ಉನ್ನಾವೋ: ಉತ್ತರ ಪ್ರದೇಶದ (Uttar Pradesh) ಉನ್ನಾವೋ (Unnao) ಜಿಲ್ಲೆಯಿಂದ ವರದಿಯಾಗಿರುವ ವಿಚಿತ್ರ ಘಟನೆಯೊಂದರಲ್ಲಿ (bizarre incident) ವ್ಯಕ್ತಿಯೊಬ್ಬ ತನ್ನ ಪತ್ನಿಗೆ (wife) ಕಚ್ಚಿದ್ದ ಹೆಬ್ಬಾವನ್ನು (snake bite) ಗೋಣಿಚೀಲದಲ್ಲಿ ಹೊತ್ತುಕೊಂಡು ಜಿಲ್ಲಾಸ್ಪತ್ರೆಗೆ ಬಂದಿದ್ದಾನೆ. ವ್ಯಕ್ತಿಯ (husband) ಈ ಕೃತ್ಯವು ಆಸ್ಪತ್ರೆಯ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದೆ. ಟೈಮ್ಸ್ ಆಫ್ ಇಂಡಿಯಾ (TOI) ವರದಿ ಪ್ರಕಾರ ವ್ಯಕ್ತಿಯನ್ನು ಸಫಿಪುರದ ಉಮ್ಮರ್ ಅತ್ವಾ ಗ್ರಾಮದ ನರೇಂದ್ರ ಎಂದು ಗುರುತಿಸಲಾಗಿದೆ. ಅವರ ಪತ್ನಿ ಕುಸುಮಾ ಅವರು ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಹೆಬ್ಬಾವೊಂದು ಆಕೆಯನ್ನು ಕಚ್ಚಿದೆ. ನಂತರ ಆಕೆ ಕಿರುಚಿಕೊಂಡು ಪ್ರಜ್ಞಾಹೀನಳಾಗಿದ್ದಳು. ಕೂಡಲೇ ಮಹಿಳೆಯನ್ನು ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಯಿತು.
ಈ ಅಹಿತಕರ ಘಟನೆಯ ಬಗ್ಗೆ ಆಕೆಯ ಪತಿಗೆ ತಿಳಿಸಿದಾಗ, ಅವನು ತನ್ನ ಹೆಂಡತಿಯನ್ನು ನೋಡಲು ಆಸ್ಪತ್ರೆಗೆ ಬಂದಿಲ್ಲ. ಬದಲಾಗಿ ಮನೆಗೆ ತೆರಳಿ ಹಾವನ್ನು ಹಿಡಿದು ಆಸ್ಪತ್ರೆಗೆ ಸಾಗಿಸಿದ್ದಾನೆ! ತನ್ನ ಪತ್ನಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ತುರ್ತು ವೈದ್ಯಾಧಿಕಾರಿ ಡಾ. ತುಷಾರ್ ಚೌರಾಸಿಯಾ ಅವರನ್ನು ಭೇಟಿ ಮಾಡಿ, ಅವರ ಎದುರಿಗೆ ತನ್ನ ಪತ್ನಿಯನ್ನು ಕಚ್ಚಿದ ಹಾವನ್ನು ಗೋಣಿಚೀಲದಿಂದ ಹೊರತೆಗೆದು ತೋರಿಸಿದ್ದಾನೆ. ಇದರಿಂದ ಎಮರ್ಜೆನ್ಸಿ ವಾರ್ಡ್‌ನಲ್ಲಿದ್ದವರೆಲ್ಲಾ ಗಾಬರಿಗೆ ಬಿದ್ದರು. ಯಾವ ಜಾತಿಯ ಹಾವು ಕಚ್ಚಿದೆ ಎಂಬುದನ್ನು ವೈದ್ಯರಿಗೆ ತೋರಿಸಿದರೆ, ಅದರಿಂದ ಆಕೆಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಸಹಾಯಕವಾಗುತ್ತದೆ ಎಂದು ಭಾವಿಸಿ, ಹಾವನ್ನು ಆಸ್ಪತ್ರೆಗೆ ತಂದಿರುವುದಾಗಿ ಮುಗ್ಧನಾಗಿ ಪತಿರಾಯ ಹೇಳಿದ್ದಾನೆ.
ಪ್ರಥಮ ಚಿಕಿತ್ಸೆ ಮತ್ತು ಆಂಟಿವೆನಮ್ ಡೋಸ್ ನೀಡಿ ನಂತರ, ಕುಸುಮಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲೇ ದಾಖಲಿಕೊಳ್ಳಲಾಗಿದೆ. ಮಹಿಳೆ ಅಪಾಯದಿಂದ ಪಾರಾಗಿದ್ದಾಳೆ ಎಂದು ಜಿಲ್ಲಾ ಆಸ್ಪತ್ರೆ ವೈದ್ಯ ಶ್ರೀವಾಸ್ತವ ತಿಳಿಸಿದ್ದಾರೆ. ಈ ಮಧ್ಯೆ ಗಂಡ ನರೇಂದ್ರ ತಾನು ಆಸ್ಪತ್ರೆಗೆ ತಂದಿದ್ದ ಹೆಬ್ಬಾವನ್ನು ಕಾಡಿಗೆ ಬಿಟ್ಟುಬಂದಿದ್ದಾರೆ!
ಇದನ್ನೂ ಓದಿ: ಮದುವೆಯಂದು ನೆಂಟರಿಷ್ಟರ ಎದುರೇ ವೇದಿಕೆ ಮೇಲೆ ವಧುವಿಗೆ ಕಪಾಳಮೋಕ್ಷ ಮಾಡಿದ ವರ
ಉತ್ತರ ಪ್ರದೇಶದಲ್ಲಿ ಇಂತಹ ಘಟನೆ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಇದೇ ರೀತಿಯ ಘಟನೆಯಲ್ಲಿ ವ್ಯಕ್ತಿಯೊಬ್ಬ ಹಾವನ್ನು ಸೆರೆಹಿಡಿದು, ತನ್ನ ಹೆಂಡತಿಯೊಂದಿಗೆ ಅದನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದ. ನಂತರ ವೈದ್ಯರು ತಮ್ಮ ಪತ್ನಿಗೆ ಚಿಕಿತ್ಸೆ ನೀಡಿದ ಬಳಿಕ ಆ ವ್ಯಕ್ತಿ ಹಾವನ್ನು ಕಾಡಿನಲ್ಲಿ ಬಿಟ್ಟುಬಂದಿದ್ದ!
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:46 am, Tue, 18 April 23