ದೇಶಾದ್ಯಂತ ಪ್ರತೀ ವರ್ಷ ರಂಗುರಂಗಿನ ಹಬ್ಬ ಹೋಳಿಯನ್ನು ಆಚರಿಸಲಾಗುತ್ತದೆ. ಆದರೀಗ ಕೊವಿಡ್ ಸೋಂಕು ಎಲ್ಲೆಡೆ ತನ್ನ ಆರ್ಭಟವನ್ನು ತೋರುತ್ತಿದ್ದು, ಈ ವರ್ಷದ ಹೋಳಿ ಹಬ್ಬವನ್ನು ಆಚರಿಸಲು ತಡೆಗೋಡೆಯಾಗಿ ನಿಂತಿದೆ. ಬಣ್ಣವನ್ನು ಎರಚಿಕೊಳ್ಳುತ್ತಾ ಸಂಭ್ರಮದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿಲ್ಲ ಎಂಬುದು ಎಲ್ಲರಿಗೆ ಬೇಸರ ತಂದಿದೆ. ಮನೆಯಲ್ಲಿ ಕೂತಲ್ಲಿಯೇ ತಂತ್ರಜ್ಞಾನವನ್ನು ಬಳಸಿಕೊಂಡು ಕಲರ್ಫುಲ್ ಸ್ಟಿಕರ್ಸ್ಗಳೊಂದಿಗೆ ಹೋಳಿ ಆಚರಿಸಲು ವಾಟ್ಸ್ಆ್ಯಪ್ ಸುರ್ಣಾವಕಾಶ. ಹಾಗಿದ್ದಾಗ ವಾಟ್ಸ್ಆ್ಯಪ್ ಮೂಲಕ ಹೋಳಿ ಸ್ಟಿಕರ್ಸ್ ಕಳುಹಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ.
ಈ ವರ್ಷದ ಹೋಳಿ ಉಡುಗೊರೆಯಾಗಿ ನೆಟ್ಟಿಗರಿಗೆ ವಿಶೇಷ ಸ್ಟಿಕರ್ಸ್ಗಳು ಲಭ್ಯವಾಗಿದೆ. ಆ್ಯಂಡ್ರಾಯ್ಡ್ ಮೊಬೈಲ್ನಲ್ಲಿ ವಾಟ್ಸ್ಆ್ಯಪ್ ಮೂಲಕ ನಿಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಸ್ಟಿಕರ್ಸ್ ಕಳುಹಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ.
ವಾಟ್ಸ್ಆ್ಯಪ್ನಲ್ಲಿ ಹೋಳಿ ಸ್ಟಿಕ್ಕರ್ಸ್ ಕಳುಹಿಸುವುದು ಹೇಗೆ?
* ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ
* ಹೋಳಿ ಸ್ಟಿಕರ್ಸ್ ಅಥವಾ ಹೋಳಿ ವಾಟ್ಸ್ಆ್ಯಪ್ ಸ್ಟಿಕರ್ಸ್ ಎಂದು ಹುಡುಕಿ
* ಅಲ್ಲಿ ಹಲವಾರು ಅಪ್ಲಿಕೇಶನ್ಗಳ ಆಯ್ಕೆ ನಿಮ್ಮದಾಗುತ್ತದೆ
* ನಿಮಗಿಷ್ಟವಾದ ಹೋಳಿ ಅಪ್ಲಿಕೇಶನ್ಅನ್ನು ಡೌನ್ಲೋಡ್ ಮಾಡಿಕೊಳ್ಳಿ
* ಡೌನ್ಲೋಡ್ ಮಾಡಿದ ಅಪ್ಲಿಕೇಶನ್ಅನ್ನು ತೆರೆಯಿರಿ. ನಿಮಗಿಷ್ಟವಾದ ಸ್ಟಿಕರ್ಸ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ
* ನಂತರ ನಿಮ್ಮ ಮೊಬೈಲ್ ಮೂಲಕ ವಾಟ್ಸ್ಆ್ಯಪ್ ಅಪ್ಲಿಕೇಶನ್ ತೆರೆಯಿರಿ
* ಹೋಳಿ ಹಬ್ಬಕ್ಕೆ ಶುಭಕೋರಲು ಇಚ್ಛಿಸುವ ಸ್ನೇಹಿತರ ಪೇಜ್ ಒಂದನ್ನು ತೆರೆಯಿರಿ
* ಇಮೋಜಿ ಆಯ್ಕೆಯನ್ನು ಒತ್ತಿರಿ. ಅಲ್ಲಿ ನಿಮಗೆ ಸ್ಟಿಕರ್ಸ್ ಆಯ್ಕೆಗಳು ದೊರೆಯುತ್ತವೆ
* ಸ್ಟಿಕರ್ಸ್ನಲ್ಲಿ ನೀವು ಡೌನ್ಲೋಡ್ ಮಾಡಿಕೊಂಡ ಸ್ಟಿಕರ್ಸ್ಗಳು ಲಭ್ಯವಿರುತ್ತದೆ
ಈ ಮೂಲಕ ನಿಮಗೆ ಇಷ್ಟವಾದ ಸ್ಟಿಕರ್ಸ್ಗಳನ್ನು ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಕಳುಹಿಸುವ ಮೂಲಕ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಿ. ಕೊವಿಡ್ ಕಾರಣದಿಂದ ನಿಮಗೆ ಹಬ್ಬವನ್ನು ಆಚರಿಸಲು ಸಾಧ್ಯವಾಗದೇ ಇರಬಹುದು. ಹೀಗಿದ್ದಾಗ ನಿರಾಸೆಗೊಳ್ಳದೇ ಸಂದೇಶದ ಮೂಲಕ ವಿಶೇಷವಾದ ಹೋಳಿ ಆಚರಣೆಯ ಕಲರ್ಫುಲ್ ಸ್ಟಿಕರ್ಸ್ ಕಳುಹಿಸುವ ಮೂಲಕ ಹೋಳಿ ಹಬ್ಬವನ್ನು ಆಚರಿಸಿ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲೂ ಹೋಳಿ ಮೆರಗು.. ಹಬ್ಬದ ಆಚರಣೆಗೆ ಫೇಸ್ಬುಕ್ನಿಂದ ವಿಶೇಷ ಸ್ಟಿಕ್ಕರ್ಸ್ ಕೊಡುಗೆ
Published On - 1:07 pm, Sun, 28 March 21