Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾಜಿಕ ಜಾಲತಾಣದಲ್ಲೂ ಹೋಳಿ ಮೆರಗು.. ಹಬ್ಬದ ಆಚರಣೆಗೆ ಫೇಸ್​ಬುಕ್​ನಿಂದ ವಿಶೇಷ ಸ್ಟಿಕರ್ಸ್​ ಕೊಡುಗೆ

ಹೋಳಿ ಆಚರಣೆಗೆಂದು ಫೇಸ್​ಬುಕ್​ ವಿಶೇಷ ಸ್ಟಿಕರ್ಸ್​​ಗಳನ್ನು ತನ್ನ ಬಳಕೆದಾರರಿಗಾಗಿ ನೀಡಿದೆ. ಹಾಗಾದರೆ ಸ್ಟಿಕರ್ಸ್​​ಗಳನ್ನು ಡೌನ್​ಲೋಡ್​ ಮಾಡಿಕೊಳ್ಳುವುದು ಹೇಗೆ ಎಂಬುದರ ವಿವರ ಇಲ್ಲಿದೆ.

ಸಾಮಾಜಿಕ ಜಾಲತಾಣದಲ್ಲೂ ಹೋಳಿ ಮೆರಗು.. ಹಬ್ಬದ ಆಚರಣೆಗೆ ಫೇಸ್​ಬುಕ್​ನಿಂದ ವಿಶೇಷ ಸ್ಟಿಕರ್ಸ್​ ಕೊಡುಗೆ
ಸಾಂದರ್ಭಿಕ ಚಿತ್ರ (ಕೃಪೆ: ​ ಫೇಸ್​ಬುಕ್)
Follow us
shruti hegde
|

Updated on:Mar 28, 2021 | 1:44 PM

ಬೆಂಗಳೂರು: ಇಂದು ಮಾರ್ಚ್ 28 ಹೋಳಿ ಹಬ್ಬ. ಎಲ್ಲೆಡೆ ರಂಗುರಂಗಿನ ಬಣ್ಣದ ಮೆರುಗು. ಮನೆಯಂಗಳವೆಲ್ಲ ಕಲರ್​ಫುಲ್​ ಬಣ್ಣಗಳಿಂದ ಕಂಗೊಳಿಸುತ್ತಿರುತ್ತದೆ. ಮಕ್ಕಳೆಲ್ಲ ಮೋಜು ಮಸ್ತಿಯಿಂದ ವಿವಿಧ ಬಣ್ಣಗಳನ್ನು ಎರಚಿಕೊಳ್ಳುತ್ತಾ ಖುಷಿ ಪಡುವ ದಿನವಿದು. ಜೊತೆ ಜೊತೆಯೇ ಸೋಷಿಯಲ್​ ಮೀಡಿಯಾ ಕೂಡಾ ಬಣ್ಣದಿಂದ ಕಂಗೊಳಿಸುತ್ತಿದೆ. ಫೇಸ್​ಬುಕ್​ ತನ್ನ ಬಳಕೆದಾರರಿಗಾಗಿ ಹೋಳಿ ಆಚರಣೆಗೆಂದು ವಿಶೇಷ ಸ್ಟಿಕರ್ಸ್​​ಗಳನ್ನು ಬಿಡುಗಡೆ ಮಾಡಿದೆ. ಫೇಸ್​ಬುಕ್​ನಲ್ಲಿ ಹಬ್ಬದ ಮೆರುಗು ಹೆಚ್ಚಿಸಲು ಬಳಕೆದಾರರಿಗೆ ಅನೇಕ ಸ್ಟಿಕರ್ಸ್​​ಗಳು ಲಭ್ಯವಿದೆ.

ಹೋಳಿ ಕುರಿತಾಗಿ ಇಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಲ್ಲಿ 6.6 ಮಿಲಿಯನ್ ಪೋಸ್ಟ್​  ಹಾಗೂ  ಕಮೆಂಟ್​ಗಳನ್ನು ಮಾಡಲಾಗಿದೆ.  ಹೋಳಿ ವಿಶೇಷವಾಗಿ ತಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಶುಭಾಶಯಗಳನ್ನು ವರ್ಣರಂಜಿತವಾಗಿ ಹಾಗೂ ಆಕರ್ಷಕವಾಗಿ ತಿಳಿಸಲು ಫೇಸ್​ಬುಕ್​ ವಿವಿಧ ತೆರನಾದ ಸ್ಟಿಕರ್ಸ್​​ಗಳನ್ನು ಬಳಕೆದಾರರಿಗಾಗಿ ಒದಗಿಸಿದೆ. ಫೇಸ್​ಬುಕ್​ನಲ್ಲಿ ವಿಶೇಷ ಸ್ಟಿಕರ್ಸ್​​ಗಳನ್ನು ಕಳುಹಿಸುವ ಮೂಲಕ  ಹೋಳಿ ಆಚರಣೆ ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚು ರಂಗಾಗಿದೆ.

ಈಗಾಗಲೇ ಫೇಸ್​ಬುಕ್​ ಅಪ್ಲಿಕೇಶನ್​ನಲ್ಲಿ ಕಮೆಂಟ್​ ಬರೆಯುವ ಜಾಗದಲ್ಲಿ, ವಿವಿಧ ಸ್ಟಿಕರ್ಸ್​​ ಆಯ್ಕೆ ಮಾಡುವಾಗಲೇ  ಹೋಳಿ ಆಚರಣೆಯ ವಿಶೇಷ ಸ್ಟಿಕರ್ಸ್​​ಗಳು ಬಳಕೆದಾರರಿಗೆ ಸಿಗುತ್ತಿದೆ. ಸ್ಟಿಕರ್ಸ್​​ಗಳು ಸಿಗುತ್ತಿಲ್ಲ ಎಂದಾದರೆ ಮತ್ತೊಮ್ಮೆ ಫೇಸ್​ಬುಕ್​ನ ಆ್ಯಪ್​ನ ನೂತನ ಆವೃತ್ತಿಯನ್ನು ಡೌನ್​ಲೋಡ್ ಮಾಡಿಕೊಳ್ಳಿ.

ಫೇಸ್​ಬುಕ್ ಖಾತೆಯಲ್ಲಿ ವಿಶೇಷ ಹೋಳಿ ಆಚರಣೆಯ ಸ್ಟಿಕರ್ಸ್​​ಗಳು ಎಲ್ಲಿ ಸಿಗುತ್ತವೆ? * ಮೊದಲಿಗೆ ಫೇಸ್​ಬುಕ್​ ಲಾಗಿನ್​ ಆಗಿ * ಕಮೆಂಟ್​ ಮಾಡುವ ಟ್ಯಾಬ್​ ಒತ್ತಿರಿ * ನಗುವಿನ ಇಮೋಜಿಯನ್ನು ಕಾಣಬಹುದು * ನಗುವಿನ ಚಿತ್ರದ ವಿವಿಧ ಇಮೋಜಿಗಳನ್ನು ಡೌನ್​ಲೋಡ್​ ಮಾಡುವ ಆಯ್ಕೆಗಳು ಕಾಣಸಿಗುತ್ತದೆ * ಅಲ್ಲಿ ವಿಶೇಷ ಸ್ಟಿಕರ್ಸ್​​ಗಳನ್ನು ಡೌನ್​ಲೋಡ್​ ಮಾಡಬಹುದು * ಇದೀಗ ಹೋಳಿ ಆಚರಣೆಗೆ ವಿಶೇಷ ಸ್ಟಿಕರ್ಸ್​​ಗಳು ನಿಮ್ಮದಾಗಿವೆ * ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಕಲರ್​ಫುಲ್​ ಸ್ಟಿಕರ್ಸ್​​ಗಳನ್ನು ಕಳುಹಿಸುವ ಮೂಲಕ ಹೋಳಿಯ ವಿಶೇಷ ಸಂಭ್ರಮಾಚರಣೆ ನಿಮ್ಮದಾಗಿರಲಿ

ಇದನ್ನೂ ಓದಿ: ರಂಗಿನಾಟ ಹೋಳಿ ಹುಣ್ಣಿಮೆಯ ಮಹತ್ವ ವೇನು? ಕಾಮದೇವನನ್ನು ದಹಿಸೋದೇಕೆ?

ಹೋಳಿ ಸಂಭ್ರಮಕ್ಕೆ ಕೊರೊನಾ ಅಡ್ಡಿ.. ಮನೆ ಮನೆಗಳಿಗೆ ತೆರಳಿ ಸುಗ್ಗಿ ಕುಣಿತ ಪ್ರದರ್ಶನ

Published On - 12:25 pm, Sun, 28 March 21

ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ