AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 6 ಪತ್ನಿಯರ ಮುದ್ದಿನ ಗಂಡನಿಗೆ ಮೊದಲ ಮಗು ಯಾರಿಂದ ಪಡೆಯುವುದು ಎಂಬ ಚಿಂತೆಯಂತೆ..!

ಒಂದಲ್ಲಾ ಎರಡಲ್ಲಾ ಬರೋಬ್ಬರಿ 6 ಮಹಿಳೆಯರನ್ನು ವಿವಾಹವಾದ ವ್ಯಕ್ತಿಯೊಬ್ಬನಿಗೆ ಮೊದಲ ಮಗುವನ್ನು ಯಾರಿಂದ ಪಡೆಯಲು ಎಂಬ ಚಿಂತೆ ಕಾಡುತ್ತಿದೆಯಂತೆ. ಈ ಚಿಂತೆಗೆ ಆತ ಕಂಡು ಹುಡುಕಿರುವ ಪ್ಲಾನ್​​​ ಎನು ಗೊತ್ತಾ?

Viral News: 6 ಪತ್ನಿಯರ ಮುದ್ದಿನ ಗಂಡನಿಗೆ ಮೊದಲ ಮಗು ಯಾರಿಂದ  ಪಡೆಯುವುದು ಎಂಬ ಚಿಂತೆಯಂತೆ..!
6 ಪತ್ನಿಯರ ಮುದ್ದಿನ ಗಂಡImage Credit source: Jam Press
ಅಕ್ಷತಾ ವರ್ಕಾಡಿ
|

Updated on:Apr 13, 2023 | 10:42 AM

Share

ಬ್ರೆಜಿಲ್‌: ಮದುವೆಯ ನಂತರ ತಮ್ಮ ಪೀಳಿಗೆಯನ್ನು ಮುಂದುವರಿಸಿಕೊಂಡು ಹೋಗಲು ಮಗು ಬೇಕು ಎಂಬುದು ಪ್ರತಿಯೊಂದು ದಂಪತಿಗಳ ಕನಸು. ಆದರೆ ಇಲ್ಲೊಬ್ಬ ತಮ್ಮ ವಂಶೋದ್ಧಾರಕ ಅಥವಾ ವಂಶೋದ್ಧಾರಕಿಯನ್ನು ಪಡೆಯಲು ಸಾಕಷ್ಟು ಗೊಂದಲಕ್ಕೀಡಾಗಿದ್ದಾನೆ. ಆತ ಗೊಂದಲಕ್ಕೀಡಾಲು ಪ್ರಮುಖ ಕಾರಣವೇ ಆತನ ಮುದ್ದಿನ 6 ಪತ್ನಿಯರು. ಹೌದು ಈತ ಒಂದಲ್ಲಾ ಎರಡಲ್ಲಾ ಬರೋಬ್ಬರಿ 6 ಮಹಿಳೆಯರನ್ನು ವಿವಾಹವಾಗಿದ್ದಾನೆ. ಇದೀಗಾ ಮೊದಲ ಮಗುವನ್ನು ಯಾರಿಂದ ಪಡೆಯಲಿ ಎಂಬ ಚಿಂತೆಕಾಡುತ್ತಿದ್ದು, ಇದಕ್ಕಾಗಿ ದೊಡ್ಡ ಪ್ಲಾನ್​​​ ಮಾಡಿದ್ದಾನೆ.

ಬ್ರೆಜಿಲ್‌ನ ಸಾವೊ ಪಾಲೊ ಮೂಲದ 37 ವರ್ಷದ ಆರ್ಥರ್ ಒ ಉರ್ಸೊ ಎನ್ನುವ ವ್ಯಕ್ತಿಗೆ 9 ಜನ ಪತ್ನಿಯರಿದ್ದರು.  ಅಂದರೆ 2021 ರಲ್ಲಿ 9 ಯುವತಿಯರನ್ನು ಮದುವೆಯಾಗಿದ್ದಾನೆ. ಆದರೆ ಈಗ ಮೂವರಿಗೆ ವಿಚ್ಚೇದನ ನೀಡಿದ್ದಾರೆ. ಈಗ ಆರ್ಥರ್‌ 21ರಿಂದ 51 ವರ್ಷದ ತನಕ ಇರುವ 6 ಜನ ಹೆಂಡತಿಯರನ್ನು ಹೊಂದಿದ್ದಾನೆ. ಲುವಾನಾ ಕಝಾಕಿ, ಎಮೆಲಿ ಸೌಜಾ, ವಲ್ಕ್ವಿರಿಯಾ ಸ್ಯಾಂಟೋಸ್, ಒಲಿಂಡಾ ಮಾರಿಯಾ,ಡಾಮಿಯಾನಾ ಮತ್ತು ಅಮಂಡಾ ಅಲ್ಬುಕರ್ಕ್ ಎಂಬುವವರು ಈತನ ಈಗಿರುವ ಪತ್ನಿಯರು.

ಇದನ್ನೂ ಓದಿ: ಅಂದು ಎಲ್ಲರೂ ಅಬ್ಬಾ ಇದೇನ್ ವಿಚಿತ್ರ ಬುದ್ಧಿ ಇಲ್ವಾ ಅಂದಿದ್ರು: ದೆವ್ವದ ಜತೆ ಮದುವೆಯಾಗಿದ್ದ ಮಹಿಳೆಗೆ ಈಗ ವಿಚ್ಛೇಧನ ಬೇಕಂತೆ!

ಬಾಡಿಗೆ ತಾಯ್ತನದ ನಿರ್ಧಾರ:

ಹೌದು ಆರ್ಥರ್ ತನ್ನ 6 ಪತ್ನಿಯರನ್ನು ಒಂದೇ ಸಮನಾಗಿ ಪ್ರೀತಿಸುತ್ತಿದ್ದು, ಒಬ್ಬರಿಂದ ಮೊದಲ ಮಗುವನ್ನು ಪಡೆದು ಇನ್ನೊಬ್ಬರ ಮನಸ್ಸನ್ನು ನೋಯಿಸಲು ಇಷ್ಟವಿಲ್ಲ. ಆದ್ದರಿಂದ ಬಾಡಿಗೆ ತಾಯ್ತನದ ಮೂಲಕ ಮೊದಲ ಮಗುವನ್ನು ಪಡೆಯಲು ಬಯಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಈ ಹಿಂದೆ 10 ಮಹಿಳೆಯರನ್ನು ಮತ್ತು ಅವರಲ್ಲಿ ಪ್ರತಿಯೊಬ್ಬರಿಂದ ಒಂದೊಂದು ಮಗುವನ್ನು ಪಡೆಯುವುದು ತನ್ನ ಕನಸು ಎಂದು ಹೇಳಿಕೊಂಡಿದ್ದ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

Published On - 10:42 am, Thu, 13 April 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!