AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆಯಂದು ನೆಂಟರಿಷ್ಟರ ಎದುರೇ ವೇದಿಕೆ ಮೇಲೆ ವಧುವಿಗೆ ಕಪಾಳಮೋಕ್ಷ ಮಾಡಿದ ವರ

ಮದುವೆ ಎಂಬುದು ಒಂದು ಸುಂದರ ಅನುಭೂತಿ, ಗಂಡೇ ಇರಲಿ ಅಥವಾ ಹೆಣ್ಣಿರಲಿ ಪ್ರತಿಯೊಬ್ಬರೂ ತಮ್ಮ ಮದುವೆಯ ಬಗ್ಗೆ ಹಲವು ಕನಸುಗಳನ್ನು ಹೊತ್ತಿರುತ್ತಾರೆ

Viral Video: ಮದುವೆಯಂದು ನೆಂಟರಿಷ್ಟರ ಎದುರೇ ವೇದಿಕೆ ಮೇಲೆ ವಧುವಿಗೆ ಕಪಾಳಮೋಕ್ಷ ಮಾಡಿದ ವರ
ವೈರಲ್ ವಿಡಿಯೋ
ನಯನಾ ರಾಜೀವ್
|

Updated on: Apr 13, 2023 | 1:02 PM

Share

ಮದುವೆ ಎಂಬುದು ಒಂದು ಸುಂದರ ಅನುಭೂತಿ, ಗಂಡೇ ಇರಲಿ ಅಥವಾ ಹೆಣ್ಣಿರಲಿ ಪ್ರತಿಯೊಬ್ಬರೂ ತಮ್ಮ ಮದುವೆಯ ಬಗ್ಗೆ ಹಲವು ಕನಸುಗಳನ್ನು ಹೊತ್ತಿರುತ್ತಾರೆ. ತನ್ನ ಪತಿಯಾದವರು ತನ್ನೆಲ್ಲಾ ಇಷ್ಟ ಕಷ್ಟಗಳಲ್ಲಿ ಜತೆಯಾಗಿರುತ್ತಾನೆ ಎನ್ನುವ ನಂಬಿಕೆ ಇರುತ್ತದೆ, ಹಾಗೆಯೇ ಯಾವಾಗಲೂ ತನ್ನ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡುವುದಿಲ್ಲ ಎನ್ನುವ ಭರವಸೆಯನ್ನೂ ಆಕೆ ಇಟ್ಟಿರುತ್ತಾಳೆ. ಆದರೆ ಮದುವೆಯ ದಿನವೇ ಆ ಕನಸಿನ ಗೋಪುರ ನುಚ್ಚುನೂರಾದಾಗ ಆಕೆಯ ಪರಿಸ್ಥಿತಿ ಏನಾಗಿರಬಹುದಲ್ಲವೇ.

ಯಾವುದೋ ಒಂದು ಮದುವೆಯಲ್ಲಿ ರಿಸೆಪ್ಷನ್ ಸಂದರ್ಭದಲ್ಲಿ ಒಂದು ಆಟವನ್ನು ಇಟ್ಟಿದ್ದರು, ವಧು ಆಟವನ್ನು ಬೇಗ ಆಡಿ ಮುಗಿಸುತ್ತಾಳೆ, ಪತಿ ತಡವಾಗಿ ಆಟವನ್ನು ಮುಗಿಸುತ್ತಾನೆ, ಪತ್ನಿ ಬೇಗ ಮುಗಿಸಿದಳು, ತಾನು ಸೋತೆ ಎನ್ನುವ ಕೋಪಕ್ಕೆ ಎಲ್ಲಾ ನೆಂಟರಿಷ್ಟರೆದುರು ವೇದಿಕೆಯಲ್ಲೇ ಆಕೆಗೆ ಕಪಾಳ ಮೋಕ್ಷ ಮಾಡಿ ಆಕೆಯ ಮನಸ್ಸು ನುಚ್ಚುನೂರಾಗುವಂತೆ ಮಾಡುತ್ತಾನೆ.

ಮತ್ತಷ್ಟು ಓದಿ: Viral News: 6 ಪತ್ನಿಯರ ಮುದ್ದಿನ ಗಂಡನಿಗೆ ಮೊದಲ ಮಗು ಯಾರಿಂದ ಪಡೆಯುವುದು ಎಂಬ ಚಿಂತೆಯಂತೆ..!

ಆದರೆ ಮಹಿಳೆಯ ಸಹಾಯಕ್ಕೆ ಯಾರೂ ಬರುವುದಿಲ್ಲ, ಆ ವ್ಯಕ್ತಿಗೆ ನೀನು ಮಾಡಿರುವುದು ತಪ್ಪು ಎಂದು ಯಾರೂ ಹೇಳುವುದಿಲ್ಲ, ಆ ಮೇಲೆ ವೇದಿಕೆಯಿಂದ ಮಹಿಳೆಯನ್ನು ಕೆಳಗಿಳಿಸಿ ಕರೆದುಕೊಂಡು ಹೋಗಲಾಗುತ್ತದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ