು ಹೇಗೆ ಎಂದು ತಿಳಿಯಲು ನೀವು ಬಯಸಿದರೆ, ಒಬ್ಬ ಕನ್ನಡಿಗರನ್ನು ಹೇಗೆ ಎಂದು ಕೇಳಿ. ಇವು ಕನ್ನಡ ಅಂಕಿಗಳು. ಕನ್ನಡಿಗರಿಗೆ ಇಂಗ್ಲಿಷ್ ಅಗತ್ಯವಿಲ್ಲ, ಇದರಲ್ಲಿ ಕನ್ನಡಿಗರ ಲಾಂಛನವಾದ ‘ಗಂಡಭೇರುಂಡ’ ಹೆಚ್ಚು ಹತ್ತಿರವಾಗಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ವಿಶೇಷವಾದ ಕೈಗಡಿಯಾರದಲ್ಲಿ ಕನ್ನಡ ಅಂಕಿಅಂಶಗಳು ಹಾಗೂ ಗಂಡಬೇರುಂಡ ಲಾಂಛನವಿರುವುದನ್ನು ಗಮನಿಸಬಹುದು.
ಇದನ್ನೂ ಓದಿ : Video: ಪೂಲ್ ಪಾರ್ಟಿ ವೇಳೆ ಸ್ನೇಹಿತರ ಮುಂದೆಯೇ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟ ಯುವಕ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
If you want to know how to “Decolonize” your mind and come out of British era hangover,
Ask a Kannadiga how.
These are Kannada numerals.
No English is required for Kannadigas !
Along with it, the emblem of Kannadigas, ‘Gandabherunda’ makes it more ethnic.#Decolonization pic.twitter.com/h55rA1e5u9
— Ethnic Kannadiga (@Ellarakannada) June 22, 2025
ಈ ಪೋಸ್ಟ್ ಏಳು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು, ಈ ವಿಶೇಷವಾದ ಕೈಗಡಿಯಾರವು ಎಲ್ಲಿ ಸಿಗುತ್ತದೆ ಎಂದು ಕೇಳಿದ್ದಾರೆ. ಇನ್ನೊಬ್ಬರು, HMT ಕೈಗಡಿಯಾರಗಳು ಮತ್ತೆ ಬೆಳಕಿಗೆ ಬಂದಿವೆ ಎಂದಿದ್ದಾರೆ. ಮತ್ತೊಬ್ಬರು, ಕನ್ನಡ ಅಂಕಿಗಳು ನೋಡಲು ತುಂಬಾನೇ ಚೆನ್ನಾಗಿವೆ. ಕನ್ನಡ ಅಂಕಿಗಳಿರುವ ಡಿಜಿಟಲ್ ಗಡಿಯಾರ ಸಿಗಲಿ ಎಂದು ಆಶಿಸುತ್ತೇನೆ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








